ಬೆಂಗಳೂರು: ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ 23 ವರ್ಷದ ಅನ್ಯಧರ್ಮಿಯ ಯುವಕನ ಮೇಲೆ ಹಲ್ಲೆ ನಡೆಸಿ, ಮೂತ್ರ ಕುಡಿಸಿದ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ನ ಅಮಾನತುಗೊಂಡಿದ್ದಾರೆ. ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹರೀಶ್ರನ್ನು ಸಸ್ಪೆಂಡ್ ಮಾಡಲಾಗಿದೆ.
23 ವರ್ಷದ ಸಂತ್ರಸ್ತ ಯುವಕ ತೌಸೀಪ್ ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸ್ಥಳೀಯರು ಜಗಳ ಮಾಡಿದ ಆರೋಪದ ಮೇಲೆ ಠಾಣೆಗೆ ಕರೆದೊಯ್ದಿದ್ದರು. ನಂತರ ಯುವಕನ ಬಿಡುಗಡೆಗೆ ಪೊಲೀಸರು ಹಣ ಕೇಳಿದರು ಎಂದು ಅವರ ತಂದೆ ಆರೋಪಿಸಿದ್ದಾರೆ. ಆದರೆ ಬಿಡುಗಡೆ ಮಾಡುವವರೆಗೂ ಠಾಣೆಯಲ್ಲಿ ಕ್ರೂರವಾಗಿ ಹಿಂಸೆ ನೀಡಿದ್ದಾರೆ ಎಂದು ಯುವಕನ ತಂದೆ ಅಳಲು ತೋಡಿಕೊಂಡಿದ್ದಾರೆ.
ಹರೀಶ್ ಮತ್ತು ಇತರ ಇಬ್ಬರು ಪೊಲೀಸ್ ಪೇದೆಗಳು, ಅಪರಾಧ ತಂಡದ ಒಬ್ಬರು ಹೊಟ್ಟೆಗೆ ಬ್ಯಾಟ್ನಿಂದ ಹೊಡೆದರು. ಬಲವಂತವಾಗಿ ಗಡ್ಡವನ್ನು ಕತ್ತರಿಸಿ ಮೂತ್ರ ಕುಡಿಸಿದರು ಎಂದು ಯುವಕ ಘಟನೆಯನ್ನು ವಿವರಿಸಿದ್ದಾರೆ. ನನಗೆ ಕನಿಷ್ಠ 30 ಬಾರಿ ಕ್ರಿಕೆಟ್ ಬ್ಯಾಟ್ನಿಂದ ಹೊಡೆದರು ಎಂದಾ ಯುವಕ ಕುಡಿಯಲು ನೀರು ಕೇಳಿದಾಗ, ಅವರು ನನಗೆ ಮೂತ್ರ ಕುಡಿಯುವಂತೆ ಮಾಡಿದರು. ನನ್ನ ಗಡ್ಡವನ್ನೂ ಕತ್ತರಿಸಿದರು. ಇದು ನನ್ನ ನಂಬಿಕೆಯ ಭಾಗವಾಗಿರುವುದರಿಂದ ಹಾಗೆ ಮಾಡಬೇಡಿ ಎಂದು ನಾನು ಅವರನ್ನು ಬೇಡಿಕೊಂಡೆ. ಆದರೆ ಇದು ಪೊಲೀಸ್ ಠಾಣೆ ಧಾರ್ಮಿಕ ಕೇಂದ್ರವಲ್ಲ ಎಂದು ಅವರು ಹೇಳಿದರು. ನಂತರ ಪೊಲೀಸ್ ಠಾಣೆಯನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಿದರು ಎಂದು ಯುವಕ ಆರೋಪಿಸಿದ್ದಾನೆ.
ಶಾಸಕ ಜಮೀರ್ ಅಹಮದ್ ಖಾನ್ ಮಧ್ಯಸ್ಥಿಕೆಯಲ್ಲಿ ಯುವಕನನ್ನು ಬಿಡುಗಡೆಗೊಳಿಸಲಾಗಿದೆ ಎಂದು ಎಂದು ಸ್ಥಳೀಯರು ಹೇಳಿದ್ದಾರೆ. ನಂತರ ಯುವಕನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಬಿಡುಗಡೆಗೊಂಡಿದ್ದಾನೆ ಎಂದು ಯುವಕನ ತಂದೆ ಹೇಳಿರುವರು.
ಪ್ರಕರಣ ಸಂಬಂಧ ಮಧ್ಯಂತರ ವರದಿಯನ್ನು ಸಲ್ಲಿಕೆಯಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಪಶ್ಚಿಮ) ಸಂಜೀವ್ ಎಂ ಪಾಟೀಲ್ ತಿಳಿಸಿದ್ದಾರೆ. ಕರ್ತವ್ಯಲೋಪ, ಪೊಲೀಸ್ ಠಾಣೆಗೆ ವರದಿ ಮಾಡದ ಮತ್ತು ಪ್ರಕರಣವನ್ನು ದಾಖಲಿಸದ ಕಾರಣ ಹರೀಶ್ ಅವರನ್ನು ಅಮಾನತುಗೊಳಿಸಲಾಗಿದೆ. ಸಂತ್ರಸ್ತ ಯುವಕನ ಕುಟುಂಬದವರು ಮಾಡಿರುವ ಆರೋಪಗಳ ಬಗ್ಗೆ ಇಲಾಖಾ ತನಿಖೆಗೂ ಆದೇಶಿಸಲಾಗಿದೆ ಎಂದು ತಿಳಿಸಿದರು.