ಬಿಎಸ್‌ಎನ್‌ಎಲ್ ಗೆ 1.64 ಲಕ್ಷ ಕೋಟಿ ರೂ.ಗಳ ಒಂದು ಬೃಹತ್ ‘ಪುನರುಜ್ಜೀವನ’ ಪ್ಯಾಕೇಜ್‌ನ್ನು ಕೇಂದ್ರ ಸಂಪುಟ ಮಂಜೂರು ಮಾಡಿರುವುದಾಗಿ ದೂರಸಂಪರ್ಕ ಮಂತ್ರಿಗಳು ಹೇಳಿದ್ದಾರೆ. 2019ರಲ್ಲಿ ಕೂಡ ಕೇಂದ್ರ ಸಂಪುಟ ರೂ.70,000 ಕೋಟಿ ಪ್ಯಾಕೇಜನ್ನು ಮಂಜೂರು ಮಾಡಿತ್ತು. ಅದರಿಂದಾಗಿ ಅದು ಚೇತರಿಸಿಕೊಂಡು ಒಂದು ಸ್ಥಿರತೆ ಹೊಂದಿರುವ ಕಂಪನಿಯಾಗಿದೆ ಎಂಬ ವಿಶ್ವಾಸ ಮೂಡಿದೆ. ಈ ಎರಡನೇ ಪ್ಯಾಕೇಜಿನಿಂದ ಅದು ಸಮರ್ಥ ಕಂಪನಿಯಾಗುತ್ತದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. ಇದು ನಿಜವೇ? ಅಥವ ಸತ್ಯೋತ್ತರ ಕಾಲದ ಇನ್ನೊಂದು ಜುಮ್ಲಾವೇ? ಕೇಂದ್ರ ಸರಕಾರ ನಿಜವಾಗಿಯೂ ಬಿಎಸ್‌ಎನ್‌ಎಲ್ ಒಂದು ಸಮರ್ಥ ಕಂಪನಿಯಾಗ ಬಯಸುತ್ತಿದೆಯೇ? ಈ ಸಂದೇಹ ಮೂಡಲು ಒಂದು ಪ್ರಮುಖ ಕಾರಣ ಏರ್‌ಟೆಲ್, ರಿಲಯಂಸ್ ಜಿಯೊ, ವೊಡಾಫೋನ್ ಇಂಡಿಯ ಮುಂತಾದ ಖಾಸಗಿ ಕಂಪನಿಗಳು 5ಜಿ ಬಗ್ಗೆ ಮಾತಾಡುತ್ತಿರುವವಾಗ ಈ ‘ಎರಡನೇ ಪುನರುಜ್ಜೀವನ’ ಪ್ಯಾಕೇಜ್ ಕೂಡ 2019ರ ಮೊದಲ ಪ್ಯಾಕೇಜಿನಲ್ಲಿಯೂ ಹೇಳಿದ್ದ 4ಜಿಯ ಬಗ್ಗೆಯೇ ಮಾತಾಡುತ್ತಿದೆ. 5ಜಿಯ ಪ್ರಸ್ತಾಪವೂ ಇಲ್ಲ. ವಾಸ್ತವವಾಗಿ ಸರಕಾರ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ (ಬಿಎಸ್‌ಎನ್‌ಎಲ್‌ಯು) ಜುಲೈ 28ರಂದು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಸರಕಾರ ಇಂತಹ ತಪ್ಪು ಸಂದೇಶವನ್ನು ಏಕೆ ಕೊಡುತ್ತಿದೆ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದೂ ಅದು ಹೇಳಿದೆ. ಅರ ಪ್ರಕಾರ ನಿಜ ಸಂಗತಿಯೆಂದರೆ ಈ 1.64 ಲಕ್ಷ ಕೋಟಿ ರೂ.ಗಳಲ್ಲಿ 4ಜಿಗೆ ಸರಕಾರ ಒಂದು ಪೈಸೆಯನ್ನೂ ಖರ್ಚು ಮಾಡುವುದಿಲ್ಲ, ಉಳಿದ ಮೊತ್ತದಲ್ಲಿಯೂ ಒಂದು ಪೈಸೆಯೂ ಸರಕಾರೀ ಖಜಾನೆಯಿಂದ ಬರುವುದಿಲ್ಲ. 4ಜಿ ಒದಗಿಸಲು 1.13ಲಕ್ಷ ಕೋಟಿ ರೂ. ಎಷ್ಟು ನಿಜ? 23 ಅಕ್ಟೋಬರ್‌ನ ಮೊದಲ ಪ್ಯಾಕೇಜಿನಲ್ಲಿ ಬಿಎಸ್‌ಎನ್‌ಎಲ್‌ಗೆ…