ಟಿಎಂ ಕೃಷ್ಣನ್ ಮತ್ತು ಆರ್‌ಎಲ್‌ವಿ ರಾಮಕೃಷ್ಣನ್ ಅವರಿಗೆ ಪುಕಾಸ ಬೆಂಬಲ

ಬೆಂಗಳೂರು : ಖ್ಯಾತ ಕಲಾವಿದರಾದ ಟಿಎಂ ಕೃಷ್ಣ, ಹಾಗೂ ಆರ್. ಎಲ್.ವಿ. ರಾಮಕೃಷ್ಣನ್ ರವರ ಮೇಲೆ ನಡೆದ ಜಾತಿ ದಾಳಿಯನ್ನು  ಪುರೋಗಮನ ಕಲಾ ಸಾಹಿತ್ಯ ಸಂಘ (ಪುಕಸಾ) ಬಲವಾಗಿ ಖಂಡಿಸಿದೆ.

ಆಧುನಿಕ ಕಾಲದಲ್ಲಿ, ಕಲಾ ಪ್ರಕಾರಗಳು ಮಾನವೀಯತೆಯ ಶ್ರೇಷ್ಠ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ಎಲ್ಲಾ ರೀತಿಯ ಮಾನವ ವಿರೋಧಿ ತಾರತಮ್ಯದ ಆಚರಣೆಗಳು ಮತ್ತು ಪದ್ಧತಿಗಳನ್ನು ತಿರಸ್ಕರಿಸುವ ಉನ್ನತ ಮಟ್ಟಗಳಿಗೆ ತಮ್ಮನ್ನು ನವೀಕರಿಸಿಕೊಳ್ಳುತ್ತಿರುವಾಗ,  ಸವರ್ಣೀಯತೆಯ, ಬ್ರಾಹ್ಮಣ್ಯ/ವೈದಿಕಶಾಹಿಯ ಕಠೋರ ತಾರತಮ್ಯದ ಚಿಂತನೆಗಳನ್ನು ಉಳಿಸಿಕೊಳ್ಳಲು ಕೆಲವರ ಪ್ರಯತ್ನಗಳು ಅತ್ಯಂತ ಖಂಡನೀಯ ಎಂದು ಪುರೋಗಮನ ಕಲಾ ಸಾಹಿತ್ಯ ಸಂಘವು (ಪುಕಸಾ) ಅಭಿಪ್ರಾಯಪಟ್ಟಿದೆ.

ಜಾತಿ ತಾರತಮ್ಯ ಉತ್ತುಂಗದಲ್ಲಿದ್ದ ಊಳಿಗಮಾನ್ಯ ಕಾಲದ ತಾರತಮ್ಯದ ಪದ್ಧತಿಯನ್ನು ಉಳಿಸಿಕೊಂಡಿರುವ ಸಾಂಪ್ರದಾಯಿಕ ಕಲಾ ಪ್ರಕಾರಗಳು ಸಹ ನವೋದಯ, ಆಧುನಿಕತೆಯ ಮತ್ತು  ಮೌಲ್ಯ ವ್ಯವಸ್ಥೆಗಳಿಗೆ ಅನುಗುಣವಾಗಿ ಪರಿಷ್ಕರಿಸಲ್ಪಟ್ಟಿದೆಯಲ್ಲದೆ, ಎಲ್ಲಾ ವರ್ಗದ ಜನರ ನಡುವೆ ಜನಪ್ರಿಯವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಜಾತಿ ತಾರತಮ್ಯದ ಸಂಕುಚಿತ  ನೆಲೆಗಳಲ್ಲಿ ಕಲೆಯನ್ನು ಹತ್ತಿಕ್ಕುವ, ಸಮಾಜದಲ್ಲಿ ‘ಗಣ್ಯ’ರೂ ಎಂದನಿಸಿಕೊಂಡವರ ಪ್ರಯತ್ನಗಳನ್ನು ವಿರೋಧಿಸಬೇಕೆನ್ನುವುದನ್ನೂ ಪುಕಸಾ ಎತ್ತಿ ಹಿಡಿದಿದೆ.

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಬ್ರಾಹ್ಮಣ್ಯದ ಮತ್ತು ಜಾತೀಯತೆಯ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಮತ್ತು ಮೇಲ್ವರ್ಗದ ಗರ್ಭಗುಡಿಯಿಂದ ಸಾಮಾನ್ಯ ಜನರ ಸಮೀಪಕ್ಕೆ ಸಂಗೀತವನ್ನು ಕೊಂಡೊಯ್ಯುವಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ಸಂಗೀತಗಾರ ಟಿ.ಎಂ. ಕೃಷ್ಣನ್ ರ ವಿರುದ್ಧ ಒಂದು ವಿಭಾಗವು ತೋರುತ್ತಿರುವ ಅಸಹಿಷ್ಣುತೆಯು, ಕಲೆಯ ಕ್ಷೇತ್ರದಲ್ಲಿ ನೆಲೆಗೊಂಡಿರುವ ಜಾತಿ ಶ್ರೇಷ್ಠತೆಯ ವ್ಯಸನದ ಇತ್ತೀಚಿನ ಉದಾಹರಣೆಯಾಗಿದೆ.ಕಲೆಯ ಗಣ್ಯತೆಯ ಅಥವಾ ಶ್ರೇಷ್ಠತೆಯ ವಿರುದ್ಧದ ಹೋರಾಟಗಳಲ್ಲಿ ಪುಕಸಾವು, ಟಿಎಂ ಕೃಷ್ಣನ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿದೆ.

ಇದೇ ರೀತಿಯ ಅವಮಾನವನ್ನು ಮೋಹಿನಿಯಾಟ್ಟಂ ಕ್ಷೇತ್ರದ ಪ್ರತಿಭಾವಂತರಾದ ಆರ್.ಎಲ್.ವಿ ರಾಮಕೃಷ್ಣನ್ ಅವರು ಸಹ ಜಾತಿ ಮತ್ತು ಬಣ್ಣದ ಕಾರಣದಿಂದ ಎದುರಿಸಬೇಕಾಯಿತು.ಆಧುನಿಕ ಜಗತ್ತು ಕಪ್ಪು ಜನರು ಮತ್ತು ಹಿಂದುಳಿದ ಜಾತಿಯವರು ತಮ್ಮ ಸೌಂದರ್ಯ ಸಂಕಲ್ಪಗಳಿಂದ ಹೊರಗಿರಬೇಕು ಎನ್ನುವ ಶ್ರೇಷ್ಠತೆಯ ವ್ಯಸನದ ಹಕ್ಕುಗಳನ್ನು ಒಪ್ಪಿಕೊಳ್ಳಲು ಸಾಧ್ಯವೂ ಇಲ್ಲ, ಅದಕ್ಕೆ ಯಾವುದೇ ಬಾಧ್ಯತೆಯೂ ಇರುವುದಿಲ್ಲ.

ಶ್ರೀ ರಾಮಕೃಷ್ಣನ್ ಅವರ ವಿರುದ್ಧ ಉಂಟಾದ ಅತ್ಯಂತ ಹೀನಾಯವಾದ ಜಾತೀಯತೆಯ ದಾಳಿಯನ್ನು ಪುಕಸಾ ಬಲವಾಗಿ ಖಂಡಿಸುತ್ತದೆಯಲ್ಲದೆ, ಅವರ ಅದ್ಭುತ ಕಲಾ ಸಾಧನೆಯನ್ನು ಶ್ಲಾಘಿಸುತ್ತಾ, ಅವರ ಪರವಾಗಿ ಒಗ್ಗಟ್ಟನ್ನು ವ್ಯಕ್ತಪಡಿಸುತ್ತದೆ.

ತಾರತಮ್ಯದ ಎಲ್ಲಾ ಗಡಿಗಳನ್ನು ಭೇದಿಸುವ ಕಲೆಯ ಉದಾತ್ತ ಅಭಿವ್ಯಕ್ತಿ ಸಾಧ್ಯತೆಗಳು ಮತ್ತು ಕಲಾ ಮಾಧ್ಯಮವು ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡುವ ಪ್ರಯತ್ನಗಳಿಗೆ ಒತ್ತಾಯಿಸುವುದಲ್ಲದೆ, ಕಲೆಯ ಕ್ಷೇತ್ರಗಳಲ್ಲಿ ಜಾತಿ ತಾರತಮ್ಯದ ಕಳಂಕವನ್ನು ಹರಡುವವರನ್ನು ಪುಕಸಾ (ಬೆಂಗಳೂರು) ಅರ್ಹ ರೀತಿಯಲ್ಲಿ ತಿರಸ್ಕಾರದಿಂದ ಕಡೆಗಣಿಸುತ್ತದೆ ಎಂದು ಅಧ್ಯಕ್ಷ ಸುರೇಶ್‌ ಕೋಡೂರು, ಕಾರ್ಯದರ್ಶಿ ಸುದೇವನ್‌ ಪುತ್ತಂಚಿರ ಜಂಟಿ ಪ್ರಕಟಣೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *