ನೋಟು ಅಮಾನ್ಯೀಕರಣ: ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠದಿಂದ ನವೆಂಬರ್‌ 9ಕ್ಕೆ ವಿಚಾರಣೆ

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರವು 2016ರ ನವೆಂಬರ್‌ 8ರಂದು ಕೈಗೊಂಡ ನೋಟು ಅಮಾನ್ಯೀಕರಣದ ನಿರ್ಧಾರದ ಪ್ರಕ್ರಿಯೆಯನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಎಸ್‌ ಎ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಮುಂದಿನ ನವೆಂಬರ್ 9ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಸಾಂವಿಧಾನಿಕ ಪೀಠದ ಮುಂದೆ ಸಮಸ್ಯೆ ಉದ್ಭವಿಸಿದಾಗ ಉತ್ತರಿಸುವುದು ಅದರ ಕರ್ತವ್ಯ ಎಂದು ನ್ಯಾಯಪೀಠ ಹೇಳಿದೆ.

ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾದ 58 ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಸರ್ಕಾರದ ನೀತಿ ನಿರ್ಧಾರಗಳ ನ್ಯಾಯಾಂಗ ಪರಾಮರ್ಶೆಯಲ್ಲಿ “ಲಕ್ಷ್ಮಣ ರೇಖೆ” ಬಗ್ಗೆ ತಿಳಿದಿದೆ. ಎಂದಿರುವ ನ್ಯಾಯಾಲಯ “ಈ ವಿಷಯವು ಕೇವಲ ನೋಟು ನಿಷೇಧದ ತೀರ್ಮಾನ ತಾತ್ವಿಕವೇ ಅಥವಾ ತಾತ್ವಿಕವಲ್ಲವೇ ಎಂಬ ಕುರಿತು ಪರಿಶೀಲನೆಯ ಅಗತ್ಯವಿದೆ” ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ ಪೀಠವು, ಈ ವಿಚಾರವನ್ನು ಎರಡೂ ಕಡೆಯವರು ಒಪ್ಪದ ಕಾರಣ ವಿಷಯವನ್ನು ಪರಿಶೀಲಿಸುವ ಅಗತ್ಯವಿದೆ. ಲಕ್ಷ್ಮಣ ರೇಖೆ ಎಲ್ಲಿದೆ ಎಂದು ನಮಗೆ ಯಾವಾಗಲೂ ತಿಳಿದಿದೆ. ಆದರೆ ಅದನ್ನು ಮಾಡಿದ ವಿಧಾನವನ್ನು ಪರಿಶೀಲಿಸಬೇಕು. ಅದನ್ನು ನಿರ್ಧರಿಸಲು ನಾವು ವಕೀಲರನ್ನು ಕೇಳಬೇಕು ಎಂದು ಪೀಠ ಹೇಳಿದೆ.

ಹಾಗೆಯೇ, ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ಕುರಿತು ವಿಸ್ತೃತವಾದ ಅಫಿಡವಿಟ್‌ ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕಿಗೆ ನೋಟಿಸ್ಸು ನೀಡಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಪ್ಪು ಹಣದ ವಿರುದ್ಧ ಸಮರ ಸಾರುವ ಗುರಿಯನ್ನು ಇಟ್ಟುಕೊಂಡು 2016ರ ನವೆಂಬರ್ 8ರಂದು ರೂ.500 ಹಾಗೂ ರೂ.1000 ಮುಖಬೆಲೆಯ ನೋಟುಗಳನ್ನು ನಿಷೇಧಗೊಂಡಿವೆ ಎಂದು ರಾತ್ರಿ 8 ಗಂಟೆಗೆ ಘೋಷಣೆ ಮಾಡಿದರು. ಇದರ ಬಳಿ ದೇಶವ್ಯಾಪಿ ತೀವ್ರತರವಾದ ಸಂಕಷ್ಟಕ್ಕೆ ಜನತೆ ಈಡಾಗಿದ್ದರು. ಇದು ಇಡೀ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿಯೂ ಗಂಭೀರ ಪರಿಣಾಮ ಬೀರಿದವು.

Donate Janashakthi Media

Leave a Reply

Your email address will not be published. Required fields are marked *