ನವದೆಹಲಿ | ಜವಳಿ ರಫ್ತುದಾರರನ್ನು ಬೆಂಬಲಿಸಲು ಸುಂಕ ರಹಿತ ಆಮದು ವಿಸ್ತರಿಸಿದ ಕೇಂದ್ರ

ನವದೆಹಲಿ: ಜವಳಿ ರಫ್ತುದಾರರನ್ನು ಬೆಂಬಲಿಸಲು,  ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಶೇ 50ರಷ್ಟು ಸುಂಕವನ್ನು ವಿಧಿಸಿದ ಬೆನ್ನಲ್ಲೇ  ಭಾರತ ಸರ್ಕಾರ ಸುಂಕ ರಹಿತ ಹತ್ತಿಯ ಆಮದನ್ನು ಇನ್ನೂ ಮೂರು ತಿಂಗಳು (ಡಿ.31 ರವರೆಗೆ) ವಿಸ್ತರಿಸಿ ಗುರುವಾರ ಅದೇಶಿಸಿದೆ.

ಆ.19 ರಿಂದ ಸೆ.30 ರವರೆಗೆ ಹತ್ತಿ ಆಮದಿನ ಮೇಲೆ ಸುಂಕ ವಿನಾಯಿತಿಯನ್ನು ನೀಡಿ ಹಣಕಾಸು ಸಚಿವಾಲಯವು ಆ. 18ರಂದು ಆದೇಶಿಸಿತ್ತು. ಇದೀಗ ಇನ್ನೂ ಮೂರು ತಿಂಗಳು ವಿಸ್ತರಿಸಿ ಸೆ.30ರಿಂದ ಡಿ.31ರವರೆಗೆ ವಿನಾಯಿತಿ ನೀಡಿದೆ.

ಇದನ್ನೂ ಓದಿ: ನಾಡಹಬ್ಬ ದಸರಾ ಉದ್ಘಾಟನೆಗೆ ಬಾನುಮುಷ್ತಾಕ್ ಆಯ್ಕೆ ಸ್ವಾಗತಾರ್ಹ ಬಿಜೆಪಿ ಹಾಗೂ ಮತಾಂಧರ ವಿರೋಧಕ್ಕೆ ಕೆಪಿಆರ್‌ಎಸ್‌ ಖಂಡನೆ

ಆ.27ರಿಂದ ಅನ್ವಯವಾಗುವಂತೆ ಅಮೆರಿಕ ಭಾರತದ ಉತ್ಪನ್ನಗಳ ಮೇಲೆ ಶೇ 50ರಷ್ಟು ಸುಂಕವನ್ನು ಜಾರಿಗೊಳಿಸಿದೆ. ಇದರಲ್ಲಿ ಜವಳಿ, ಆಭರಣ, ರತ್ನದ ಆಭರಣ, ಲೆದರ್‌ ಉತ್ಪನ್ನಗಳೂ ಸೇರಿವೆ.

ಈಗ ಭಾರತ ಸರ್ಕಾರ ಸುಂಕ ರಹಿತ ಹತ್ತಿ ಆಮದಿಗೆ ಕ್ರಮ ಕೈಗೊಂಡಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಕಚ್ಚಾ ಹತ್ತಿಯ ಲಭ್ಯತೆಯನ್ನು ಹೆಚ್ಚಿಸುತ್ತದೆ. ಜತೆಗೆ ಹತ್ತಿ ಬೆಲೆಯನ್ನು ಸ್ಥಿರಗೊಳಿಸುತ್ತದೆ. ಈ ಮೂಲಕ ಸಿದ್ಧಪಡಿಸಿದ ಜವಳಿ ಉತ್ಪನ್ನಗಳ ಮೇಲಿನ ಹಣದುಬ್ಬರದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಇದನ್ನೂ ನೋಡಿ: ಧರ್ಮಸ್ಥಳ | ದೂರುದಾರರಿಗೆ ರಕ್ಷಣೆ – ಸಾಕ್ಷಿ ರಕ್ಷಣಾ ಸ್ಕೀಮ್ ಏನು ಹೇಳುತ್ತದೆ?Janashakthi Media

Donate Janashakthi Media

Leave a Reply

Your email address will not be published. Required fields are marked *