ಬಿಸಿಲ ಧಗೆ ಮತ್ತು ಹಾವುಗಳ ಬದುಕು

 ಸಂಧ್ಯಾ ಸೊರಬ

ಏರುತ್ತಿರುವ ಬಿಸಿಲ ಕಾವು ಸೂರ್ಯನ‌ ಪ್ರಖರತೆಯಿಂದಾಗಿ ಮನುಷ್ಯ ಸೇರಿದಂತೆ ಇತರೆ ಜೀವಿಗಳ ಜೀವವೂ ಹೈರಾಣಾಗಿದ್ದಷ್ಟೇ ಅಲ್ಲ, ಬಿಸಿಲ ಧಗೆ ಮನುಷ್ಯನ ಬದುಕಿಗೆ ಮಾರಕವೂ ಆಗಿರುವ ಅದೆಷ್ಟೋ ಘಟನೆಗಳು ನಿದರ್ಶನವಿದ್ದಾಗಲೇ ಅಲ್ಲೆಲ್ಲೋ ಮನ್ಯಮೃಗಗಳು ಹಕ್ಕಿಪಕ್ಷಿಗಳು ಕೀಟಗಳು ಸೇರಿದಂತೆ ಸಣ್ಣ‌ ಜೀವಗಳಿಂದ ಹಿಡಿದು ಆನೆಯಂತಹ ದೊಡ್ಡ ಜೀವಿಗಳು ಸಹ ನೀರಿಗಾಗಿ ಹಾಹಾಕಾರ ಪಟ್ಟು ಸಾವನ್ನಪ್ಪಿರುವುದು ಗೊತ್ತೇಯಿದೆ. ಬಿಸಿಲು ಮನುಷ್ಯ ಮತ್ತು ಇತರೆ ಜೀವಿಗಳ ಬದುಕಿಗೇ ಕಂಟಕವಾಗಿದೆ. ಹಾವು

ಈಗಷ್ಟೇ ಮಳೆರಾಯ ಅಲ್ಲಲ್ಲಿ ಸಿಂಚಿಸುತ್ತಿದ್ದರೂ ಬಿಸಿಲ ಕಾವಾರುವಷ್ಟೇನೂ ನೆಲ‌‌ ತಂಪಾಗಿಲ್ಲ ಅಂತ‌ ಅಂಬೋಣ‌. ಇನ್ನು ಕಳೆದ ವಾರದಲ್ಲಿ ಹಾವು ಕಡಿತದಿಂದಾಗಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಒಂದೇ ವಾರದಲ್ಲಿ 227 ಮಂದಿಗೆ ಹಾವು ಕಚ್ಚಿದ್ದು ಈ ಪೈಕಿ ಮೂವರು ಮೃತಪಟ್ಟಿದ್ದಾರೆ. ಇದೀಗ ಆರೋಗ್ಯ ಇಲಾಖೆ ಅಗತ್ಯ ಔಷಧಗಳು ಆಸ್ಪತ್ರೆಗಳಲ್ಲಿ ಸಂಗ್ರಹಿಸಿಡುವಂತೆ ಸೂಚಿಸಿದೆ ಅನ್ನೋದು ಇಲ್ಲಿ ಗಮನಾರ್ಹ. ಬಿಸಿಲ ಧಗೆ

ಹಾಗಾದರೆ, ಅಲ್ಲೆಲ್ಲೋ ಪೊದೆ,ಹುತ್ತ,ಗುಹೆಯ ಸಂಧಿ,ಬಿಲ ಅಂತಹ ಸ್ಥಳಗಳಲ್ಲಿ ವಾಸವಿದ್ದ ಹಾವುಗಳು ಬಿಸಿಲಬೇಗೆಯಿಂದ ತತ್ತರಿಸಿಕೊಳ್ಳಲಾಗದೇ ಇತ್ತ ತಂಪನ್ನು ಅರಿಸಿ ನಮ್ಮ ಮನುಷ್ಯರಂತೆಯೇ ತಂಪಾದ ಸ್ಥಳವನ್ಬು ಅರಿಸಿ ತಾವಿರುವ ಬಿಸಿಲ ಜಾಗವನ್ನು ಬಿಟ್ಟು ಹೊರಬರುತ್ತಿರುವ ಪರಿಣಾಮ ಇದಕ್ಕೆಲ್ಲಾ ಕಾರಣ.

ಇದು ಸಾಮಾನ್ಯ ಕಾರಣವಾದರೂ ವೈಜ್ಞಾನಿಕವಾಗಿ ಇತ್ತ‌ ಗಮನ ಹರಿಸಲೇಬೇಕಿದೆ.ಕಾರಣ, ಇದು “ಬಿಸಿಲ ಧಗೆ ಮತ್ತು ಜೀವಗಳ ಬದುಕು” ಎನ್ನುವ ಸೂಕ್ಷ್ಮ ಅವಲೋಕನಕ್ಕೆ ಕಾರಣವಾಗಿದೆ.

ಈ ಬಗ್ಗೆ ಜನಶಕ್ತಿ ಮೀಡಿಯಾ ಹಾವುಗಳು ಏಕೆ?ಹೀಗೆ ಬರುತ್ತವೆ?ಸಾವುಗಳಾತ್ತಿವೆ ಎಂಬುದನ್ನು ಜನಪರ ಕಾಳಜಿಗಾಗಿ ಮಾಹಿತಿ ನೀಡಲು ಉರಗತಜ್ಞರನ್ನು ಮಾತನಾಡಿಸಿತು.ಉರಗ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂದು ನೋಡುವುದಾದರೆ, ಬಿಸಿಲ ಧಗೆ

ಜೂನ್‌ನಿಂದ ಸೆಪ್ಟೆಂಬರ್‌ನಲ್ಲಿ ನಮ್ಮ ರಾಜ್ಯದ ಮಾನ್ಸೂನ್‌ ಶುರುವಾಗೋದ್ರಿಂದ ರೈತಾಪಿ ವರ್ಗಗಳ ಚಟುವಟಿಕೆ ಈ ಸಂದರ್ಭದಲ್ಲಿ ಹೆಚ್ಚು. ಇದು ಹಾವುಗಳ ಸಂತಾನೋತ್ಪತ್ತಿ ಸಮಯವಾಗಿದ್ದು, ಹಾವಿನ ಮೊಟ್ಟೆಯಿಂದ ಮರಿಗಳು ಹೊರಬರುವ ಸಮಯ.

ಇದನ್ನು ಓದಿ : ಪ್ರಜ್ವಲ್‌ನನ್ನು ಪ್ರಧಾನಿ ನರೇಂದ್ರ ಮೋದಿಯೇ ರಕ್ಷಿಸುತ್ತಿದ್ದಾರೆ: ಕಾಂಗ್ರೆಸ್ ಟ್ವೀಟ್

ಈ ಹಾವುಗಳ ಗುಣ ಹೇಗೆ ಅಂದ್ರೆ, ಅವುಗಳು ಹೆಚ್ಚು ಬಿಸಿಯನ್ನಾಗಲೀ, ಚಳಿಯನ್ನಾಗಲೀ ತಡೆದುಕೊಳ್ಳುವುದಿಲ್ಲ. ನಮ್ಮ ರಾಜ್ಯದಲ್ಲಿವ ವಿವಿಧ ಜಾತಿಗಳ ಹಾವುಗಳು ಹೆಚ್ಚಾಗಿವೆ.ಹವಾಮಾನ ವೈಪರೀತ್ಯವೂ ಈ ಹಾವುಗಳ ಮೇಲೆ ಪರಿಣಾಮ ಬೀರಿಯೇ ಬಿರುತ್ತದೆ. ಇಲ್ಲಿ ನಾವು ಥಂಡಿಗಿಂತ ಬಿಸಿಲಿಗೆ ಹಾವು ಹೊರಗೆ ಹೆಚ್ಚು ಯಾಕೆ ಬರ್ತಿದ್ದಾವೆ ಅನ್ನೋದ್ರ ಬಗ್ಗೆ ಚರ್ಚಿಸೋಣ.

ಉರಗ ತಜ್ಞ ನಾಗರಾಜ ಬೆಳ್ಳೂರು ಹೇಳುವ ಪ್ರಕಾರ “ ಹಾವುಗಳು ನಿಶಾಚರಿ ಜಾತಿಗೂ ಸೇರಿದ ಜೀವಿಗಳಾದ್ದರಿಂದ ಬಿಸಿಲು ಅಂತ ಹೆಚ್ಚಾಗಿ ಈ ಸಮಯದಲ್ಲಿ ಜನರು ರಾತ್ರಿ ಹೊತ್ತು ಗಾಳಿಗೆ ಅಂತ ಹೊರಗೆ ಅಲ್ಲಲ್ಲಿ ಮಲಗೋದು ಕಂಡು ಬರುತ್ತದೆ. ಹೆಚ್ಚಾಗಿ ಹೀಗೆ ಬಯಲಲ್ಲಿ ವಿಶಾಲ ಜಾಗದಲ್ಲಿ ಮನೆ ಟೆರೆಸ್‌ ಮೇಲೆ ಅಲ್ಲಲ್ಲಿ ಮಲಗೋದನ್ನು ಸಾಧ್ಯವಾದಷ್ಟು ಅವಾಯ್ಡ್‌ ಮಾಡಬೇಕು. ಸಾಧ್ಯವಾಗದೇ ಇದ್ದಾಗ ಹೀಗೆ ಮಲಗೋ ಸಂದರ್ಭ ಬಂದಲ್ಲಿ ಸೊಳ್ಳೆ ಪರದೆಯಂತಹ ಪರದೆಗಳನ್ನು ಬಳಸುವುದು ಒಳ್ಳೆಯದು.

ರಾತ್ರಿ ಹೊತ್ತು ತಿರುಗಾಟ ಕಡಿಮೆ ಮಾಡಬೇಕು. ಹೋಗಬೇಕಾದಲ್ಲಿ ಹೆಚ್ಚಾಗಿ ಟಾರ್ಚ್‌ ಬಳಸಬೇಕು.ಕರ್ನಾಟಕದಲ್ಲಿ ಎಲ್ಲಾ ಜಾತಿಯ ಹಾವುಗಳಿದ್ದರೂ, ನಾಗರಹಾವು ಹೆಚ್ಚಾಗಿ ಕಂಡುಬರುತ್ತದೆ. ಕೊಳಕುಮಂಡಲ, ಕಟ್ಟಾವು ಸೇರಿದಂತೆ ಇವುಗಳು ಹೆಚ್ಚು ಓಡಾಡುವುದು ಕಂಡುಬರುವುದಿಲ್ಲ ಎಂದ ಮಾತ್ರಕ್ಕೆ ಅವುಗಳ ಸಂಖ್ಯೆ ಕಡಿಮೆಯಿದೆ ಅಂತ ಏನಲ್ಲ. ಬಿಸಿ ಅಂತ ಸಡನ್ನಾಗಿ ಎಲ್ಲೆಲ್ಲೋ ಸಂಧಿ,ಮೂಲೆಯಂತ ಜಾಗಗಳಲ್ಲಿ ತೋಟಗದ್ದೆಗಳಲ್ಲಿ ಕೈಹಾಕಬಾರದು. ಬಿಸಿಲಾದರೂ ರೈತಾಪಿ ಚಟುವಟಿಕೆ ನಡೆಸುವವರು ಮತ್ತು ಬಯಲಲ್ಲಿ ಹೆಚ್ಚಾಗಿ ಸಂಚರಿಸುವವರು ಉದ್ದನೆಯ ಶೂಸ್‌ ಬಳಸಬೇಕೆಂದು ಸಲಹೆ ನೀಡಿದ್ದಾರೆ.

ಇನ್ನು ಉರಗ ತಜ್ಞ ಸ್ನೇಕ್‌ ಶ್ಯಾಮ್‌ ಅವರ ಪ್ರಕಾರ, “ಹಾವುಗಳೀಗೂ ಈಗ ತಂಪೇ ಬೇಕು, ವಿಐಪಿಗಳಂತಹ ದೊಡ್ಡ ಜನರಿಗಿಂತ ಹೆಚ್ಚಾಗಿ ಕೂಲಿ ಕೆಲಸ ಮಾಡುವವರಿಗೆ, ರೈತರಿಗೆ ಹಾವುಗಳು ಕಚ್ಚೋದು ಹೆಚ್ಚು ಎನ್ನುತ್ತಾರೆ. ಸ್ನೇಕ್‌ ಶ್ಯಾಮ್‌, ಮುಖ್ಯವಾಗಿ ಮನೆಯಲ್ಲಿ ಕೆಲಸ ಮಾಡುವವರಿಗೆ ಸೇರಿದಂತೆ ಗೃಹಿಣಿಯರಿಗೂ ಎಚ್ಚರಿಕೆ ಹಾಗೂ ಸೂಕ್ಷ್ಮವಾಗಿರುವಂತೆ ಎಚ್ಚರಿಕೆಯ ಮಾತುಗಳನ್ನು ಜನಶಕ್ತಿ ಮೀಡಿಯಾ ಮೂಲಕ ನೀಡಿದ್ದಾರೆ. ಬಿಸಿಲ ಧಗೆ

“ ಪಾತ್ರೆ ತೊಳೆದ ಮೇಲೆ ಬುಟ್ಟಿಯಲ್ಲಿ, ಪಾತ್ರೆ ಇಡುವ ಜಾಗ, ಸಿಲಿಂಡರ್‌, ವಾಷಿಂಗ್‌ ಮೆಷಿನ್‌ ಕೆಳಗೆ, ಫ್ರಿಢ್ಜ್‌ ಅಕ್ಕಪಕ್ಕ ಕೆಳಗೆ ಬಚ್ಚಲು ಮನೆಯ ಮೂಲೆ ಹೀಗೆ ಕೈತೋಟ ಸೇರಿದಂತೆ ಚೂರು ತಂಪೆನಿಸುವ ಜಾಗದಲ್ಲೂ ಒಮ್ಮೊಮ್ಮೆ ಫ್ಯಾನ್‌ ಎಸಿ ಕೂಲರ್‌ಗಳ ಬಳಿಯೂ ಹಾವುಗಳು ತಂಪಿಗಾಗಿ ಬರೋದು ಸಹಜ. ಹೀಗಾಗಿ ಇಂತಹ ಸ್ಥಳಗಳಲ್ಲಿ ಸಡನ್ನಾಗಿ ಕೈಹಾಕಬಾರದು. ನೋಡಿಕೊಂಡು ಕೆಲಸ ಮಾಡಬೇಕು. ಬಿಸಿಲ ಧಗೆ

ಇದನ್ನು ನೋಡಿ : ಮೋದಿ ಅವರ ತೀರ್ಮಾನಗಳು ಕಾರ್ಪೊರೇಟ್‌ ಕಂಪನಿಗಳ ಪರ, ಕರ್ಮಿಕರ ಪರ ಅಲ್ಲ – ಬಾಬು ಮ್ಯಾಥ್ಯೂ ಆರೋಪ Janashakthi Media

Donate Janashakthi Media

Leave a Reply

Your email address will not be published. Required fields are marked *