ಹೈದರಾಬಾದ್: ಏಪ್ರಿಲ್ 12 ಶನಿವಾರದಂದು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ ಪಂಜಾಬ್ ಕಿಂಗ್ಸ್ ನೀಡಿದ 246 ರನ್‌ಗಳ ಬೃಹತ್ ಗುರಿಯನ್ನು ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಚೇಸ್ ಮಾಡಿ ಟೂರ್ನಿಯ ಅತಿದೊಡ್ಡ ಚೇಸಿಂಗ್ ಇನ್ನಿಂಗ್ಸ್ ಎಂಬ ದಾಖಲೆ ಬರೆದಿದೆ. ಐಪಿಎಲ್
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಟಾಪ್ ಆರ್ಡರ್ ಹಾಗೂ ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟಾಯ್ನಿಸ್ ಅಬ್ಬರದಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಕಲೆಹಾಕಿ ಸನ್‌ರೈಸರ್ಸ್ ಹೈದರಾಬಾದ್‌ಗೆ 246 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಐಪಿಎಲ್
ಈ ಬೃಹತ್ ಗುರಿಯನ್ನು ಸನ್‌ರೈಸರ್ಸ್ ಹೈದರಾಬಾದ್ 171 ರನ್‌ಗಳ ಅಬ್ಬರದ ಓಪನಿಂಗ್ ಜತೆಯಾಟ, ಅದರಲ್ಲಿಯೂ ಅಭಿಷೇಕ್ ಶರ್ಮ ದಾಖಲೆಯ ಇನ್ನಿಂಗ್ಸ್ ನೆರವಿನಿಂದ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 247 ರನ್ ಬಾರಿಸಿ ಇನ್ನೂ 9 ಎಸೆತ ಬಾಕಿ ಇರುವಾಗಲೇ 8 ವಿಕೆಟ್‌ಗಳ ಗೆಲುವು ದಾಖಲಿಸಿತು. ಐಪಿಎಲ್
ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ಕಾರ್ಮಿಕರ ವೇತನ ಪರಿಷ್ಕರಣೆ – ಕರಡು ಅಧಿಸೂಚನೆಯಲ್ಲಿ ಏನಿದೆ?
ಸನ್‌ರೈಸರ್ಸ್ ಹೈದರಾಬಾದ್ ಪರ ಎಂದಿನಂತೆ ಟ್ರಾವಿಸ್ ಹೆಡ್ ಜತೆ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಸಾಲು ಸಾಲು ಕಳಪೆ ಇನ್ನಿಂಗ್ಸ್ ಬಳಿಕ ಕಮ್‌ಬ್ಯಾಕ್ ಮಾಡಿದರು. ಕೆಲವೊಂದಷ್ಟು ಜೀವದಾನ, ನೋ ಬಾಲ್‌ನಲ್ಲಿ ಔಟ್‌ಗಳಂತಹ ಲಕ್ ಫ್ಯಾಕ್ಟರ್ ಜೊತೆ ಅಭಿಷೇಕ್ ಶರ್ಮಾ ರೌದ್ರಾವತಾರದ ಬ್ಯಾಟಿಂಗ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಬೃಹತ್ ಮೊತ್ತ ಕಲೆಹಾಕಿಯೂ ಸೋಲುವಂತೆ ಮಾಡಿತು.
55 ಎಸೆತಗಳಲ್ಲಿ 14 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ 141 ರನ್ ಬಾರಿಸಿದ ಅಭಿಷೇಕ್ ಶರ್ಮಾ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ಸಹ ಬರೆದರು.
ಇನ್ನು ಶತಕ ಬಾರಿಸಿದ ಸಂದರ್ಭದಲ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ ತಮ್ಮ ಜೇಬಿನಿಂದ ಚೀಟಿಯೊಂದನ್ನು ತೆಗೆದು ಪ್ರದರ್ಶಿಸಿದರು. ಈ ಚೀಟಿ ನೋಡಿ ಎಲ್ಲರೂ ಹೊಸ ರೀತಿಯ ಸೆಲೆಬ್ರೇಷನ್ ಎಂದು ಏನು ಬರೆದಿರಬಹುದು ಎಂಬ ಕುತೂಹಲಕ್ಕೊಳಗಾಗಿದ್ದರು. ಅಭಿಷೇಕ್ ಶರ್ಮಾ ʼದಿಸ್ ಒನ್ ಇಸ್ ಫಾರ್ ಆರೆಂಜ್ ಜೆರ್ಸಿʼ ( ಇದು ಸನ್‌ರೈಸರ್ಸ್ ಹೈದರಾಬಾದ್ ಅಭಿಮಾನಿಗಳಿಗಾಗಿ ) ಎಂದು ಬರೆದಿದ್ದರು. ಈ ಮೂಲಕ ಸತತ ಸೋಲು ಕಂಡರೂ ತಮ್ಮನ್ನು ಬೆಂಬಲಿಸಿದ ತಂಡಕ್ಕೆ ಅಭಿಷೇಕ್ ಶರ್ಮಾ ಶತಕವನ್ನು ಅರ್ಪಿಸಿದರು.
ಇದನ್ನೂ ನೋಡಿ: ಅಂಬೇಡ್ಕರ್ ಜನ್ಮ ದಿನದ ಅಂಗವಾಗಿ ಅಂಬೇಡ್ಕರ್ ಚಿಂತನ ಕಾರ್ಯಕ್ರಮ