ಬೆಂಗಳೂರು| ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆ ಆರಂಭ

ಬೆಂಗಳೂರು: ಕಳೆದ ಒಂದು ವಾರದಿಂದ ಚಳಿ ಅಷ್ಟೇನೂ ಇಲ್ಲ. ಮಂಜು ಕೂಡ ಕಡಿಮೆಯಾಗಿದೆ. ಆದರೆ, ಸಂಜೆಯಾದ್ರೆ ಬೇಸಿಗೆಯಂತೆ ಸೆಕೆ ಕಾಡುತ್ತಿದೆ. ಮಧ್ಯಾಹ್ನ ಆದ್ರೆ ಬಿಸಿಲಿನ ತಾಪ ಜನರನ್ನು ಸುಡುತ್ತಿದೆ. ಅಷ್ಟರಮಟ್ಟಿಗೆ ತಾಪಮಾನ ಏರಿಕೆ ಕಾಣುತ್ತಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿ ದಿಢೀರನೆ ಕಡಿಮೆಯಾಗಿ, ಗರಿಷ್ಠ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಬಿಸಿಲು ಕೂಡ ಹೆಚ್ಚಾಗಿತ್ತಿದೆ. ಆದರೆ, ಇದನ್ನು ಕಂಡು ಬೇಸಿಗೆ ಬಂತು ಎಂದು ಭಾವಿಸುವುದು ಬೇಡ, ಇದು ಹವಾಮಾನ ವೈಪರೀತ್ಯವಷ್ಟೇ ಎಂದು ಹವಾಮಾನ ಇಲಾಖೆ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ : ಸಹಿ ಹಾಕದೆ ತಿರಸ್ಕರಿಸಿದ ರಾಜ್ಯಪಾಲರು

ಕರ್ನಾಟಕದತ್ತ ವಿವಿಧ ದಿಕ್ಕುಗಳಿಂದ ಮಾರುತಗಳು ಬೀಸುತ್ತಿರುವ ಕಾರಣ, ಇವು ಶೀತಗಾಳಿಯಾಗಿವೆ. ಹಾಗಾಗಿ ಚಳಿಯ ವಾತಾವರಣ ಕೂಡ ಬಿಸಿಲಿನ ವಾತಾವರಣಕ್ಕೆ ತಿರುಗುತ್ತಿವೆ. ಹೀಗಾಗಿ ಚಳಿ ಕಡಿಮೆಯಾಗಿ ಬಿಸಿಲು ಹೆಚ್ಚಾಗುತ್ತಿದೆ. ಇದೀಗ ಮುಂಜಾನೆ ಕೂಡ ಮಂಜು ಆವರಿಸುವುದು ಕಡಿಮೆಯಾಗಿದೆ. ಮಧ್ಯಾಹ್ನಕ್ಕೆಲ್ಲ ಬಿಸಿಲು ಸುಡುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದ್ದು, ಮುಂದಿನ ಒಂದು ವಾರದವರೆಗೆ ತಾಪಮಾನ ಹೆಚ್ಚಾಗಲಿದೆ ಎಂದು ಇಲಾಖೆ ಹೇಳಿದೆ.

ರಾಜ್ಯದಾದ್ಯಂತ ಕೆಳ ಉಷ್ಣವಲಯದ ಮಟ್ಟದಲ್ಲಿ ಹಗುರದಿಂದ ಮಧ್ಯಮ ಪೂರ್ವ ಅಥವಾ ಆಗ್ನೇಯ ಹವಾಮಾನವಿರಲಿದೆ. ಮುಂದಿನ 24 ಗಂಟೆಗಳ ಕಾಲ ಕರ್ನಾಟಕದ ಒಳನಾಡಿನಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನ ಕಂಡುಬರಲಿದೆ. ಒಟ್ಟಾರೆ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಂಜು ಅಥವಾ ಹೆಚ್ಚಾಗಿ ಬೀಳುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವೆಡೆ ಹೆಚ್ಚಾಗಿ ಮಂಜು ಬೀಳುವ ಸಾಧ್ಯತೆ ಇದೆ. ಫೆಬ್ರವರಿ 12ರವರೆಗೆ ಇದೇ ರೀತಿಯ ಹವಾಮಾನ ಪರಿಸ್ಥಿತಿ ರಾಜ್ಯದಲ್ಲಿ ಕಂಡುಬರಲಿದೆ.

ರಾಜ್ಯದ ಒಳನಾಡಿನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ 2 ಅಥವಾ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ಕನಿಷ್ಠ ತಾಪಮಾನದಲ್ಲಿ ಹೆಚ್ಚು ಬದಲಾವಣೆ ಇಲ್ಲ. ಬೆಂಗಳೂರು ನಗರ ಮತ್ತು ನೆರೆಹೊರೆಯ ಸ್ಥಳೀಯ ಪ್ರದೇಶಗಳಲ್ಲಿ ಮುಂದಿನ ಎರಡು ದಿನ ಶುಭ್ರ ಆಕಾಶ ಕಂಡುಬರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ದಟ್ಟ ಮಂಜು ಬೀಳಬಹುದು. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32 ಡಿಗ್ರಿ ಸೆಲ್ಸಿಯಸ್‌ ಹಾಗೂ 16 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ. ಫೆಬ್ರವರಿ ತಿಂಗಳ ಕೊನೆಯವರೆಗೆ ಸಾಮಾನ್ಯವಾಗಿ ಚಳಿಗಾಲವೇ ಇರಲಿದ್ದು, ಮುಂದಿನ ತಿಂಗಳಿನಿಂದ ಬೇಸಿಗೆ ಶುರುವಾಗಲಿದೆ.

ಇದನ್ನೂ ನೋಡಿ: ‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’ ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ

Donate Janashakthi Media

Leave a Reply

Your email address will not be published. Required fields are marked *