ಸೂಕ್ತವಲ್ಲದ ಲಿಂಗ ಸಂಬಂಧಿ ಪದಗಳ ಕಡಿವಾಣಕ್ಕೆ ಪದಕೋಶ ಬಿಡುಗಡೆ: ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

ನವದೆಹಲಿ: ನ್ಯಾಯಾಲಯದ ಆದೇಶಗಳು ಮತ್ತು ಕಾನೂನು ದಾಖಲೆಗಳಲ್ಲಿ ಭಾಷೆ ಬಳಕೆಯ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಸಂಬಂಧಿಸಿ ಪದ ಬಳಕೆ ವಿಚಾರದಲ್ಲಿ ತರತಮಕ್ಕೆ ಒಳಗಾಗುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪದಕೋಶದ ಅವಶ್ಯವಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಲಿಂಗ ಸಂವೇದನೆ ಹಾಗೂ ಆಂತರಿಕ ದೂರುಗಳ ಸಮಿತಿಯು ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ಭಾರತದ ನ್ಯಾಯಾಲಯಗಳಲ್ಲಿ ನೀಡಲಾಗುತ್ತಿರುವ ತೀರ್ಪುಗಳಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಉಲ್ಲೇಖಿಸಲಾಗುತ್ತದೆ. ಆಶ್ಚರ್ಯವೆಂದರೆ ನ್ಯಾಯಾಧೀಶರು, ನ್ಯಾಯವಾದಿಗಳು ಹಾಗೂ ಹಲವು ಸಲ ಮಹಿಳೆಯರು ಕೂಡಾ ಅಂತಹದ್ದೇ  ಪದಗಳನ್ನು ಬಳಕೆ ಮಾಡುತ್ತಾರೆ. ಅದರೆ ಅವು ಪಿತೃಪ್ರಧಾನವಾದಿ ಪದಗಳೆಂದು ಪರಿಗಣಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಕತ್ತಲ ಸುರಂಗದೊಳಗೊಂದು ಬೆಳಕಿನ ಕೋಲು : ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯದ ಲಿಂಗಸಂವೇದನೆಯ ಕುರಿತ ಸುಪ್ರೀಂ ತೀರ್ಪು

ಮಹಿಳೆಯರನ್ನು ಕುರಿತಾಗಿ ಲಘುವಾದ ಮತ್ತು ಅನುಚಿತವಾದ ಭಾಷಾ ಪ್ರಯೋಗಗಳ ಬಳಕೆ ಜಾಲ್ತಿಯಲ್ಲಿವೆ. ಇದರ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೂಕ್ತವಲ್ಲದ ಪದಗಳ ಪದಕೋಶ ಬಿಡುಗಡೆ ಮಾಡುವ ಯೋಜನೆಯೊಂದನ್ನು ಹೊಂದಲಾಗಿದೆ ಎಂದು ಡಿ ವೈ ಚಂದ್ರಚೂಡ್‌ ಪ್ರಕಟಿಸಿದ್ದಾರೆ.

ಕಲ್ಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಅವರ ಅಧ್ಯಕ್ಷತೆಯ ಸಮಿತಿಯು ಕಾನೂನು ಪದಕೋಶ ಸಿದ್ಧಪಡಿಸಲಿದ್ದಾರೆ. ಮದ್ರಾಸ್ ಉಚ್ಚ ನ್ಯಾಯಾಲಯದ  ನಿವೃತ್ತ ನ್ಯಾಯಮೂರ್ತಿ ಪ್ರಭಾ ಶ್ರೀದೇವನ್, ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ಪ್ರಸ್ತುತ ಕೋಲ್ಕತ್ತಾದಲ್ಲಿರುವ ಪಶ್ಚಿಮ ಬಂಗಾಳ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಜುಮಾ ಸೇನ್ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: ಅಮ್ಮನ ಪ್ರತಿಜ್ಞೆ : ನ್ಯಾ. ಕೆ. ಚಂದ್ರು ಅವರ “ನನ್ನ ದೂರು ಕೇಳಿ” – ಆಯ್ದ ಭಾಗ

“ಕೆಲ ವರ್ಷಗಳ ಹಿಂದೆ ಲಿಂಗ ಕುರಿತಾದ ಸಂವಾದದ ವೇಳೆ ಸೂಕ್ತವಲ್ಲದ ಪದಗಳ ಕಾನೂನು ಶಬ್ದಕೋಶಕ್ಕೆ ಸಂಬಂಧಿಸಿದಾಗಿತ್ತು. ಮಹಿಳೆಯನ್ನು ಉಪಪತ್ನಿ ಎಂದು ಉಲ್ಲೇಖಿಸಿರುವ ತೀರ್ಪುಗಳನ್ನು ನಾನು ನೋಡಿದ್ದೇನೆ. ಕೌಟುಂಬಿಕ ಹಿಂಸಾಚಾರ ಕಾಯಿದೆ ಮತ್ತು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಎಫ್‌ಐಆರ್‌ಗಳನ್ನು ರದ್ದುಪಡಿಸುವ ತೀರ್ಪುಗಳಲ್ಲಿ ಮಹಿಳೆಯರನ್ನು ʼಕೀಪ್ಸ್‌ʼ (ಇಟ್ಟುಕೊಂಡವಳು) ಎಂದು ಕರೆದಿರುವುದನ್ನು ಗಮನಿಸಿದ್ದೇನೆ.

ಅಸಮರ್ಪಕ ಪದಗಳನ್ನು ಕಾನೂನು ಪರಿಭಾಷೆಯಿಂದ ತೊಡೆದುಹಾಕುವ ಕ್ರಮವು ಯಾವುದೇ ನ್ಯಾಯಾಧೀಶರನ್ನು ಗುರಿಯಿಡುವ ಅಥವಾ ಅವರನ್ನು ಕ್ಷುಲ್ಲಕಗೊಳಿಸುವ ಉದ್ದೇಶದಿಂದ ಕೂಡಿಲ್ಲವೆಂದವರು ಸ್ಪಷ್ಟಪಡಿಸಿದರು.

ಕೇವಲ ನ್ಯಾಯಾಧೀಶರಾಗಿ ಮಾತ್ರವಲ್ಲದೆ ಇಂತಹ ಪದಗಳ ಬಳಕೆ ಲಿಂಗ ಸಂವೇದನೆಗೆ ಅರ್ಥ ಮಾಡಿಕೊಳ್ಳಲೂ ಅಗತ್ಯವಾಗಿದೆ. ಈ ವಾಸ್ತವತೆಗಳ ಬಗ್ಗೆ ನಾವು ಮುಕ್ತಮನಸ್ಸನ್ನು ಹೊಂದದೆ ಇದ್ದಲ್ಲಿ ಒಂದು ಸಮಾಜವಾಗಿ ನಾವು ವಿಕಸನ ಹೊಂದುವುದು ಕಷ್ಟಕರವಾಗಲಿದೆ ಎಂದು ಹೇಳಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *