ಶಿರಾ: ಹೊಸೂರು ಗ್ರಾಮದಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಡಿಪೊ ಬಳಿ ಶಾಲಾ ಸಮಯಕ್ಕೆ ಸರಿಯಾಗಿ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸಮಯ
ಇಲ್ಲಿಗೆ ತಾವರೆಕೆರೆ, ರಂಗನಹಳ್ಳಿ, ಭೂತಪ್ಪನ ಗುಡಿ, ದ್ವಾರಳು, ಕಳುವರಹಳ್ಳಿ, ಹೊಸಹಳ್ಳಿ, ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದು, ಬಸ್ಗಳಿಲ್ಲದೆ ಪರದಾಡುವಂತಾಗಿದೆ.
ಇದನ್ನೂ ಓದಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ಕಳ್ಳತನ
ಬಸ್ ವ್ಯವಸ್ಥೆ ಮಾಡುವಂತೆ ಒಂದು ವರ್ಷದಿಂದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿಭಟನೆಗೆ ಮುಂದಾದರೆ ಕೇವಲ 2ರಿಂದ 3 ತಿಂಗಳು ಮಾತ್ರ ಬಸ್ ವ್ಯವಸ್ಥೆ ಕಲ್ಪಿಸುತ್ತಾರೆ. ಮತ್ತೆ ಅದೇ ಸಮಸ್ಯೆ, ಶಾಶ್ವತವಾಗಿ ಬಸ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಸಂಜೆ 4.30ಕ್ಕೆ ಬಿಟ್ಟರೆ ವಿದ್ಯಾರ್ಥಿಗಳು ಬಸ್ಗಾಗಿ ಎರಡು ಗಂಟೆ ಕಾಯಬೇಕಿದೆ. ಇದರಿಂದಾಗಿ ಗ್ರಾಮಗಳಿಗೆ ವಾಪಾಸ್ ಹೋಗುವ ವೇಳೆಗೆ ಕತ್ತಲಾಗಿದ್ದು ಸಂಕಷ್ಟ ಪಡುವಂತಾಗಿದೆ. ಅಧಿಕಾರಿಗಳು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಇದನ್ನೂ ನೋಡಿ: ಸರ್ಕಾರಿ ನೌಕರರ ಸಂಘದ ಚುನಾವಣೆ | ನುಸುಳಿದ ಅಕ್ರಮ ಮತದಾರರು| ಕೋರ್ಟ್ ಬೇಡ ಅಂದ್ರು ನಡೆದ ಚುನಾವಣೆ Janashakthi Media