ಬೆಂಗಳೂರು : ಕಳೆದ ಮೂರು ವಾರಗಳಿಂದ ತರಗತಿಗಳು ನಡೆಯುತ್ತಿಲ್ಲ ಹಾಗೂ ಪರೀಕ್ಷಾ ಫಲಿತಾಂಶಗಳು ಸರಿಯಾದ ಸಮಯಕ್ಕೆ ಪ್ರಕಟಿಸಿಲ್ಲ ಎಂದು ಆರೋಪಿಸಿ ಮಹಾರಾಣಿ ಕಾಲೇಜ್ ವಿದ್ಯಾರ್ಥಿಗಳು ಕಾಲೇಜು ಮುಂದೆ ಪ್ರತಿಭಟನೆ ನಡೆಸಿದರು. ಮೂರು
ಪರೀಕ್ಷಾ ಫಲಿತಾಂಶಗಳು ಸರಿಯಾದ ಸಮಯಕ್ಕೆ ಪ್ರಕಟಿಸಿಲ್ಲ. ತಡವಾಗಿ ಪ್ರಕಟವಾಗುತ್ತಿರುವ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಅನೇಕ ತಪ್ಪುಗಳಿವೆ. ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಫಲಿತಾಂಶದಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸಬೇಕು. ಹಾಗೆಯೇ ಕಾಲೇಜಿನ ಶೌಚಾಲಯಗಳು ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ಇವೆ. ಅವನ್ನು ಅಭಿವೃದ್ಧಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎನ್ಇಪಿ-2020 ಅಡಿಯಲ್ಲಿ ಹೊಸದಾಗಿ ಪರಿಚಯಿಸಲಾದ ಓಪನ್ ಎಲೆಕ್ಟಿವ್ ವಿಷಯಗಳ ತರಗತಿಗಳು ಈ ಕಾಲೇಜಿನಲ್ಲಿ ನಡೆಯುತ್ತಿಲ್ಲ. ಅಲ್ಲದೇ ಅಥಿತಿ ಉಪನ್ಯಾಸಕರು ನಡೆಸುತ್ತಿರುವ ನ್ಯಾಯಯುತ ಹೋರಾಟದಿಂದಾಗಿ 3 ವಾರಗಳಿಂದ ತರಗತಿಗಳು ನಡೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ : ಮೂರು ವರ್ಷದ ಶೈಕ್ಷಣಿಕ ಪ್ರವೇಶ ಶುಲ್ಕ ಒಟ್ಟಿಗೆ ಕಟ್ಟಲು ಆದೇಶ: ಎಐಡಿಎಸ್ಒ ಪ್ರತಿಭಟನೆ
ವಿಶ್ವವಿದ್ಯಾನಿಲಯದ ಆವರಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶೌಚಾಲಯದಿಂದ ದುರ್ವಾಸನೆ, ಕುಡಿಯುವ ನೀರಿನ ಸೌಲಭ್ಯವಿಲ್ಲ, ಶೌಚಾಲಯದಲ್ಲಿ ನೀರು ಇಲ್ಲ ಎಂದು ವಿದ್ಯಾರ್ಥಿಗಳು ದೂರಿದರು. ತರಗತಿ ಕೊಠಡಿಗಳ ನಿರ್ವಹಣೆಯೂ ಇಲ್ಲ, ಒಂದು ಕೊಠಡಿಯನ್ನು ಪಾರಿವಾಳಗಳು ಆಕ್ರಮಿಸಿಕೊಂಡಿವೆ ಮತ್ತು ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆಗಳನ್ನು ಹೇಳಿಕೊಂಡರು. ಮೂರು
ಪ್ರತಿಭಟನಾ ಸ್ಥಳಕ್ಕೆ ಕುಲಪತಿ ಎಲ್.ಗೋಮತಿದೇವಿ ಭೇಟಿ ನೀಡಿ ಒಂದು ವಾರದಲ್ಲಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದ ನಂತರ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ವಾಪಸ್ಸ ಪಡೆದಿದ್ದಾರೆ.
ವಿಡಿಯೊ ನೋಡಿ: ಹೆಂಚು ಕಾರ್ಮಿಕರ ಬದುಕು ಬೇಯುತ್ತಿದೆ: ಇವರ ಬಾಳಿಗೆ ಬೆಳಕು ಯಾವಾಗ? Janashakthi Media