ಬಿಸಿಎಮ್ ಇಲಾಖೆಯ ಮಹಾ ಭ್ರಷ್ಟಾಚಾರದ ತನಿಖೆಗಾಗಿ ಸಿಇಓಗೆ ಎಸ್ಎಫ್ಐ ದೂರು
ಹಾವೇರಿ: ತಾಲ್ಲೂಕಿನ ದೇವಗಿರಿ ಹತ್ತಿರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೆಲವು ವಸತಿ ನಿಲಯಗಳಲ್ಲಿ ಊಟದ ಮೆನ್ಯೂ ಚಾರ್ಟ್ ಬದಲಾವಣೆ ಖಂಡಿಸಿ, ಭ್ರಷ್ಟಾಚಾರದ ತನಿಖೆಗಾಗಿ ಒತ್ತಾಯಿಸಿ, ಉತ್ತಮ ಗುಣಮಟ್ಟದ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯ ಕಾರ್ಯಕರ್ತರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ರುಚಿ ಬಿಂದಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಸತಿ ನಿಲಯದಲ್ಲಿ ಸರಿಯಾಗಿ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿಲ್ಲ, ಕೊಳೆತ ತರಕಾರಿಗಳನ್ನು ನೀಡುತ್ತಾರೆ. ಅನುದಾನ ನೆಪದಿಂದ ಊಟಕ್ಕೆ ಕಡಿತ ಮಾಡಿದ್ದಾರೆ. ಪುಸ್ತಕಗಳು, ಆಟದ ಸಾಮಗ್ರಿಗಳನ್ನು ಮೂರು ವರ್ಷ ಕಳೆದರು ನೀಡಿಲ್ಲ. ಮೆನ್ಯೂ ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ಗ್ರಂಥಾಲಯವನ್ನು ಬಳಕೆಗೆ ನೀಡುತ್ತಿಲ್ಲ ಇಲಾಖೆಯ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ಅಧಿಕಾರಿಗಳ ವಸತಿ ನಿಲಯಕ್ಕೆ ಬರುವುದಿಲ್ಲ ನಮ್ಮ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಹೋರಾಟ ಮಾಡಲಾಗುತ್ತದೆ ಶಾಶ್ವತ ಪರಿಹಾರಕ್ಕಾಗಿ ಅಧಿಕಾರಿಗಳ ಮುಂದಾಗುತ್ತಿಲ್ಲ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ನೂರಾರು ವಿದ್ಯಾರ್ಥಿಗಳು ದೂರದ ಊರಿನಿಂದ ಬಂದು ವಸತಿ ನಿಲಯದಲ್ಲಿ ಆಶ್ರಯ ಪಡೆದ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಲಬುರಗಿ| ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಶಿಕ್ಷಕ ಬಂಧನ
“ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರ ನೀಡಿದ ವಸತಿ ನಿಲಯದ ಊಟದ ಮೆನ್ಯೂ ಚಾರ್ಟ್ ಪ್ರಕಾರ ಟೆಂಡರ್ ಧರಕ್ಕೂ ಮಾರುಕಟ್ಟೆಯಲ್ಲಿರು ಪ್ರಸ್ತುತ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ” ಎಂದು ಇತ್ತೀಚೆಗೆ ಜಿಲ್ಲಾದ್ಯಂತ ಪ್ರತ್ಯೇಕವಾಗಿ ಹಾವೇರಿ ಬಿಸಿಎಮ್ ಇಲಾಖೆಯ ಕೆಲವು ವಸತಿ ನಿಲಯಗಳು ತಮ್ಮದೇ ಆದ ಮೆನ್ಯೂ ಚಾರ್ಟ್ ತಯಾರಿಸಿಕೊಂಡು ಆಹಾರಕ್ಕೆ ಕತ್ತರಿ ಹಾಕಿದ್ದು ವಿದ್ಯಾರ್ಥಿ ವಿರೋಧಿಯಾಗಿದೆ.
ಈ ಹಿಂದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮತಿಗಾಗಿ ಕಾಯುತ್ತಿರುವ ಬೆನ್ನಲ್ಲೇ ಜೆಲ್ಲಾದ್ಯಂತ ಹಾಸ್ಟೆಲ್ ಗಳಲ್ಲಿ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಕತ್ತರಿ ಹಾಕುತ್ತಿರವುದು ನಿಲ್ಲಬೇಕು ಎಂದು ಎಸ್ಎಫ್ಐ ದೂರ ನೀಡಿ ತಡೆಗಟ್ಟಿತ್ತು ಆದರೆ ಕೆಲವು ವಸತಿ ನಿಲಯಗಳು ಬಿಸಿಎಮ್ ಇಲಾಖೆ ರಾಜ್ಯ ಆಯುಕ್ತರ ಆದೇಶ ಉಲ್ಲಂಘನೆ ಮಾಡಿ ವಿದ್ಯಾರ್ಥಿಗಳು ತಿನ್ನುವ ಅನ್ನಕ್ಕೆ ಕನ್ನ ಹಾಕಿದ್ದಾರೆ.
ಆಯುಕ್ತರ ಅದೇಶದ ಪ್ರಕಾರ ವಿದ್ಯಾರ್ಥಿಗಳಿಗೆ ಪೌಷ್ಟಿಕಾಹಾರ ದೊರಕುವಂತೆ ಆಯ ಸಮಯಕ್ಕೆ ತಕ್ಕಂತೆ ರೊಟ್ಟಿ, ಚಪಾತಿ, ತರಕಾರಿ ಪಲ್ಯಗಳು, ದೋಸೆ, ಇಡ್ಲಿ, ಅವಲಕ್ಕಿ, ವಾಂಗಿಬಾತ್, ಮೆಂತ್ಯ ಬಾತ್, ಅಲೂಬಾತ್, ಉಪ್ಪಿನಕಾಯಿ, ಚಹಾ, ಮೊಳೆಕೆಕಾಳು, ಸೊಪ್ಪಿನ ಸಾರು, ಮೊಟ್ಟೆ, ಬಾಳೆಹಣ್ಣು, ಎಗ್ ಫ್ರೈಡ್ ರೈಸ್, ವೆಜ್ ಫ್ರೈಡ್ ರೈಸ್, ವೆಜ್ ಕುರ್ಮಾ, ಪ್ರತಿ ಬುಧವಾರ ಚಿಕನ್ ವಿತರಣೆ ಮಾಡಬೇಕು.
ಆಯಾ ಋತುಮಾನಗಳಲ್ಲಿ ಲಭ್ಯವಾಗುವ ಕಾಳುಗಳು (ಉದಾ: ಅವರೇಕಾಳು, ಅಲಸಂದೇ ಕಾಳು ಇತ್ಯಾದಿ) ತರಕಾರಿಗಳು ಮತ್ತು ಹಣ್ಣುಗಳನ್ನು ಕಡ್ಡಾಯವಾಗಿ ಉಪಯೋಗಿಸುವುದು.
ಸಿಹಿ ತಿಂಡಿಗಳು : 01ನೇ ಶುಕ್ರವಾರ – ಶ್ಯಾವಿಗೆ ಪಾಯಸ 02ನೇ ಶುಕ್ರವಾರ – ಹೋಳಿಗೆ 3ನೇ ಶುಕ್ರವಾರ – ಕುಟ್ಟಿದ ಹುಗ್ಗಿ 4ನೇ ಶುಕ್ರವಾರ – ಶಿರಾ 5ನೇ ಶುಕ್ರವಾರ – ಸಜ್ಜಕ ವಿತರಣೆ ಮಾಡಬೇಕೆಂದು ಆದೇಶವಿದೆ.
ಆದರೆ ಜಿಲ್ಲೆಯಲ್ಲಿ ಆಯುಕ್ತರ ನಿಯಮಗಳನ್ನು ಉಲ್ಲಂಘನೆ ಮಾಡಿ ಪ್ರತ್ಯೇಕವಾಗಿ ತಮ್ಮ ಇಷ್ಟದಂತೆ ಊಟದ ಮೆನ್ಯೂ ಚಾರ್ಟ್ ಬದಲಾವಣೆ ಮಾಡಿದ್ದಾರೆ. ಕೇವಲ ಅನ್ನ ಸಾಂಬಾರ, ಚಿತ್ರಾನ್ನ, ಪಲಾವ್, ಚಪಾತಿ, ಸೌತೆಕಾಯಿ ಪಲ್ಯ, 1ನೇ ಶುಕ್ರವಾರ ಹೆಸರು ಬೇಳೆ ಪಾಯಸ, 3ನೇ ಶುಕ್ರವಾರ ಕೇಸರಿ ಬಾತ್ (ಶಿರಾ), 5ನೇ ಶುಕ್ರವಾರ- ಜಾಮೂನ್, 2ನೇ ಶುಕ್ರವಾರ- ಸಜ್ಜಕ, 4ನೇ ಶುಕ್ರವಾರ- ಗೋಧಿ ಹುಗ್ಗಿ, ಪ್ರತಿ ತಿಂಗಳು 1ನೇ ಮತ್ತು 3ನೇ ಬುಧವಾರದೆಂದು ಚಿಕನ್ ಊಟವನ್ನು ನೀಡುವುದು ಎಂದು ತರಕಾರಿ, ಕಿರಾಣಿ ಸೇರಿದಂತೆ ಅನೇಕ ಖರೀದಿ ವಸ್ತುವಿನಲ್ಲಿ ದುಡ್ಡು ಉಳಿಸಿ ಲಕ್ಷ ಲಕ್ಷ ರೂಪಾಯಿಗಳನ್ನು ವಸತಿ ನಿಲಯ ಮೇಲ್ವಿಚಾರಕರು ಹಗಲು ದರೋಡೆ ನಡೆಸಿ ಲೂಟಿ ಮಾಡುತ್ತಿದ್ದಾರೆ.
ಇಷ್ಟೊಂದು ಮಹಾ ಭ್ರಷ್ಟಾಚಾರ ನಡೆಯುತ್ತಿದರು ಸಂಬಂಧಿಸಿದ ಅಧಿಕಾರಿಗಳು ಕಣ್ಣು ಮುಚ್ಚಿಕುಳಿತುಕೊಂಡಿದ್ದಾರೆ. ಉಪ ಲೋಕಾಯುಕ್ತರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಂಡು ತಮ್ಮ ಮನೆಯಲ್ಲಿದ ತಟ್ಟೆ, ಲೋಟ್ ತಂದಿದ್ದಾರೆ ವ್ಯವಸ್ಥೆ ಸರಿಯಾಗಿ ನಡೆಸಿಕೊಂಡು ಅವರು ಹೋದ ನಂತರ ಎಲ್ಲಾ ರೀತಿಯ ಬದಲಾವಣೆ ವಿದ್ಯಾರ್ಥಿಗಳಿಗೆ ಅನುಮಾನ ಕಾಡತೊಡಗಿದೆ ಆದರಿಂದ ಪ್ರೆಶ್ನೆ ಮಾಡುತ್ತಿದ್ದಾರೆ.
ಆದರೆ ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಲ್ಲಿ ಪ್ರೆಶ್ನೆ ಮಾಡುವವರನ್ನು ಟಾರ್ಗೆಟ್ ಮಾಡುವುದು, ಸಂಘಟನೆಯ ಮುಖಂಡರನ್ನು ಬಿಟ್ಟುಕೊಳುದಿರುವುದು ಮಹಾ ಭ್ರಷ್ಟಾಚಾರದಲ್ಲಿ ತೊಡಗಿದರುವುದು ಅನುಮಾನವೇ ಇಲ್ಲ ಆದರಿಂದ ಮಾನ್ಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಎಸ್ಎಫ್ಐ ಒತ್ತಾಯಿಸುತ್ತದೆ.
ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ ಯನ್ನು ಕನಿಷ್ಠ 3500/ರೂ ಗಳಿಗೆ ಹೆಚ್ಚಿಸಬೇಕು. ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತಿದಿನದ ಮೂರೊತ್ತಿನ ಊಟಕ್ಕೆ ಕೇವಲ 60-70 ರೂ ಗಳಂತೆ ತಿಂಗಳಿಗೆ 1850 ರೂಗಳನ್ನು ಮಾತ್ರ ನೀಡಲಾಗುತ್ತಿದೆ. ಎಲ್ಲ ಆಹಾರ ಪದಾರ್ಥಗಳು, ಗ್ಯಾಸ್, ಬೆಲೆ ಏರಿಕೆ ಆಗಿದೆ. ಆದರೂ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಸರ್ಕಾರ ಹೆಚ್ಚಿಸಿಲ್ಲ.
ಇದರಿಂದ ರಾಜ್ಯದ ವಿದ್ಯಾರ್ಥಿಗಳು ಪೌಷ್ಠಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಜೈಲಿನಲ್ಲಿರುವ ಕೈದಿಗಳಿಗಳ ಆಹಾರಕ್ಕೆ ಪ್ರತಿದಿನ 450 ರಂತೆ ಒಂದು ತಿಂಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವ ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ ಮಾಸಿಕ 3500 ರೂಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುನಿಲ್ ಕುಮಾರ್ ಎಲ್, ಪ್ರಶಾಂತ್ ಎಚ್, ಗುಡ್ಡಪ್ಪ ಎನ್ ಜಿ, ಪ್ರವೀಣ ಕೆ, ಕೃಷ್ಣ ಎಸ್, ಬಸವನಗೌಡ ಕೆ, ಮಧುಸೂದನ್ ಎಮ್ ಸಿದ್ದಲಿಂಗೇಶ ಆರ್, ಕಲ್ಲನಗೌಡ ಡಿ, ವಿನಯ್ ಹೆಚ್,ರವಿ ಆರ್ ಡಿ, ಸಚಿನ್ ಎಲ್ ಸಿ, ಅಭಿಷೇಕ್ ಎಸ್ ಡಿ, ಸಂದೀಪ್ ಎ ಕೆ, ಸುನೀಲಗೌಡ್ರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಎಂಪುರನ್ ಸಿನಿಮಾದ 25 ಸೀನ್ ಗಳ ಕತ್ತರಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನಡೆ, ಹಿಂದುತ್ವದ ಮೇಲುಗೈ? Janashakthi