ಬೆಂಗಳೂರು: 9 ನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕರು ಹಲ್ಲೆ ಮಾಡಿದ ಘಟನೆ ಅಕ್ಟೋಬರ್ 14 ರಂದು ನಗರದ ಸುಂಕದಕಟ್ಟೆಯ ಖಾಸಗಿ ಶಾಲೆಯೊಂದಲ್ಲಿ ನಡೆದಿದ್ದು, ಶಿಕ್ಷಕರ ವಿರುದ್ದ ಪೋಷಕರು ಆಕ್ರೋಶ ಹಾಕಿದ್ದಾರೆ.
ಎರಡು ದಿನ ಸ್ಕೂಲ್ ಗೆ ಬಂದಿಲ್ಲ ಎಂಬ ಕಾರಣಕ್ಕೆ ಪಿವಿಸಿ ಪೈಪ್ ನಿಂದ ವಿದ್ಯಾರ್ಥಿಯ ಪ್ರಿನ್ಸಿಪಾಲ್ ಹಲ್ಲೆ ನಡೆಸಿದ್ದು, ಸ್ಕೂಲ್ ನ ಡಾರ್ಕ್ ರೂಂ ನಲ್ಲಿಟ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗಳೂರು
ಇದನ್ನೂ ಓದಿ: ಪೋಷಕರನ್ನು ಸರ್ಕಾರಿ ನೌಕರರು ನಿರ್ಲಕ್ಷಿಸಿದರೆ ಶೇ.10-15 ರಷ್ಟು ವೇತನ ಕಟ್
ಎರಡು ದಿನ ರಜೆ ಹಾಕಿದ್ದಕ್ಕೆ ಬಾಲಕನಿಗೆ ಬಾಸುಂಡೆ ಬರುವಂತೆ ಪ್ರಿನ್ಸಿಪಾಲ್ ಮತ್ತು ಟೀಚರ್ ಹೊಡೆದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಆಘಾತದಿಂದ ನೊಂದ ಬಾಲಕ ಇನ್ನೂ ಕೂಡ ಅದರಿಂದ ಹೊರಬರೋದಕ್ಕೆ ಆಗದೆ ವಿಚಿತ್ರವಾಗಿ ವರ್ತನೆ ನಡೆಸುತ್ತಿದ್ದಾನೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ ಐ ಆರ್ ಆದರೂ ಕೂಡ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಮಗು ತಪ್ಪು ಮಾಡಿದ್ರೆ ಪೋಷಕರಿಗೆ ಕಂಪ್ಲೆಂಟ್ ಮಾಡಬೇಕಿತ್ತು, ಅದನ್ನ ಬಿಟ್ಟು 9 ವರ್ಷದ ವಿದ್ಯಾರ್ಥಿಗೆ ಹೀಗೆ ಹಲ್ಲೆ ನಡೆಸೋದು ಎಷ್ಟು ಸರಿ.. ಇದೀಗ ಮಗು ಆಸ್ಪತ್ರೆಗೆ ಸೇರುವಂತಾಗಿದೆ. ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆ ನಡೆಸಿರೋದು ತಪ್ಪು ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ನೋಡಿ: ಉತ್ತರ ಕನ್ನಡ | ಎಮರ್ಜೆನ್ಸಿಯಲ್ಲಿ ಜೀವ ಉಳಿಸಿಕೊಳ್ಳಲು ಸುಸಜ್ಜಿತ ಆಸ್ಪತ್ರೆ ಇಲ್ಲ | ಯಮುನಾ ಗಾಂವ್ಕರ್
