ದೇವನಹಳ್ಳಿ| ಭೂ ಸ್ವಾಧೀನ ವಿರುದ್ಧ ಹೋರಾಟ ಮುಂದುವರಿಕೆ

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಟ್ಟಿರುವುದಾಗಿ ಸರ್ಕಾರದಿಂದ ಅಧಿಕೃತವಾಗಿ ಆದೇಶ ಹೊರ ಬೀಳುವವರೆಗೂ ಹೋರಾಟ ಮುಂದುವರಿಸಲು ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಧರಣಿ ಸ್ಥಳದಲ್ಲಿ ಸೆಪ್ಟೆಂಬರ್‌ 6ರಂದಯ ನಡೆದ ಸಭೆಯಲ್ಲಿ ರೈತರು ಒಮ್ಮತದಿಂದ ನಿರ್ಧರಿಸಿದ್ದಾರೆ.

ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಜಮೀನನ್ನು ಭೂಸ್ವಾಧೀನ ಕೈಬಿಟ್ಟಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ15 ರಂದು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ, ಇದುವರೆಗೂ ಯಾವುದೇ ಲಿಖಿತ ಆದೇಶ ಹೊರಡಿಸಿಲ್ಲ ಎಂದು ಹೋರಾಟಗಾರರು ಅಸಮಾಧಾನ ಹೊರ ಹಾಕಿದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು ಚನ್ನರಾಯಪಟ್ಟಣ ಹೋಬಳಿಯ ಎರಡು ಗ್ರಾಮಗಳ ರೈತರಿಗೆ ಭೂಮಿ ದರ ನಿಗದಿ ಸಭೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಿದ್ದಾರೆ ಎಂದು ಆಕ್ಷೇಪ ಎತ್ತಿದರು. ದೇವನಹಳ್ಳಿ

ಇದನ್ನೂ ಓದಿ: ಬೆಂಗಳೂರ | ಸೇವಾ ನಿರತ ಶಿಕ್ಷರಿಗೂ ಟಿಇಟಿ ಕಡ್ಡಾಯ ; ಶಿಕ್ಷಣ ತಜ್ಙರ ಅಸಮಾಧಾನ

ಭೂಸ್ವಾಧೀನ ಹಿಂಪಡೆದಿರುವ ಕುರಿತು ವಾರದೊಳಗೆ ಲಿಖಿತ ಆದೇಶ ಹೊರಡಿಸಬೇಕು. ಎಲ್ಲಾ ರೀತಿಯ ಪಾರದರ್ಶಕ ಪ್ರಕ್ರಿಯೆ ಮುಗಿಸಿ, ಡಿನೋಟಿಫೈ ಆದೇಶ ಹೊರಡಿಸಬೇಕು. ಭೂಮಿ ಬೆಲೆ ನಿಗದಿ ಸೇರಿದಂತೆ ಯಾವುದೇ ರೀತಿಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರೆಸಬಾರದು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಆಶಯಕ್ಕೆ ವಿರುದ್ಧವಾಗಿ ಸ್ವಾಧೀನ ಪ್ರಕ್ರಿಯೆ ಮುಂದುವರಿಸುತ್ತಿರುವುದು ಆಘಾತಕಾರಿ ಬೆಳವಣಿಗೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಮುಖ್ಯಮಂತ್ರಿ ಘೋಷಣೆಯ ವಿರುದ್ಧ ಮಾತನಾಡುತ್ತಿರುವುದು ಖಂಡನೀಯ ಎಂದು ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು. ದೇವನಹಳ್ಳಿ

ಭೂಮಿ ನೀಡಲು ಸಿದ್ಧರಿರುವವರಿಂದ ಭೂಮಿ ಪಡೆದು ನಂತರ ಉಳಿದ ಭೂಮಿಯನ್ನು ಡಿನೋಟಿಫೈ ಮಾಡುವುದಾಗಿ ಎಂ.ಬಿ. ಪಾಟೀಲ ಹೇಳಿದ್ದಾರೆ. 154 ರೈತರು ಕೆಐಎಡಿಬಿಗೆ ಭೂಮಿ ನೀಡಲು ಸಿದ್ಧ ಎಂದು ನೀಡಿರುವ ಪತ್ರ ನಕಲಿ. ರೈತರ ದಾಖಲೆ ನೀಡಿ ನಕಲಿ ಸಹಿ ಮಾಡಲಾಗಿದೆ ಎಂದು ಆರೋಪಿಸಿದರು.

ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಡಿನೋಟಿಫಿಕೇಷನ್‌ ಆದೇಶ ಹೊರ ಬರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಮುಖಂಡರು ಒಕ್ಕೊರಳಿನಿಂದ ಆಗ್ರಹಿಸಿದರು.

ಇದನ್ನೂ ನೋಡಿ: ಅಮೆರಿಕ ಮಣಿಸಿದ ಮಹಾನ್‌ ನಾಯಕ ಫಿಡೆಲ್‌ ಕ್ಯಾಸ್ಟ್ರೊ – ಕೆ.ಎಸ್.ರವಿಕುಮಾರ್Janashakthi Media

Donate Janashakthi Media

Leave a Reply

Your email address will not be published. Required fields are marked *