ಜಾನುವಾರುಗಳು ಮೇಯಿಸುವುದಕ್ಕೆ ನ್ಯಾಯಲಯದ ನಿಷೇಧ: ಹೋರಾಟದಿಂದಾಗಿ ಮರುಪರಿಶೀಲನೆಗೆ ಆದೇಶ

ಮದ್ರಾಸ್‌ ಹೈಕೋರ್ಟಿನ ಜಾನುವಾರುಗಳ ಮೇಯಿಸುವಿಕೆ ನಿಷೇಧವು ಅರಣ್ಯ ಹಕ್ಕುಗಳ ಕಾಯಿದೆ-2006ರಲ್ಲಿ ಪರಿಶಿಷ್ಟ ಪಂಗಡಗಳು ಮತ್ತು ಇತರೆ ಸಾಂಪ್ರದಾಯಿಕ ಅರಣ್ಯವಾಸಿಗಳಿಗೆ ನೀಡಲಾದ ‘ಸಮುದಾಯ ಹಕ್ಕು’ಗಳನ್ನು ಕಸಿದುಕೊಳ್ಳುತ್ತದೆ.

ಚೆನ್ನೈ: ಅರಣ್ಯ ಭೂಮಿಯಲ್ಲಿ ಜಾನುವಾರಗಳನ್ನು ಮೇಯಿಸುವುದನ್ನು ಮದ್ರಾಸ್ ಹೈಕೋರ್ಟಿನ ಹಠಾತ್ ನಿಷೇಧ ಹೇರಿದ್ದು, ತಮಿಳುನಾಡಿನ ಅರಣ್ಯವಾಸಿಗಳು ಮತ್ತು ಪಶುಸಂಗೋಪನೆ ಮಾಡುವ ರೈತ ಸಮುದಾಯಗಳಲ್ಲಿ ಆಕ್ರೋಶವನ್ನು ಉಂಟುಮಾಡಿದೆ. ಈ ಬಗ್ಗೆ ತಮಿಳುನಾಡಿನ ಹಲವಡೆ ಅಖಿಲ ಭಾರತ ಕಿಸಾನ್‌ ಸಭಾ ನೇತೃತ್ವದಲ್ಲಿ ರೈತರು ಪ್ರತಿಭನೆಗಳನ್ನು ನಡೆಸಿದರು.

ಮಾರ್ಚ್ 4, 2022ರಂದು ನೀಡಿದ್ದ ಈ ತೀರ್ಪಿನಲ್ಲಿ, ಜಾನುವಾರುಗಳನ್ನು ಸಾಕುವವರು ತಮ್ಮ ಜಾನುವಾರಗಳನ್ನು ಅರಣ್ಯ ಪ್ರದೇಶಗಳಲ್ಲಿ ಮೇಯಿಸುವುದು ಮತ್ತು ಕೊಂಡೊಯ್ಯುವುದನ್ನು ನಿಷೇದಿಸುವಂತೆ ಮದ್ರಾಸ್‌ ಹೈಕೋರ್ಟ್ ತಮಿಳು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಹೈಕೋರ್ಟ್‌ ನೀಡಿರುವ ತೀರ್ಪನ್ನು ಅರಣ್ಯ ಇಲಾಖೆ ತಕ್ಷಣವೇ ಕ್ರಮಕೈಗೊಂಡಿದ್ದು, ತಮಿಳುನಾಡಿನ ಹಲವು ಕಡೆ ನಿಷೇಧಾಜ್ಞೆ ಜಾರಿಗೊಳಿಸಿದೆ. ಬೆಟ್ಟದ ಅಂಚಿನಲ್ಲಿರುವ ಗ್ರಾಮೀಣ ಸಮುದಾಯ ತಲೆಮಾರುಗಳಿಂದ ಜಾನುವಾರಗಳನ್ನು ಮೇಯಿಸುತ್ತಿದ್ದಾರೆ. ಆದರೆ, ನ್ಯಾಯಾಲಯದ ತೀರ್ಪು ಜೀವನೋಪಾಯಕ್ಕೆ ಪರ್ಯಾಯ ಕ್ರಮಗಳನ್ನು ಪರಿಗಣಿಸದೆ ನಿಷೇಧ ಹೇರಿ ಸಂಕಷ್ಟ ದೂಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಜಾನುವಾರ ಮೇಯಿಸುವಿಕೆಯ ಮೇಲಿನ ನಿಷೇಧದ ಹೈಕೋರ್ಟ್‌ ತೀರ್ಪು ‘ಸಮುದಾಯ ಹಕ್ಕುಗಳಿಗೆ’ ವಿರುದ್ಧವಾಗಿದೆ ಎಂದು ಅನೇಕ ಸಂಘಟನೆಗಳು ವಿರೋಧಿಸಿದವು ಮತ್ತು ನ್ಯಾಯಲಯವು ಆದೇಶವನ್ನ ಮರುಪರಿಶೀಲನೆ ಮಾಡುವಂತೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದವು.

ತೀವ್ರ ವಿರೋಧದ ನಂತರ ನ್ಯಾಯಲಯವು ಮಾರ್ಚ್ 17ರಂದು ಮರು ಆದೇಶ ಹೊರಡಿಸಿತು. ಆದೇಶದಂತೆ ಹುಲಿ ಸಂರಕ್ಷಿತ ಸ್ಥಳಗಳಲ್ಲಿ, ಆನೆ ಕಾರಿಡಾರ್ ಮತ್ತು ವನ್ಯಜೀವಿ ಅಭಯಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನವನಗಳಲ್ಲಿ ಜಾನುವಾರಗಳನ್ನು ಮೇಯಿಸದಂತೆ ಆದೇಶ ಹೊರಡಿಸಿದ್ದು, ತಮಿಳುನಾಡು ಅರಣ್ಯ ಕಾಯ್ದೆಯ ನಿಬಂಧನೆಗಳಿಗೆ ಒಳಪಟ್ಟ ಅಧಿಕಾರಿಗಳು ಉಳಿದ ಪ್ರದೇಶಗಳಲ್ಲಿ ಜಾನುವಾರಗಳನ್ನು ಮೇಯಿಸಲು ಅನುಮತಿ ನೀಡಬಹುದು ಎಂದು ಹೈಕೋರ್ಟ್ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *