ಬೆಂಗಳೂರು: ಕೃಷಿ ಹೊರತುಪಡಿಸಿ ಇತರ ಚಟುವಟಿಕೆಗಳ ಮೂಲಕ ರಾಜ್ಯದಲ್ಲಿ ರೈತರ ಆದಾಯ ದುಪ್ಪಟ್ಟು ನಿಟ್ಟಿನಲ್ಲಿ ರಾಜ್ಯದಲ್ಲಿ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ 2021 ಆಗಸ್ಟ್ 25ರಂದು ಸೆಕೆಂಡರಿ ಅಗ್ರಿಕಲ್ಚರ್ ಸ್ಥಾಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಕೇಂದ್ರದ ರೈತರ ಆದಾಯ ದ್ವಿಗುಣಗೊಳಿಸುವ ಸಮಿತಿಯ ಮುಖ್ಯಸ್ಥರೊಂದಿಗೆ ಸಮಿತಿ ಸಭೆ ನಡೆಸಿದ್ದು, ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಸರ್ಕಾರ ಕೃಷಿ ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ 13 ಜನರ ಸದಸ್ಯರನ್ನೊಳಗೊಂಡ ಸಮಿತಿ “ಸೆಕೆಂಡರಿ ಅಗ್ರಿಕಲ್ಚರ್’ ನಿರ್ದೇಶಾನಲಯ ಸ್ಥಾಪಿಸಿ ಆದೇಶಿಸಲಾಗಿದೆ.
ಕೃಷಿಕರ ಆದಾಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಶೋಕ್ ದಳವಾಯಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿ ಒಂಬತ್ತು ಸಂಪುಟಗಳಲ್ಲಿ ವರದಿ ನೀಡಿತ್ತು. ದಳವಾಯಿ ಜತೆಗೂ ಸಭೆ ನಡೆಸಿದ್ದ ಸರ್ಕಾರ ಇದೀಗ ರಾಜ್ಯದಲ್ಲಿ ಕೃಷಿ ನಿರ್ದೇಶಕರ ಹುದ್ದೆಗೆ ಸಮಾನವಾದ ಅಧಿಕಾರಿ ನೇತೃತ್ವದಲ್ಲಿ 13 ಜನ ತಜ್ಞರ ತಂಡವನ್ನೊಳಗೊಂಡ ನಿರ್ದೇಶನಾಲಯ ಸ್ಥಾಪಿಸಿದೆ. ಇದಕ್ಕೆ ಪೂರಕವಾಗಿ ಸಚಿವ ಬಿ.ಸಿ. ಪಾಟೀಲ್ ಹಲವು ಸಭೆ ನಡೆಸಿದ್ದರು.
ಗ್ರಾಮೀಣ ಮಟ್ಟದಲ್ಲಿ ಗುಡಿ ಕೈಗಾರಿಕೆ ಎಂದು ಪರಿಗಣಿಸಬಹುದಾದ ಚಟುವಟಿಕೆಯು ಸ್ಥಳೀಯ ಮತ್ತು ಸುತ್ತಮುತ್ತಲಿನ ರೈತರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ ಇದನ್ನು ಸೆಕೆಂಡರಿ ಕೃಷಿ ಎಂದು ಕರೆಯುತ್ತಾರೆ. ಸ್ಥಳೀಯವಾಗಿ ಲಭ್ಯವಾಗುವ ಮೂಲ ಹಾಗೂ ಕಚ್ಚಾ ವಸ್ತುಗಳ್ನು ಮಾನವ ಶಕ್ತಿ ಕೌಶಲ್ಯಗಳ ಮೂಲವಾಗಿ ಸದಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿ ಎಂದು ಪರಿಗಣಿಸಬಹುದು.
ಜೈವಿಕ ಗೊಬ್ಬರ ಘಟಕಗಳು, ಜೇನು ಸಾಕಣೆ, ಅಣಬೆ, ರೇಷ್ಮೆ ಹುಳು ಸಾಕಣೆ, ಸಾವಯವ ಬಣ್ಣ ಅಥವಾ ಡೈ ತಯಾರಿಕೆ, ನರ್ಸರಿ ಇತ್ಯಾದಿಗಳಂತಹ ಸಣ್ಣ ಪ್ರಮಾಣದ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿದೆ. ಸ್ಥಳೀಯವಾಗಿ ಲಭ್ಯವಾಗುವ ಮೂಲ ಅಥವಾ ಕಚ್ಛಾ ವಸ್ತುಗಳನ್ನು ಮಾನವ ಶಕ್ತಿಯನ್ನು ಸದುಪಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಯಾಗಿರುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ತ್ಪನ್ನ ಮತ್ತು ಉಪಉತ್ಪನ್ನಗಳ ಕಚ್ಚಾ ವಸ್ತುವಾಗಿ ಬಳಸಿಕೊಂಡು ಉತ್ಪಾದಕ ಚಟುವಟಿಕೆ ಮಾಡುವುದು. ಸ್ಥಳೀಯವಾಗಿ ಲಭ್ಯವಿರುವ ಮಾನವ ಸಂಪನ್ಮೂಲ ಬಳಕೆಗಾಗೊ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯಮ ಚಟುವಟಿಕೆ ಮಾಡುವುದು.
ಎಂ.ಎಸ್.ಎಂ.ಇ ಕಾಯಿದೆ 2006 ಅಡಿಯಲ್ಲಿ ವರ್ಗೀಕರಿಸಲಾದ ಸಣ್ಣ ಅಥವಾ ಮಧ್ಯಮ ಉದ್ಯಮಗಳನ್ನು ಅಭಿವೃದ್ಧಿಪಡಿಸುವುದು. ಸಾವಯವ ಗೊಬ್ಬರ ತಯಾರಿಕೆ, ತೋಟಗಾರಿಕೆ ಹೂವು ಅರಣ್ಯ ಕೃಷಿ ಬೆಳೆಗಳ ನರ್ಸರಿ, ಜೈವಿಕ ಕೀಟನಾಶಕಗಳ ತಯಾರಿಕೆ, ನೀರು ಮತ್ತು ಮಣ್ಣು ಪರೀಕ್ಷೆ, ಪಶು ಆಹಾರ ಮೇವು ಉತ್ಪಾದನೆ ಇತ್ಯಾದಿಗಳ ಉತ್ಪಾದಿತ ಬೆಳೆಗಳ ಮೌಲ್ಯವರ್ಧನೆ ಮಾಡುವುದು. ಕಟಾವು ಆದ ನಂತರ ಹೂವು, ಹಣ್ಣು, ಸಾಂಬಾರು ಪದಾರ್ಥಗಳ ಇತ್ಯಾದಿಗಳನ್ನು ಪೂರ್ವಸಿದ್ಧತೆಗೊಳಿಸಿ ಮಾರುಕಟ್ಟೆಗೆ ತಲುಪಿಸುವುದು. ಅತಿಸಣ್ಣ, ಸಣ್ಣ ಉದ್ದಿಮೆಗಳಾದ ಉಪ್ಪಿನಕಾಯಿ, ಜಾಮ್ ತಯಾರಿಕೆ ಅರಿಶಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು, ಅಗ್ರಿ ಟೂರಿಸಂ, ಆಯುಷ್ ಮೆಡಿಸಿನ್ಸ್, ನೇಯ್ಗೆ ಉತ್ಪನ್ನಗಳು, ಸುಗಂಧ ದ್ರವ್ಯ, ಡೈಗಳನ್ನು ಇತ್ಯಾದಿ ಮೌಲ್ಯವರ್ಧನೆ ಕೇಂದ್ರಿತ ಚಟುವಟಿಕೆಗಳನ್ನು ಮಾಡುವುದು.
ಸೆಕೆಂಡರಿ ಅಗ್ರಿಕಲ್ಚರ್ ಅಡಿ ಜೇನು ಸಾಕಾಣೆ, ಬೇವಿನ ಉತ್ಪನ್ನಗಳು, ಕಾರ್ನ್ ಪೌಡರ್ ತಯಾರಿಕೆ, ಹೈಡ್ರೋಪೋನಿಕ್ಸ್, ಕೈತೋಟ, ಅಡಿಕೆ ಹಾಳೆ ಉತ್ಪನ್ನಗಳು, ಅಲೊವೆರಾ ಉತ್ಪನ್ನಗಳು, ಬಿದಿರು ಉತ್ಪನ್ನಗಳು, ಅಂಟು ಉತ್ಪಾದನೆ, ರೇಷ್ಮೆ ಉತ್ಪನ್ನಗಳು, ಕುರಿಮರಿ ಹೊಸ ತಳಿ ಸಾಕಣೆ, ಹೋರಿ ಸಾಕಣೆ, ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು.
ಯಾವುದು ವ್ಯಾಪ್ತಿಗೆ?
ಸಾವಯವ ಗೊಬ್ಬರ ತಯಾರಿಕೆ, ತೋಟಗಾರಿಕೆ ಹೂವು ಅರಣ್ಯ ಕೃಷಿ ಬೆಳೆಗಳ ನರ್ಸರಿ, ಜೈವಿಕ ಕೀಟನಾಶಕಗಳ ತಯಾರಿಕೆ
ನೀರು ಮತ್ತು ಮಣ್ಣು ಪರೀಕ್ಷೆ
ಪಶು ಆಹಾರ ಮೇವು ಉತ್ಪಾದನೆ, ಉತ್ಪಾದಿತ ಬೆಳೆಗಳ ಮೌಲ್ಯವರ್ಧನೆ ಮಾಡುವುದು
ಕಟಾವು ಆದ ನಂತರ ಹೂವು, ಹಣ್ಣು, ಸಾಂಬಾರು ಪದಾರ್ಥಗಳು ಇತ್ಯಾದಿಗಳನ್ನು ಪೂರ್ವಸಿದ್ಧತೆಗೊಳಿಸಿ ಮಾರುಕಟ್ಟೆಗೆ ತಲುಪಿಸುವುದು.
ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು, ಅಗ್ರಿ ಟೂರಿಸಂ
ಆಯುಷ್ ಮೆಡಿಸಿನ್ಸ್
ನೇಯ್ಗೆ ಉತ್ಪನ್ನಗಳು
ಸುಗಂಧ ದ್ರವ್ಯ, ಜೇನು ಸಾಕಣೆ
ಅಂಟು ಉತ್ಪಾದನೆ
ರೇಷ್ಮೆ ಉತ್ಪನ್ನಗಳು
ಬಿದಿರು ಉತ್ಪನ್ನಗಳು
ಅತಿಸಣ್ಣ, ಸಣ್ಣ ಉದ್ದಿಮೆ ಗಳಾದ ಉಪ್ಪಿನಕಾಯಿ, ಜಾಮ್ ಅರಿಶಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ತಯಾರಿ
ಡೈ ಇತ್ಯಾದಿ ಮೌಲ್ಯವರ್ಧನೆ ಕೇಂದ್ರಿತ ಚಟುವಟಿಕೆ
ಬೇವಿನ ಉತ್ಪನ್ನಗಳು
ಕಾರ್ನ್ ಪೌಡರ್ ತಯಾರಿಕೆ
ಹೈಡ್ರೋಪೋನಿಕ್ಸ್, ಕೈತೋಟ
ಅಡಕೆ ಹಾಳೆ ಉತ್ಪನ್ನಗಳು
ಅಲೊವೆರಾ ಉತ್ಪನ್ನಗಳು
ಕುರಿಮರಿ ಹೊಸ ತಳಿ ಸಾಕಣೆ, ಹೋರಿ ಸಾಕಣೆ
ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು
ಹತ್ತಿ ಬೆಳೆ ಉಳಿಕೆಯ ಉತ್ಪನ್ನಗಳು, ಹತ್ತಿ ಭತ್ತದ ಉಳಿಕೆಯಿಂದ ಫೈಬರ್ ಬೋರ್ಡ್ ತಯಾರಿ
ಕತ್ತಾಳೆ ಬಾಳೆ ನಾರಿನ ಉತ್ಪನ್ನಗಳು
ಬಯೋಗ್ಯಾಸ್ ಉತ್ಪಾದನೆ
ಯೂರಿಯಾ ಲೇಪಿಸಿ ಮೇವಿನ ಬ್ಲಾಕ್ಗಳ ತಯಾರಿಕೆ
ಕಬ್ಬು ಸೋಗೆಯಿಂದ ಉತ್ಪನ್ನಗಳ ತಯಾರಿಕೆ
ಉದ್ಯೋಗ ಸೃಷ್ಟಿ