ಸತ್ಯವನ್ನು ಪಂಚ್ ಡೈಲಾಗ್‌ನೊಂದಿಗೆ ಪ್ರಸ್ತುತಪಡಿಸುವುದೆ ಸ್ಟ್ಯಾಂಡ್-ಅಪ್ ಕಾಮಿಡಿ

ಸತ್ಯವನ್ನು ಉತ್ಪ್ರೇಕ್ಷೆ ಮತ್ತು ಪಂಚ್ ಡೈಲಾಗ್‌ನೊಂದಿಗೆ ಪ್ರಸ್ತುತಪಡಿಸುವುದೆ is standup comedy. ಕುನಾಲ್ ಕಾಮ್ರಾ ವಾಸ್ತವವನ್ನೇ ಹಾಸ್ಯಮಯ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ ಅಷ್ಟೇ since he is a comedian.

-ಗಂಗಾಧರ್ ಮುಳಗುಂದ

ಭಾರತದ ಸಂವಿಧಾನವು ಆರ್ಟಿಕಲ್ 19(1)(a) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತ, ಅದು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು, ಅಧಿಕಾರವನ್ನು ಟೀಕಿಸಲು ಮತ್ತು ವಿಡಂಬನೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಸತ್ಯ

So ಕುನಾಲ್ ಅವರು ಸಂವಿಧಾನ ಖಾತರಿಪಡಿಸಿದ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿದ್ದಾರೆ ಅಷ್ಟೇ.

ಇದನ್ನೂ ಓದಿ: ಬಳ್ಳಾರಿ| ಕುಡಿಯುವ ನೀರಿನ ಕೊರತೆ: ನದಿಗಳಲ್ಲಿಯೇ ಬೋರ್‌ವೆಲ್

ಕೇವಲ ಒಂದು ಹಾಸ್ಯವನ್ನು ಸರಿಯಾದ ಮನೋಭಾವದಿಂದ ಸ್ವೀಕರಿಸಲು ಸಾಧ್ಯವಾಗದ ಬಿಜೆಪಿ ಹಾಗೂ ತನ್ನ ಮಿತ್ರ ಪಕ್ಷಗಳ ಗೂಂಡಾ ಗುಂಪು,  ಕುನಾಲ್ ರವರ ಕಾರ್ಯಕ್ರಮ ಜರುಗಿದ ಆ ಹಾಲನ್ನು ಧ್ವಂಸಗೊಳಿಸಿದ ರೀತಿ ಅತ್ಯಂತ ಅಸಹ್ಯಕರ ವಾದುದು ಹಾಗೂ ಖಂಡನೀಯ.

ಅಸಹಿಷ್ಣುತೆಯಿಂದ ತುಂಬಿರುವ ಆ ವ್ಯಕ್ತಿಗಳು ಹಾಗೂ ಅವರು ಎಸುಗಿದ ಕೃತ್ಯವು ಹೇಗೆ ವಿಮರ್ಶಾತ್ಮಕ ಧ್ವನಿಗಳನ್ನು ಧಮನಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತವೆ ಎಂಬುದನ್ನು ಎತ್ತಿ ತೋರಿಸುತ್ತದೆ. ಇಂತಹ ಬೆದರಿಕೆ, ಗುಂಪು ಹಿಂಸಾಚಾರ ನಮ್ಮ ಸಮಾಜದ ಮೇಲೆ ಭಯಾನಕ ಪರಿಣಾಮವನ್ನು ಉಂಟುಮಾಡುತ್ತಿದೆ, ಮುಕ್ತ ಸಂವಾದವನ್ನು ನಿರ್ಬಂಧಿಸುತ್ತಿದೆ. ಇಂತಹ ಕೃತ್ಯಗಳು ಸಂವಿಧಾನ ಕಲ್ಪಿಸಿರುವ ಹಕ್ಕುಗಳು ಮತ್ತು ರಕ್ಷಣೆಗಳನ್ನು ದುರ್ಬಲಗೊಳಿಸುತ್ತವೆ.

ನಾಗರಿಕ ಸಮಾಜದ ಸದಸ್ಯರಾಗಿ, ಸಂವಿಧಾನವೆ ನಮ್ಮ ಧರ್ಮ ಎಂದು ನಂಬಿರುವ ನಾವು ಈ ಹಿಂಸಾತ್ಮಕ ಕೃತ್ಯವನ್ನು ಖಂಡಿಸಬೇಕು.

ಇದನ್ನೂ ನೋಡಿ: ದುಡಿಯುವ ಜನರಿಗೆ ದುಡ್ಡಿಲ್ಲ! ಆದರೆ ಶಾಸಕರ ವೇತನ ದುಪ್ಪಟ್ಟಾಯ್ತು!! ಅಂಥಾ ಕಷ್ಟ ಅವರಿಗೇನಿತ್ತು? Janashakthi Media

Donate Janashakthi Media

Leave a Reply

Your email address will not be published. Required fields are marked *