ಕೊಲಂಬೊ: ನವೆಂಬರ್ 2 ತಡರಾತ್ರಿ ಅಕ್ರಮ ಮೀನುಗಾರಿಕೆ ಆರೋಪದಲ್ಲಿ ಭಾರತದ 35 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ.
ಉತ್ತರ ಜಾಫ್ನಾ ಜಿಲ್ಲೆಯ ಕಂಕೆಸಂತುರೈ ಬಳಿ ಜಲಗಡಿಯನ್ನು ಅತಿಕ್ರಮಿಸಿದ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆಯ ವಕ್ತಾರ ಬುದ್ದಿಕ ಸಂಪತ್ ತಿಳಿಸಿದ್ದಾರೆ.
ಇದನ್ನೂ ಓದಿ: ಆರ್ಥಿಕ ಅನುದಾನದಡಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ವಿತರಣೆ
ಅಕ್ರಮ ಮೀನುಗಾರಿಕೆ ಆರೋಪದ ಅಡಿಯಲ್ಲಿ ಅವರನ್ನು ಬಂಧಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಅವರ ಉಪಕರಣಗಳನ್ನು ಮೀನುಗಾರಿಕಾ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದೇವೆ ಎಂದು ಹೇಳಿದ್ದಾರೆ.
ಶ್ರೀಲಂಕಾ ನೌಕಾಪಡೆಯು ಕಳೆದ ಒಂದು ತಿಂಗಳಲ್ಲಿ ಭಾರತೀಯ ಮೀನುಗಾರರನ್ನು ಬಂಧಿಸಿರುವ ಎರಡನೇ ಪ್ರಕರಣ ಇದಾಗಿದೆ. ಅಕ್ರಮ ಮೀನುಗಾರಿಕೆ ಆರೋಪದಲ್ಲಿ ಅಕ್ಟೋಬರ್.9 ರಂದು 47 ಮೀನುಗಾರರನ್ನು ಬಂಧಿಸಿತ್ತು.
ಇದನ್ನೂ ನೋಡಿ: ನಿರಂಜನ ಶತಮಾನ ಸಮಾರೋಪ ವಿಚಾರ ಸಂಕಿರಣ | ನಾಲ್ಕು ಪುಸ್ತಕಗಳ ಬಿಡುಗಡೆ ಮತ್ತು ಪರಿಚಯ
