ಹೈದ್ರಾಬಾದ್: ಐಪಿಎಲ್ ಕ್ರಿಕೆಟ್‌ನ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕಳಪೆ ಫಾರ್ಮ್ 2025ರ ಐಪಿಎಲ್‌ನಲ್ಲಿಯೂ ಮುಂದುವರೆದಿದ್ದೂ, ಈ ಸೀಸನ್ ನಲ್ಲಿ ತಂಡದ ಮೊದಲ ಪಂದ್ಯದದಲ್ಲಿ ಶತಕ ಗಳಿಸಿದನ್ನು ಬಿಟ್ಟರೆ, ಮತ್ತೊಂದು ಉತ್ತಮ ಇನ್ನಿಂಗ್ಸ್ ಅವರ ಬ್ಯಾಟ್ನಿಂದ ಬಂದಿಲ್ಲ. ತಂಡ
ಏಪ್ರಿಲ್ 23 ಬುಧವಾರದಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಇಶಾನ್ ಕಿಶನ್ ಸಂಪೂರ್ಣವಾಗಿ ವಿಫಲಗೊಂಡಿದ್ದೂ, ನಾಲ್ಕು ಎಸೆತಗಳನ್ನು ಆಡಿ ಪೆವಿಲಿಯನ್ ತಲುಪಿದರು. ಆದಾಗ್ಯೂ, ಈ ಪಂದ್ಯದಲ್ಲಿ ಇಶಾನ್ ಔಟಾದದ್ದು ಮಾತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ತಂಡ
ಟ್ರಾವಿಸ್ ಹೆಡ್ (0) ಔಟಾದ ನಂತರ, ಇಶಾನ್ ಕಿಶನ್ ಕ್ರೀಸ್‌ಗೆ ಬಂದರು. ದೀಪಕ್ ಚಾಹರ್ ಎಸೆದ ಪಂದ್ಯದ ಮೂರನೇ ಓವರ್ನ ಮೊದಲ ಚೆಂಡು ಲೆಗ್ ಸೈಡ್‌ಗೆ ಹೋಯಿತು. ಈ ವೇಳೆ ಇಶಾನ್ ಚೆಂಡನ್ನು ಫೈನ್ ಲೆಗ್ ಕಡೆಗೆ ಆಡಲು ಪ್ರಯತ್ನಿಸಿದಾಗ ಚೆಂಡು ಕೀಪರ್ ರಿಕಲ್ಟನ್ ಅವರ ಕೈಗೆ ಸೇರಿತು. ಮುಂಬೈ ಆಟಗಾರರು ಸೇರಿದಂತೆ ಬೌಲರ್ ಅಥವಾ ಕೀಪರ್ ಔಟ್ಗಾಗಿ ಮನವಿ ಮಾಡಲೇ ಇಲ್ಲ.
ಇದನ್ನೂ ಓದಿ: ಯಾದಗಿರಿ| ಮುಗ್ಧ ರೈತರಿಗೆ ಭರವಸೆಗಳ ಬಲೂನ್ ತೋರಿಸಿದ ಸರ್ಕಾರ
ಆದರೆ, ಇಶಾನ್ ಮಾತ್ರ ತಾನು ಔಟ್ ಎಂದು ಭಾವಿಸಿ ಕ್ರೀಸ್‌ನಿಂದ ಹೊರನಡೆದರು. ಇದನ್ನು ಗಮನಿಸಿ ಬೌಲರ್ ಮೇಲ್ಮನವಿ ಸಲ್ಲಿಸಿದಾಗ ವೈಡ್ ನೀಡಬೇಕೋ ಅಥವಾ ಔಟ್ ನೀಡಬೇಕೋ ಎಂದು ಗೊಂದಲಕ್ಕೀಡಾದ ಅಂಪೈರ್ ಕೊನೆಗೆ ಬೆರಳು ಎತ್ತಿ ಔಟ್ ಎಂದು ನಿರ್ಣಯಿಸಿದರು.
ಆದರೆ, ಥರ್ಡ್ ಅಂಪೈರ್ ಆ ಬಾಲ್ ಅನ್ನು ಚೆಕ್ ಮಾಡಿದಾಗ, ಚೆಂಡು ಗ್ಲೌಸ್ ಅಥವಾ ಬ್ಯಾಟ್ಗೆ ತಾಗಿಲ್ಲ ಎಂಬುದು ಸ್ಪಷ್ಟವಾಯಿತು. ಇದೆಲ್ಲವನ್ನೂ ನೋಡಿ, ಸ್ವಲ್ಪ ಸಮಯದವರೆಗೆ ಯಾರಿಗೂ ಏನೂ ಅರ್ಥವಾಗಲಿಲ್ಲ. ಎಲ್ಲ ಅಭಿಮಾನಿಗಳು ಗೊಂದಲಕ್ಕೊಳಗಾದರು. ಇತ್ತರ ಇಶಾನ್ ಹೋಗಿ ಡಗೌಟ್‌ನಲ್ಲಿ ಕುಳಿತರು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲವು ಸಾಧಿಸಿತು.
ಇದೀಗ ಇಶಾನ್ ಕಿಶನ್ ವಿಕೆಟ್ ಬಗ್ಗೆ ದೊಡ್ಡ ವಿವಾದ ಭುಗಿಲೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಮ್ಯಾಚ್ ಫಿಕ್ಸಿಂಗ್ ಬಗ್ಗೆ ದೊಡ್ಡ ಚರ್ಚೆಗಳು ಆರಂಭವಾಗಿವೆ. ಇಶಾನ್ ಕಿಶನ್ ಈ ಪಂದ್ಯವನ್ನು ಫಿಕ್ಸ್ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಈ ಹಿಂದೆ ನೀತಾ ಅಂಬಾನಿಯೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ.
ವಿಶೇಷವಾಗಿ ಎಸ್‌ಆರ್‌ಎಚ್ ಅಭಿಮಾನಿಗಳು ಇಶಾನ್ ಮೇಲೆ ಕೋಪಗೊಂಡಿದ್ದಾರೆ. ಇಶಾನ್ ದೇಹ ಮಾತ್ರ ಎಸ್ಆರ್ಎಚ್ನಲ್ಲಿದೆ. ಆದರೆ, ಇನ್ನೂ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಇಶಾನ್ ಮುಂಬೈ ಇಂಡಿಯನ್ಸ್ ಪರ 12ನೇ ಆಟಗಾರನಾಗಿ ಆಡುತ್ತಿದ್ದಾರೆ. ಇಶಾನ್ ಖಂಡಿತವಾಗಿಯೂ ಈ ಪಂದ್ಯವನ್ನು ಫಿಕ್ಸ್ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ಆರ್‌ಜಿಐ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್, ದೀಪಕ್ ಚಹರ್ (12ಕ್ಕೆ 2) ಹಾಗೂ ಟ್ರೆಂಟ್ ಬೌಲ್ಟ್ ನೀಡಿದ ಆರಂಭಿಕ ಆಘಾತಕ್ಕೆ ತತ್ತರಿಸಿತು. ಆಗ ವಿಕೆಟ್ ಕೀಪರ್-ಬ್ಯಾಟರ್ ಹೆನ್ರಿಕ್ ಕ್ಲಾಸೆನ್ (71 ರನ್, 44 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡಿಗ ಅಭಿನವ್ ಮನೋಹರ್ (43 ರನ್, 37 ಎಸೆತ, 2 ಬೌಂಡರಿ, 3 ಸಿಕ್ಸರ್) ಸಾಹಸದಿಂದ 8 ವಿಕೆಟ್‌ಗೆ 143 ರನ್ ಪೇರಿಸಿತು. ಪ್ರತಿಯಾಗಿ ರೋಹಿತ್ ಶರ್ಮ (70 ರನ್, 46 ಎಸೆತ, 8 ಬೌಂಡರಿ, 3 ಸಿಕ್ಸರ್) ಹಾಗೂ ಸೂರ್ಯಕುಮಾರ್ (40*ರನ್, 19 ಎಸೆತ, 5 ಬೌಂಡರಿ, 2 ಸಿಕ್ಸರ್) ಜತೆಯಾಟದಿಂದ 15.4 ಓವರ್‌ಗಳಲ್ಲಿ 3 ವಿಕೆಟ್‌ಗೆ 146 ರನ್‌ಗಳಿಸಿ 26 ಎಸೆತ ಇರುವಂತೆಯೇ ಗೆದ್ದು ಬೀಗಿತು.
ಇದನ್ನೂ ನೋಡಿ: ವಚನಾನುಭವ – 27| ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ | ಅಕ್ಕ ಮಹಾದೇವಿ ವಚನ Janashakthi Media