ʻಸಂಸತ್ತು ಬೇಸರ ಮೂಡಿಸುವ ಪರಿಸ್ಥಿತಿಯಲ್ಲಿದೆʼ : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ

  • ಶಾಸಕಾಂಗ ರೂಪಿಸುತ್ತಿರುವ ಕಾನೂನುಗಳಲ್ಲಿ ಸ್ಪಷ್ಟತೆ ಇಲ್ಲ
  • “ಬುದ್ಧಿಜೀವಿಗಳು ಮತ್ತು ವಕೀಲರು” ಸದನದಲ್ಲಿ ಇಲ್ಲದಿರುವುದು ಇದಕ್ಕೆ ಕಾರಣ

 

ನವದೆಹಲಿ : ಸಂಸತ್ ಕಲಾಪಗಳ ಕಾರ್ಯನಿರ್ವಹಣೆ ರೀತಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಕಟುವಾಗಿ ಟೀಕಿಸಿದ್ದಾರೆ. ಒಂದು ಕಾಲದಲ್ಲಿ ಸಂಸತ್‌ನ ಎರಡೂ ಸದನಗಳಲ್ಲಿ ವಕೀಲರೇ ತುಂಬಿರುತ್ತಿದ್ದರು. ಆಗ ಕಾನೂನುಗಳ ಕುರಿತಾದ ಚರ್ಚೆ ಯೋಗ್ಯ ರೀತಿಯಲ್ಲಿ ನಡೆಯುತ್ತಿತ್ತು. ಈಗಿನ ಸನ್ನಿವೇಶ ಬಹಳ ಬೇಸರ ಉಂಟುಮಾಡುವಂತಿದೆ. ಸದನದಲ್ಲಿ ಯಾವುದೇ ಸೂಕ್ತ ರೀತಿಯ ಚರ್ಚೆ ನಡೆಯುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ವಕೀಲರ ಸಂಘ ​​(ಎಸ್‌ಸಿಬಿಎ) ದೆಹಲಿಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿತ್ತಾ, ಉತ್ತಮ ವಕೀಲರು ಕಾನೂನು ರಚನೆಗೆ ಕೊಡುಗೆ ನೀಡಲು ಮುಂದೆ ಬರದೆ ಇರುವುದು ಇದಕ್ಕೆ ಕಾರಣ ಎಂದ ಅವರು “ಬುದ್ಧಿಜೀವಿಗಳು ಮತ್ತು ವಕೀಲರು ಸದನದಲ್ಲಿ ಇಲ್ಲದಿರುವಾಗ ಇಂತಹದ್ದು ಸಂಭವಿಸುತ್ತದೆ” ಎಂಬುದಾಗಿ ಹೇಳಿದರು. ಲೋಕಸಭೆ ಮತ್ತು ರಾಜ್ಯಸಭೆ ಕೂಡ ಆರಂಭದಲ್ಲಿ ವಕೀಲ ಸಮುದಾಯದಿಂದ ತುಂಬಿ ಹೋಗಿದ್ದವು. ದುರದೃಷ್ಟವಶಾತ್, ಇಂದು ಸದನಗಳಲ್ಲಿ ಆ ರೀತಿಯ ಚರ್ಚೆಗಳುನ್ನು ಮಾಡಲು ಬಿಡುತ್ತಿಲ್ಲ. ಈ ಹಿಂದೆ ಸದನಗಳಲ್ಲಿ ನಡೆಯುತ್ತಿದ್ದ ಚರ್ಚೆಗಳು ರಚನಾತ್ಮಕವಾಗಿದ್ದವು. ಹಣಕಾಸು ಮಸೂದೆಗಳ ಬಗ್ಗೆ ಚರ್ಚೆಗಳನ್ನು ನೋಡಿದ್ದೆ. ಅಲ್ಲಿ ಬಹಳ ರಚನಾತ್ಮಕ ಅಂಶಗಳನ್ನು ಮಂಡಿಸಲಾಗಿತ್ತು. ಕಾನೂನುಗಳನ್ನು ಚರ್ಚಿಸಿ ಜಾರಿಗೆ ತರಲಾಗುತ್ತಿತ್ತು. ಕಾನೂನಿನ ಶಾಸನದ ಭಾಗದ ಬಗ್ಗೆ ಅವರಿಗೆ ಸ್ಪಷ್ಟ ಚಿತ್ರಣವಿತ್ತು’ ಎಂದಿದ್ದಾರೆ.

ಇದನ್ನೂ ಓದಿ : ಪೆಗಾಸಸ್‌ ಬಗೆಗಿನ ಆರೋಪ ಆಧಾರರಹಿತ-ತನಿಖೆಗೆ ತಜ್ಞರ ಸಮಿತಿ ರಚನೆ: ಸುಪ್ರೀಂಗೆ ಕೇಂದ್ರದ ಮಾಹಿತಿ

ಕೈಗಾರಿಕಾ ವಿವಾದಗಳ ಕಾಯಿದೆ, ಕೆಲವು ತಿದ್ದುಪಡಿಗಳ (ಚರ್ಚೆಯಲ್ಲಿ) ಕುರಿತು ನಡೆದ ಚರ್ಚೆಗಳನ್ನು ನಾನು ನೋಡಿದ್ದೇನೆ. ತಮಿಳುನಾಡಿನ ಲೋಕಸಭಾ ಸದಸ್ಯ, ಸಿಪಿಐಎಂ ಮುಖಂಡ  ಪಿ. ರಾಮಮೂರ್ತಿ ಚರ್ಚಿಸಿದ ರೀತಿ ಅದ್ಬುತವಾಗಿತ್ತು. ತುಂಬಾ ವಿಸ್ತಾರವಾಗಿ ಅವರು ಮಾತನಾಡಿದರು.  ತಿದ್ದುಪಡಿಗಳನ್ನು ಮಾಡಿದರೆ  ಕಾರ್ಮಿಕರ ಮೇಲೆ ಯಾವರೀತಿ  ಪರಿಣಾಮಗಳು ಬೀರುತ್ತವೆ, ಕಾರ್ಮಿಕರ ಮೇಲೆ ಹೇಗೆ ತೊಂದರೆಗಳಾಗುತ್ತಿವೆ ಎಂದು ಅವರು ವಿವರಿಸಿದರು. ಅವರ ಚರ್ಚೆಗೆ ಇನ್ನೊಬ್ಬರು ಬೆಂಬಲ ಕೊಟ್ಟು ಮಾತನಾಡುವವರು ಇರಲಿಲ್ಲ. ಅವರು ಅಷ್ಟು ಹೇಳಿದರೂ ಅದನ್ನು ಕೇಳುವ ಸೌಜನ್ಯ ಇತರ ಸದಸ್ಯರಿಗೆ ಇರಲಿಲ್ಲ. ಪರಿಣಾಮ ಅಂತಹ ಅಪಾಯಕಾರಿ ಕಾಯ್ದೆಗಳು ಜಾರಿಯಾಗಿ ಬಿಟ್ಟಿವೆ ಎಂದರು.

ಪಿ. ರಾಮಮೂರ್ತಿ ಮದ್ರಾಸ್ ನ್ಯಾಯಾಲಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಿ‌.ಸುಂದರಯ್ಯ ಅವರ ಮೇಲೆ ಬ್ರಿಟಿಷರು ಹಾಕಿದ್ದ ಸೆಡಿಷನ್  ಕೇಸ್ ವಿರುದ್ದ ವಾದ ಮಾಡಿ ಅವರನ್ನು ಬಂಧಮುಕ್ತಗೊಳಿಸಿದವರು. ಮಾತ್ರವಲ್ಲ ಭಾರತದಲ್ಲಿ ಮೊಟ್ಟ ಮೊಲದ ಬಾರಿಗೆ IPC ಸೆ 144 ನಿರ್ಬಂಧಕಾಜ್ಞೆಯನ್ನು ಮಾಲಿಕರ ವಿರುದ್ದ ಜಾರಿಗೊಳಿಸಿದ ಮೊದಲಿಗರು. ನ್ಯಾಯಾಂಗ ಇತಿಹಾಸದಲ್ಲಿ ಕಾಮ್ರೇಡ್ ರಾಮಮೂರ್ತಿ ಹೆಸರು ಚಿರಸ್ಥಾಯಿ ಮತ್ತು ಯುವ ಟ್ರೇಡ್ ಯೂನಿಯನ್ ಕಾರ್ಯಕರ್ತರಂತೂ ಅವರ ಬದುಕನ್ನು ಓದಲೇಬೇಕು ಅವರು‌ ಮಗಳು ಕೂಡ ತಮಿಳು ನಾಡಿನ ಹೆಸರಾಂತ ವಕೀಲರು ಕೂಡ ಆಗಿದ್ದಾರೆ.

ಇಂತಹ ಚರ್ಚೆಗಳು ನ್ಯಾಯಾಲಯ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಆದರೆ, ಈಗ ನೂತನ ಕಾನೂನು ರಚನೆ ಪ್ರಕ್ರಿಯೆ ವೇಳೆ ಸಂಸತ್ತಿನಲ್ಲಿ ಸರಿಯಾದ ಚರ್ಚೆಗಳೇ ನಡೆಯುತ್ತಿಲ್ಲ. ಯಾವ ಉದ್ದೇಶಕ್ಕಾಗಿ ಕಾನೂನುಗಳನ್ನು ರಚಿಸಲಾಗಿದೆ ಎಂಬುದೇ ನಮಗೆ ಗೊತ್ತಾಗುವುದಿಲ್ಲ. ಇದರಿಂದ ನ್ಯಾಯಾಲಯಳಿಗೆ ಮತ್ತು ಜನರಿಗೆ ತೊಂದರೆ ಆಗುತ್ತಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಕೊನೆಗೊಂಡ ಸಂಸತ್ತಿನ ಮುಂಗಾರು ಅಧಿವೇಶನ ಸಂಪೂರ್ಣ ಗದ್ದಲದಿಂದ ಕೂಡಿತ್ತು. ಗದ್ದಲದ ಮಧ್ಯೆಯೂ ಯಾವುದೇ ಚರ್ಚೆ ಇಲ್ಲದೇ ಹಲವು ಮಸೂದೆಗಳನ್ನು ಅಂಗೀಕರಿಸಿದ್ದನ್ನು ನಾವು ನೆನಪಿಸಿಕೊಳ್ಳಬಹುದು.

Donate Janashakthi Media

Leave a Reply

Your email address will not be published. Required fields are marked *