ಬೆಂಗಳೂರು: ಎಸ್ಸೆಎಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಹೆಚ್ಚಿಸುವ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಾಲೆಗಳಿಗಾಗಿ ಮಾರ್ಗಸೂಚಿಗಳನ್ನು ರಚಿಸಿದೆ. ಒಟ್ಟು 29 ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದಶೇಕರಿಗೆ ಸೂಚನೆ ನೀಡಿದೆ. ಪರಿಹಾರ
ಮೊಬೈಲ್ ಪೋನ್ ಹಾಗೂ ಜಾಲತಾಣಗಳ ಬಳಕೆಯ ಗೀಳಿನಿಂದ ಉಂಟಾಗುವ ಅನಾಹುತಗಳನ್ನು ಮಕ್ಕಳೀಗೆ ತಿಳಿಸಿ, ಶಿಕ್ಷಕರು ವಾರದಲ್ಲಿ ಕನಿಷ್ಟ 2 ಬಾರಿ ಎಚ್ಚರಿಕೆ ನೀಡಬೇಕು. ಪರಿಕ್ಷೆಯ ಕಡೆಗೆ ಹೆಚ್ಚಿನ ಗಮನ ಕೇಂದ್ರಿಕರಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ಶಾಲೆಯ ಪ್ರಾರ್ಥನಾ ಸಮಯದಲ್ಲಿ ಶಿಕ್ಷಕರು ಮತ್ತು ಮುಖ್ಯ ಶೀಕ್ಷಕರು ಮೊಬೈಲ್ ಪೋನ್ ಬಳಕೆಯನ್ನು ಸೀಮಿತಗೊಳಿಸಬೇಕು.ಪೌಷ್ಟಿಕ ಆಹಾರ ಸೇವನೆಯ ಮಹತ್ವ ತಿಳಿಸಬೇಕು.
ಇದನ್ನೂ ಓದಿ: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ 20 ಕೋಟಿ ರೂ. ವಂಚನೆ; ಇಬ್ಬರು ಬಂಧನ
ಸಮತೋಲನ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ತಿಳಿಸಬೆಕು. ಎಸ್ಸೆಎಸ್ಸೆಲ್ಸಿ ವಾರ್ಷೀಕ ಪರಿಕೇಯ ಪಠ್ಯವಸ್ತವನ್ನು ಶೈಕ್ಷಣೀಕ ವಾರ್ಷೀಕ ಮಾರ್ಗಸೂಚಿಯಂತೆ ಈ ವರ್ಷದ ಡಿಸೆಂಬರ್ ನೊಳಗೆ ಪೂರ್ಣಗೊಳಿಸಲು ಕ್ರಮ ವಹಿಸಬೆಕು. ಪ್ರತಿದಿನ ಮುಂಜಾನೆ ವಿದ್ಯಾರ್ಥಿಗಳು ಸಕ್ರಿಯವಾಗಿ ಅಭ್ಯಾಸ ನಡೆಸುತ್ತಿರುವುದನ್ನುಪರಿಶೀಲಿಸಲು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ವೇಕಪ್ ಕಾಲ್ ಮಾಡಬೇಕು.
ವಿದ್ಯಾರ್ಥಿಗಳಲ್ಲಿ ಒತ್ತಡ ಮಾಡಲು ವಾರದಲ್ಲಿ ಕನಿಷ್ಟ ಒಂದು ಅವದಿಯನ್ನು ಕ್ರೀಡೆಗೆ ಮೀಸಲಿಡಬೇಕು. ಡಯಟ್ ಅಧಿಕಾರಿಗಳು ವೇಳಾಪಟ್ಟಿ ತಯಾರಿಸಿ ನೀಡಬೇಕು ಮತ್ತು ವಾರದಲಲ್ಲಿ 5 ದಿನ ಶಾಲೆಗಳಿಗೆ ಭೆಟಿ ಪರಿಹಾರ ಬೋದನಾ ತರಗತಿಗಳಲ್ಲಿ ಭಗವಹಿಸಬೇಕು. ಇದನ್ನು ಸ್ಯಾಟ್ಸ್ ನಲ್ಲಿ ಅಪ್ ಡೆಟ್ ಮಾಡಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ನೋಡಿ: ಜುಲೈ 09 ರಂದು ಕಾರ್ಮಿಕರ ಮುಷ್ಕರ | ಮುಷ್ಕರಕ್ಕೆ ಕಾರಣಗಳೇನು? – ವಿಶ್ಲೇಷಣೆ ಎಸ್ ವರಲಕ್ಷ್ಮಿ Janashakthi Media
