ಚಿಕ್ಕಮಗಳೂರು: ಸಬ್ಸಿಡಿ ನೇರ ಸಾಲದ ಸೌಲಭ್ಯ ನೀಡಲು ಅರ್ಜಿದಾರನಿಂದ 10,000 ರೂ. ಲಂಚ ಪಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನನ್ನು ಹಣದ ಸಮೇತ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ನೌಕರ ಕಾಂತರಾಜ್. ಮೂಡಿಗೆರೆ ತಾಲ್ಲೂಕು ಆಟೋ ಚಾಲಕ ಶ್ರೀಧರ್ ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯುವ ನೇರ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದು, ಸೌಲಭ್ಯ ನೀಡಲು ಕಾಂತರಾಜ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: ಕತ್ತು ಹಿಸುಕಿದ ಬಿಜೆಪಿಯನ್ನು ಕಣಿವೆಯ ಜನ ತಿರಸ್ಕರಿಸುವರೇ?
ಅರ್ಜಿದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಶುಕ್ರವಾರ ಕಚೇರಿಯಲ್ಲಿ ಲಂಚದ ಹಣ 10 ಸಾವಿರ ರೂ. ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕಾಂತರಾಜನನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಕೆ.ಜೆ. ತಿರುಮಲೇಶ್ ಇನ್ಸೆಕ್ಟರ್ ಅನಿಲ್ ರಾಥೋಡ್, ಸಿಬ್ಬಂದಿ ವಿಜಯ ಭಾಸ್ಕರ್, ಸಂಜಯ್, ವೇದಾವತಿ, ಮಹೇಶ್, ಚಂದ್ರ ಶೆಟ್ಟಿ ಭಾಗವಹಿಸಿದ್ದರು.
ಇದನ್ನೂ ನೋಡಿ: ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು – ಸಚಿವ ದಿನೇಶ್ ಗುಂಡೂರಾವ್