26 ನವೆಂಬರ್ 2024 ರಂದು ಜಿಲ್ಲಾ ಮಟ್ಟದ ಪ್ರತಿಭಟನಾ ಮೆರವಣಿಗೆಗಳು ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧಾರ

ನವದೆಹಲಿ :ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಜಂಟಿ ರಾಷ್ಟ್ರೀಯ ಸಭೆಯು 14 ಅಕ್ಟೋಬರ್ 2024 ರಂದು ನವದೆಹಲಿಯ ಹರ್ಕಿಷನ್‍ ಸಿಂಗ್‍ ಸುರ್ಜಿತ್ ಭವನದಲ್ಲಿ ನಡೆಯಿತು. ಬಿಜೆಪಿ ನೇತೃತ್ವದ ಕಾರ್ಪೊರೇಟ್ ಕೋಮುವಾದಿ ಕೂಟದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಸಭೆ ನಿರ್ಧರಿಸಿತು.

ಲಾಕ್‌ಡೌನ್ ಸಮಯದಲ್ಲಿ 2020 ರಲ್ಲಿ ಕೇಂದ್ರ ಕಾರ್ಮಿಕ ಸಂಘಗಳು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡುವುದರ ಜೊತೆಗೆ ನಡೆದ ಐತಿಹಾಸಿಕ ರೈತ ಹೋರಾಟದ ಪ್ರಾರಂಭದ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಎಸ್‍ಕೆಎಂ 26 ನವೆಂಬರ್ 2024 ರಂದು ದೇಶಾದ್ಯಂತ ಜಂಟಿ ಪ್ರತಿಭಟನಾ ರ್ಯಾಲಿಗಳಲ್ಲಿ ಬೃಹತ್‍ ಪ್ರಮಾಣದಲ್ಲಿ ಜನಗಳನ್ನು ಅಣಿನೆರೆಸುತ್ತವೆ ಎಂದು ಸಭೆಯ ನಂತರ ನೀಡಿದ ಹೇಳಿಕೆಯು ತಿಳಿಸಿದೆ. ಕೃಷಿ ಕಾರ್ಮಿಕರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಸಂಘಟನೆಗಳು ಮತ್ತು ವೇದಿಕೆಗಳು ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.

ಸುಮಾರು ಐವತ್ತು ಜನ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರೀಯ ಕಾರ್ಮಿಕ ಸಂಘಗಳಿಂದ – ಐಎನ್‍ಟಿಯುಸಿಯ ಅಶೋಕ್ ಸಿಂಗ್, ಎಐಟಿಯುಸಿಯ ಅಮರ್ಜೀತ್ ಕೌರ್, ಹೆಚ್‍ಎಂಎಸ್‍ ನ ಹರ್ಭಜನ್ ಸಿಧು, ಸಿಐಟಿಯುನ ತಪನ್ ಸೇನ್, ಎಐಯುಟಿಯುಸಿ ಯ ಆರ್.ಕೆ. ಶರ್ಮಾ, ಎಐಸಿಸಿಟಿಯು ನ ರಾಜೀವ್ ದಿಮ್ರಿ ಎಸ್‍ಇಡಬ್ಲ್ಯುಎ ನ ಸೋನ್ಯಾ ಜಾರ್ಜ್, ಟಿಯುಸಿಸಿ ಯ ರಾಕೇಶ್ ಮಿಶ್ರಾ,ಯುಟಿಯುಸಿ ಯ ಶತ್ರುಜೀತ್ ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *