ಉದ್ಯೋಗಕ್ಕೆ ಬೇಕಾದ ಕೌಶಲ್ಯ ತರಬೇತಿಯಲ್ಲ – ಮತಗಳನ್ನು ಪಡೆಯುವ ದುರುದ್ದೇಶವಷ್ಟೆ

ಸಿ.ಸಿದ್ದಯ್ಯ

ಭಾರತ ಯೌವನಭರಿತವಾಗಿದೆ, ದುಡಿಯುವ ಜನ ಸಾಕಷ್ಟಿದ್ದಾರೆ ಎಂದು ಬಡಾಯಿ ಕೊಚ್ಚಿಕೊಂಡರಷ್ಟೇ ಸಾಲದು. ಪ್ರತಿ ವರ್ಷ ಲಕ್ಷಾಂತರ ಹೊಸ ಯುವಜನರು ಕೆಲಸಕ್ಕೆ ಬರುತ್ತಿದ್ದಾರೆ. ಹೊಸ ತಂತ್ರಜ್ಞಾನಗಳು ಸದಾ ಮುಂದೆ ಬರುತ್ತಿವೆ. ಅದಕ್ಕೆ ಅನುಗುಣವಾಗಿ ನಿಯಮಿತವಾಗಿ ತರಬೇತಿ ನೀಡದ ಹೊರತು ಯಾವುದೇ ಪ್ರಯೋಜನವಾಗುವುದಿಲ್ಲ. ಖಾಸಗಿಯವರು ಅಂತಹ ಜವಾಬ್ದಾರಿ ಹೊರಲು ಮುಂದೆ ಬಂದಿರುವ ಬಗ್ಗೆ ದಾಖಲೆಗಳೂ ಇಲ್ಲ. ಕಳೆದ ವರ್ಷ ಜೂನ್‌ನಲ್ಲಿ ಕೇಂದ್ರ ಸರ್ಕಾರವು ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫಾರ್ ಇಂಡಿಯಾ’ ಎಂಬ ಅಭಿಯಾನವನ್ನು ಆರಂಭಿಸಿತ್ತು. ಲಕ್ಷಗಟ್ಟಲೆ ಜನರಿಗೆ ತರಬೇತಿ ನೀಡಬೇಕು ಎಂದು ಸರ್ಕಾರ ಹೇಳಿತು. ವಾಸ್ತವಾಂಶ ಇದಕ್ಕೆ ವಿಭಿನ್ನವಾಗಿವೆ. ಯಾವುದೇ ದೇಶಕ್ಕೆ ನುರಿತ ಕೆಲಸಗಾರರ ಅಗತ್ಯವಿದೆ. ಇದು ಅವರ ಜೀವನ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ.

ಆಗಸ್ಟ್‌ನಲ್ಲಿ ಕೌಶಲ್ಯ ಹಣಕಾಸು ವರದಿ 2023 ಬಿಡುಗಡೆಗೊಂಡ ನಂತರ ಮತ್ತೊಮ್ಮೆ ದೇಶದಲ್ಲಿ ನುರಿತ ಕಾರ್ಮಿಕರ ಕೊರತೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಕೌಶಲ್ಯ (ಸ್ಕಿಲ್) ತರಬೇತಿಯ ಹೆಸರಲ್ಲಿ ನಡೆಯುವ ಕಾರ್ಯಕ್ರಮಗಳು ಯದ್ವಾತದ್ವಾ ವಿಫಲವಾಗಿದ್ದು ಹೇಗೆ ಎಂಬ ವಿಶ್ಲೇಷಣೆಗಳು ಈ ಹಿಂದೆಯೇ ನಡೆದಿದ್ದವು. ಕೌಶಲ್ಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ ಕೀರ್ತಿ ತಮ್ಮದು ಎಂದು ಕೇಂದ್ರ ಸರಕಾರ ಹೇಳಿಕೊಳ್ಳುತ್ತದೆ. ಇತರ ಯೋಜನೆಗಳಂತೆ, ಇದೂ ಕೂಡ ಜಾಹೀರಾತುಗಳಲ್ಲಿ ಹೇಳುವ ರೀತಿಯಲ್ಲಿ ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ಆಗಸ್ಟ್ 2023 ರ ಎರಡನೇ ವಾರದಲ್ಲಿ ಕೌಶಲ್ಯ ಹಣಕಾಸು ವರದಿ 2023 ಈ ಕೆಲವು ಅಂಶಗಳನ್ನು ಬಹಿರಂಗಪಡಿಸಿದೆ. ದೇಶದ ಶೇ. 78ರಷ್ಟು ಯುವಕರಿಗೆ ಕಲಿಯಬಹುದಾದ ಕೌಶಲ್ಯದ ಯೋಜನೆಗಳಿಲ್ಲ.

25.4 ಕೋಟಿ ಯುವಕರು 15-24 ವರ್ಷ ವಯಸ್ಸಿನವರಾಗಿದ್ದಾರೆ. ಅವರಲ್ಲಿ ಶೇಕಡ 46.2ರಷ್ಟು ಮಂದಿ ಮಾತ್ರ ಉದ್ಯೋಗಕ್ಕೆ ಅಗತ್ಯವಾದ ಉನ್ನತ ಕೌಶಲ್ಯಗಳನ್ನು ಹೊಂದಿದ್ದಾರೆ. ಒಟ್ಟಾರೆ ಕೌಶಲ್ಯ ಶ್ರೇಯಾಂಕದಲ್ಲಿ ನಮ್ಮ ದೇಶವು ವಿಶ್ವದಲ್ಲಿ 60 ನೇ ಸ್ಥಾನದಲ್ಲಿದೆ. 2015 ರ ಹೊತ್ತಿಗೆ, ನಮ್ಮ ದೇಶದ ಕಾರ್ಮಿಕರಲ್ಲಿ ಕೇವಲ 4.7 ಪ್ರತಿಶತದಷ್ಟು ಜನರು ಕೌಶಲ್ಯ ತರಬೇತಿಯನ್ನು ಪಡೆದಿದ್ದಾರೆ, ದಕ್ಷಿಣ ಕೊರಿಯಾದಲ್ಲಿ ಶೇ. 90, ಜಪಾನ್‌ನಲ್ಲಿ  ಶೇ. 80, ಬ್ರಿಟನ್‌ನಲ್ಲಿ ಶೇ. 68 ಮತ್ತು ಅಮೆರಿಕದಲ್ಲಿ ಶೇ.  52 ರಷ್ಟು ಕಾರ್ಮಿಕರು ಕೌಶಲ್ಯ ತರಬೇತಿಯನ್ನು ಪಡೆದಿದ್ದಾರೆ. ನಮ್ಮ ದೇಶದಲ್ಲಿ ತರಬೇತಿಯ ಹೆಚ್ಚಿನ ಅವಶ್ಯಕತೆಯಿದೆ ಮತ್ತು ನಿಧಿಯ ಹಂಚಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸಬೇಕು ಎಂದು ವರದಿ ಸಲಹೆ ನೀಡುತ್ತದೆ.

ತರಬೇತಿ ಪಡೆದವರು  18.04 ಲಕ್ಷ: ಉದ್ಯೋಗ ಪಡೆದವರು 2.53 ಲಕ್ಷ   ;

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ ಯುವಕರು ಎಂಬ ಪದವನ್ನು ಏಳು ಬಾರಿ ಉಚ್ಚರಿಸಿದರು. ಆದರೆ, ಅವರು  ಯುವಕರ ಕೌಶಲ್ಯದ ಕುರಿತು ಉಲ್ಲೇಖಿಸಲಿಲ್ಲ (ಇದು ಮೋದಿ ಸರ್ಕಾರ ಬರೆದುಕೊಟ್ಟ ಭಾಷಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ). 2023 ರ ಬಜೆಟ್‌ನಲ್ಲಿ ಘೋಷಿಸಲಾದ ಕೌಶಲ್ಯ ತರಬೇತಿ ಯೋಜನೆಗಳು ಕಾರ್ಯರೂಪಕ್ಕೆ ಬರಲು ಕೆಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮಾರ್ಚ್ 14, 2022 ರಂದು ಲೋಕಸಭೆಯಲ್ಲಿ ಉತ್ತರಿಸಿದ ಪ್ರಶ್ನೆಯ ಪ್ರಕಾರ, ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನ  (PMKVY) 1.0 ರ ಅಡಿಯಲ್ಲಿ 18.04 ಲಕ್ಷ ಜನರು ದಾಖಲಾಗಿ ಕೌಶಲ್ಯ ತರಬೇತಿ ಪಡೆದಿದ್ದಾರೆ. ಅದರಲ್ಲಿ 13.32 ಲಕ್ಷ ಜನರಿಗೆ ಕೌಶಲ್ಯ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಕೇವಲ 2.53 ಲಕ್ಷ ಜನರು ಅಥವಾ ಅವರಲ್ಲಿ ಶೇ. 19 ಜನರು ಮಾತ್ರ ಉದ್ಯೋಗವನ್ನು ಕಂಡುಕೊಂಡಿದ್ದಾರೆ. PMKVY 3.0 ರ ಪ್ರಕಾರ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯವನ್ನು ಒದಗಿಸಲು ನಿರ್ಧರಿಸಲಾಯಿತು. ಇದು ತಮಿಳುನಾಡು, ಕರ್ನಾಟಕದಂತಹ ಕೈಗಾರಿಕೀಕರಣಗೊಂಡ ರಾಜ್ಯಗಳಲ್ಲೂ ಒಟ್ಟಾರೆಯಾಗಿ ವಿಫಲವಾಗಿದೆ.

PMKVY 3.0 ರಲ್ಲಿ 4.98 ಲಕ್ಷ ಜನರು ದಾಖಲಾಗಿದ್ದಾರೆ.  ಇವರಲ್ಲಿ 4.45 ಲಕ್ಷ ಜನರು ಸಂಪೂರ್ಣ ತರಬೇತಿ ಪಡೆದಿದ್ದಾರೆ. ಅವರಲ್ಲಿ 1.72 ಲಕ್ಷ ಮಂದಿ ಪ್ರಮಾಣ ಪತ್ರ ಪಡೆದಿದ್ದಾರೆ. ಅವರಲ್ಲಿ 15,450 ಮಂದಿಗೆ ಮಾತ್ರ ಉದ್ಯೋಗ ಸಿಕ್ಕಿದೆ. PMKVY 1.0 ರಲ್ಲಿ 12,218 ಕೌಶಲ್ಯ ತರಬೇತಿ ಕೇಂದ್ರಗಳು, 2.0 ರಲ್ಲಿ 9,030 ಕೇಂದ್ರಗಳು ಮತ್ತು 3.0 ರಲ್ಲಿ 683 ಮಾತ್ರ. ಇದು ಆ ವಿಶ್ಲೇಷಣೆಯ ಸಾರಾಂಶ.

ಇದನ್ನೂ ಓದಿ:ಮಾನವ ವಿರೋಧಿ, ರಾಷ್ಟ್ರ ವಿರೋಧಿ ಗಾದೆಗಳನ್ನು ಸೃಷ್ಟಿಸಿದವರು ಯಾರು?

ಭಾರತ ಯೌವನಭರಿತವಾಗಿದೆ, ದುಡಿಯುವ ಜನ ಸಾಕಷ್ಟಿದ್ದಾರೆ ಎಂದು ಬಡಾಯಿ ಕೊಚ್ಚಿಕೊಂಡರಷ್ಟೇ ಸಾಲದು. ಪ್ರತಿ ವರ್ಷ ಲಕ್ಷಾಂತರ ಹೊಸ ಯುವಜನರು ಕೆಲಸಕ್ಕೆ ಬರುತ್ತಿದ್ದಾರೆ. ಹೊಸ ತಂತ್ರಜ್ಞಾನಗಳು ಸದಾ ಮುಂದೆ ಬರುತ್ತಿವೆ. ಅದಕ್ಕೆ ಅನುಗುಣವಾಗಿ ನಿಯಮಿತವಾಗಿ ತರಬೇತಿ ನೀಡದ ಹೊರತು ಯಾವುದೇ ಪ್ರಯೋಜನವಾಗುವುದಿಲ್ಲ. ಖಾಸಗಿಯವರು ಅಂತಹ ಜವಾಬ್ದಾರಿ ಹೊರಲು ಮುಂದೆ ಬಂದಿರುವ ಬಗ್ಗೆ ದಾಖಲೆಗಳೂ ಇಲ್ಲ. ಕಳೆದ ವರ್ಷ ಜೂನ್‌ನಲ್ಲಿ ಕೇಂದ್ರ ಸರ್ಕಾರವು ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫಾರ್ ಇಂಡಿಯಾ’ ಎಂಬ ಅಭಿಯಾನವನ್ನು ಆರಂಭಿಸಿತ್ತು. ಲಕ್ಷಗಟ್ಟಲೆ ಜನರಿಗೆ ತರಬೇತಿ ನೀಡಬೇಕು ಎಂದು ಸರ್ಕಾರ ಹೇಳಿತು. ವಾಸ್ತವಾಂಶ ಇದಕ್ಕೆ ವಿಭಿನ್ನವಾಗಿವೆ. ಯಾವುದೇ ದೇಶಕ್ಕೆ ನುರಿತ ಕೆಲಸಗಾರರ ಅಗತ್ಯವಿದೆ. ಇದು ಅವರ ಜೀವನ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ.

21ನೇ ಸ್ಥಾನದಲ್ಲಿ ಭಾರತ;

ಅಮೇರಿಕನ್ ಮಾಧ್ಯಮ ಯುಎಸ್ ನ್ಯೂಸ್ ಸೆಪ್ಟೆಂಬರ್ 2022 ರಲ್ಲಿ 85 ದೇಶಗಳ ಪರಿಸ್ಥಿತಿಗಳನ್ನು ಸಮೀಕ್ಷೆ ಮಾಡಿ ಪಟ್ಟಿಯನ್ನು ಪ್ರಕಟಿಸಿತು. ಕಾರ್ಮಿಕ ಕೌಶಲ್ಯದ ವಿಷಯದಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾದ ನಂತರ ಚೀನಾ ಮೂರನೇ ಸ್ಥಾನದಲ್ಲಿದೆ. ನಮ್ಮ ದೇಶ ಇಪ್ಪತ್ತೊಂದನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ, ಚೀನಾ ಎಲ್ಲಾ ರೀತಿಯ ಕೌಶಲ್ಯಗಳಲ್ಲಿ 17 ನೇ ರಾಷ್ಟ್ರ
ವಾಗಿದೆ, ಆದರೆ ನಾವು 31 ನೇ ಸ್ಥಾನದಲ್ಲಿದೆ. ಯಾವುದೇ ದೇಶವು ಕೌಶಲ ನಿರ್ಮಾಣಕ್ಕೆ ಮಾತ್ರವಲ್ಲದೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಭಾರಿ ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ನಮ್ಮ ದೇಶದಲ್ಲಿ ಇವೆರಡೂ ಇಲ್ಲ.

ಮತ್ತೊಂದು ಪ್ರಶ್ನೆ, ನಾವು ಎಲ್ಲಿದ್ದೇವೆ ಮತ್ತು ನಾವು ಏನು ಮಾಡುತ್ತಿದ್ದೇವೆ? ಮಾಡಲು ಕೆಲಸವಿಲ್ಲದೇ, ಉದ್ಯೋಗಕ್ಕೆ ಬೇಕಿರುವ ಕೌಶಲವಿಲ್ಲದೇ, ನಾಮಮಾತ್ರದ ಕೂಲಿಗೆ ದುಡಿಯುತ್ತಿರುವ ಯುವಕರನ್ನು ದಾರಿ ತಪ್ಪಿಸುವ ಪರಿಸ್ಥಿತಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ನೋಡದೆ ಗೋವಿನ ಸಗಣಿ ಮತ್ತು ಮೂತ್ರದಿಂದ ಚಿನ್ನವನ್ನು ಹೊರತೆಗೆದರೆ ನಾವು ಶ್ರೀಮಂತ ದೇಶವಾಗುತ್ತೇವೆ ಎಂದುಕೊಂಡರೆ ಅತಿಶಯೋಕ್ತಿಯಲ್ಲ.

Donate Janashakthi Media

Leave a Reply

Your email address will not be published. Required fields are marked *