ಸೀತಾರಾಮ್ ಯೆಚೂರಿ – ಕಾಕಿನಾಡದಿಂದ ದೆಹಲಿಯವರೆಗೆ

ಸೀತಾರಾಮ್ ಯೆಚೂರಿ ಅವರು 1952 ರ ಆಗಸ್ಟ್ 12 ರಂದು ಮದ್ರಾಸಿನ ತೆಲುಗು ಕುಟುಂಬದಲ್ಲಿ ಜನಿಸಿದರು. ತಂದೆ ಸರ್ವೇಶ್ವರ ಸೋಮಯಾಜುಲ ಯೆಚೂರಿ ಮತ್ತು ತಾಯಿ ಕಲ್ಪಕಂ ಯೆಚೂರಿಯವರು ಆಂಧ್ರಪ್ರದೇಶದ ಕಾಕಿನಾಡದವರು. ಯೆಚೂರಿಯವರ ತಂದೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (APSRTC) ಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ತಾಯಿ ಸರ್ಕಾರಿ ಉದ್ಯೋಗಿ. ತಾಯಿ ಇತ್ತೀಚೆಗೆ ತೀರಿಕೊಂಡರು. ಮದ್ರಾಸಿನಲ್ಲಿ ಹುಟ್ಟಿದರೂ ಯೆಚೂರಿ ಬೆಳೆದದ್ದು ಹೈದರಾಬಾದ್‌ನಲ್ಲಿ. 10ನೇ ತರಗತಿವರೆಗೆ ಆಲ್ ಸೇಂಟ್ಸ್ ಹೈಸ್ಕೂಲಿನಲ್ಲಿ ಓದಿದರು. 1969 ರಲ್ಲಿ ತೆಲಂಗಾಣ ಚಳವಳಿಯ ಸಮಯದಲ್ಲಿ ಅವರು ದೆಹಲಿ ಸೇರಿಕೊಂಡರು. ಅಲ್ಲಿ ಪ್ರೆಸಿಡೆಂಟ್ ಎಸ್ಟೇಟ್ ಶಾಲೆಗೆ ಸೇರಿ ಸಿಬಿಎಸ್ ಇ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದರು. ಸೀತಾರಾಮ್

ಅದರ ನಂತರ, ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ (ಆನರ್ಸ್) ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಎಂಎ ಅಧ್ಯಯನ ಮಾಡಿದರು. ಎರಡರಲ್ಲೂ ಪ್ರಥಮ ದರ್ಜೆಯಲ್ಲಿ ತೇರ್ಗಡೆ. ಅವರು ಅರ್ಥಶಾಸ್ತ್ರದಲ್ಲಿ ಪಿ ಎಚ್‌ ಡಿಗಾಗಿ ಜೆ ಎನ್‌ ಯು ಸೇರಿದರು. ತುರ್ತುಪರಿಸ್ಥಿತಿಯ ಸಮಯದಲ್ಲಿ ಅವರನ್ನು ಬಂಧಿಸಲಾಯಿತು ಮತ್ತು ಅಧ್ಯಯನವು ಮಧ್ಯದಲ್ಲಿಯೇ ನಿಂತುಹೋಯಿತು. ಸೀತಾರಾಮ್

ರಾಜಕೀಯ ಜೀವನ

1974ರಲ್ಲಿ ಯೆಚೂರಿ ಎಸ್‌ಎಫ್‌ಐ ಸೇರಿದರು. ಅದರ ಮುಂದಿನ ವರ್ಷ ಸಿಪಿಎಂ ನಲ್ಲಿ ಸೇರಿದರು. ಜೆಎನ್‌ಯು ವಿದ್ಯಾರ್ಥಿಯಾಗಿದ್ದಾಗ 1975ರಲ್ಲಿ ಅವರನ್ನು ಬಂಧಿಸಿದರು. ಬಂಧನಕ್ಕೂ ಮುನ್ನ ಯೆಚೂರಿ ಸ್ವಲ್ಪ ಕಾಲ ಅಜ್ಞಾತವಾಗಿ ಕಳೆದರು. ತುರ್ತು ಪರಿಸ್ಥಿತಿ ವಿರುದ್ಧ ಕೆಲಸ ಮಾಡಿದರು. ತುರ್ತು ಪರಿಸ್ಥಿತಿಯ ನಂತರ 1977-78ರಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೂರು ಅವಧಿಗೆ ಆಯ್ಕೆಯಾದರು. ಪ್ರಕಾಶ್ ಕಾರಟ್ ಜೊತೆಗೂಡಿ ಜೆಎನ್‌ಯುನಲ್ಲಿ ಅಜೇಯವಾದ ಎಡಪಂಥೀಯರ ಕೋಟೆಯನ್ನು ನಿರ್ಮಿಸಲು ಶ್ರಮಿಸಿದರು. 1978 ರಲ್ಲಿ ಯೆಚೂರಿ ಎಸ್‌ಎಫ್‌ಐ ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಇದನ್ನೂ ಓದಿ: ಮುಡಾ ಪ್ರಕರಣ| ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಅಂತ್ಯ : ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಆ ನಂತರ ಎಸ್‌ಎಫ್‌ಐನ ಅಖಿಲ ಭಾರತ ಅಧ್ಯಕ್ಷರಾದರು. 1984ರಲ್ಲಿ ಅವರನ್ನು ಸಿಪಿಎಂನ ಕೇಂದ್ರ ಸಮಿತಿಗೆ ಆಯ್ಕೆ ಮಾಡಿಕೊಂಡರು. 1985 ರಲ್ಲಿ ರಚನೆಯಾದ ಪಕ್ಷದ ಕೇಂದ್ರ ಸಮಿತಿ ಸದಸ್ಯ ಸದಸ್ಯರಾದರು. ಯೆಚೂರಿ, ಕಾರಟ್, ಸುನಿಲ್ ಮೊಯಿತ್ರಾ, ಪಿ.ರಾಮಚಂದ್ರನ್ ಮತ್ತು ಎಸ್.ರಾಮಚಂದ್ರನ್ ಪಿಳ್ಳೈ ಅವರಿದ್ದ ಕೇಂದ್ರ ಸಮಿತಿಯು ಪಾಲಿಟ್‌ಬ್ಯೂರೋ ನಿರ್ದೇಶನದಲ್ಲಿ ಕೆಲಸ ಮಾಡಿದೆ. 1986ರವರೆಗೆ ಯೆಚೂರಿ ಎಸ್‌ಎಫ್‌ಐನಲ್ಲಿ ಮುಂದುವರಿದಿದ್ದರು. ಅವರು 1992 ರಲ್ಲಿ ನಡೆದ ಸಿಪಿಎಂನ 14 ನೇ ಅಖಿಲ ಭಾರತ ಮಹಾಧಿವೇಶನದಲ್ಲಿ ಪಕ್ಷದ ಪಾಲಿಟ್‌ಬ್ಯೂರೋಗೆ ಆಯ್ಕೆಯಾದರು. 19 ಏಪ್ರಿಲ್ 2015 ರಂದು ವಿಶಾಖಪಟ್ಟಣದಲ್ಲಿ ನಡೆದ ಪಕ್ಷದ
15 ನೇ ರಾಷ್ಟ್ರೀಯ ಮಹಾಧಿವೇಶನದಲ್ಲಿ ಸಿಪಿಐ(ಎಂ) ನ ಐದನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಏಪ್ರಿಲ್ 2018 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಸಿಪಿಎಂನ 22 ನೇ ಮಹಾಧಿವೇಶನದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾದರು. ಏಪ್ರಿಲ್ 2022 ರಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆದ ಪಕ್ಷದ 23 ನೇ ಮಹಾಧಿವೇಶನದಲ್ಲಿ ಯೆಚೂರಿ ಅವರನ್ನು ಮೂರನೇ ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಸೀತಾರಾಮ್

ಸಮ್ಮಿಶ್ರ ರಾಜಕಾರಣದಲ್ಲಿ ಸಿಪಿಐ(ಎಂ)ನ ಮಾಜಿ ಪ್ರಧಾನ ಕಾರ್ಯದರ್ಶಿ ಹರಿಕಿಶನ್ ಸಿಂಗ್ ಸುರ್ಜಿತ್ ಅವರು ನಿರ್ವಹಿಸಿದ ಪಾತ್ರ ಅಸಂಖ್ಯಾತ. ಯೆಚೂರಿ ಅದನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ದರು. 1996ರಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರಕ್ಕಾಗಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಜೊತೆಗೂಡಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರಚಿಸಿದರು. 2004ರಲ್ಲಿ ಯುಪಿಎ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಒಕ್ಕೂಟ ರಚನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಜನರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಅವರು ಅವಿರತ ಹೋರಾಟ ನಡೆಸಿದರು. ‘ವಿವಿಧತೆಯಲ್ಲಿ ಏಕತೆ’ ಎಂಬ ಸಿದ್ಧಾಂತದಲ್ಲಿ ವಿಶ್ವಾಸ ಇಟ್ಟವರು. ದೇಶದಲ್ಲಿ ಎಲ್ಲಿ ಹಿಂಸೆ ನಡೆದರೂ ಅದರ ವಿರುದ್ಧ ಧ್ವನಿ ಎತ್ತುವವರು. ಸೀತಾರಾಮ್

ಪಕ್ಷದ ಅಂತಾರಾಷ್ಟ್ರೀಯ ವಿಭಾಗದ ಯೆಚೂರಿ ನೇತೃತ್ವ ವಹಿಸಿದ್ದರು. ಅನೇಕ ಸಮಾಜವಾದಿ ದೇಶಗಳಲ್ಲಿ ಪಕ್ಷದ ಮಹಾಸಭೆಗಳು ನಡೆದ ಸಂದರ್ಭದಲ್ಲಿ ಸ್ನೇಹಪರ ಪ್ರತಿನಿಧಿಯಾಗಿ ಅವರು ಭಾಗವಹಿಸುತ್ತಿದ್ದರು. ಸೀತಾರಾಮ್

ರಾಜ್ಯಸಭಾ ಸದಸ್ಯರಾಗಿ

2005ರಲ್ಲಿ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಯೆಚೂರಿ ಆಯ್ಕೆಯಾಗಿದ್ದರು. ಅನೇಕ ಪ್ರಮುಖ ವಿಷಯಗಳನ್ನು ಸಂಸತ್ತಿನ ಗಮನಕ್ಕೆ ತಂದವರು. ಪ್ರಮುಖ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದವರು. ಸಂಸತ್ತಿನ ಕಲಾಪಕ್ಕೆ ಆಗಾಗ ಅಡ್ಡಿಪಡಿಸುತ್ತಿದ್ದಾರೆ ಎಂದು ಆಡಳಿತ ಪಕ್ಷ ಟೀಕಿಸಿದಾಗ ‘ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಮೇಲೆ ಆರೋಪ ಹೊರಿಸಿ ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು’ ಎಂದು ಉತ್ತರಿಸಿದರು. ಸಂಸತ್ತಿಗೆ ಅಡ್ಡಿಪಡಿಸುವುದು ಪ್ರಜಾಪ್ರಭುತ್ವದಲ್ಲಿ ಕಾನೂನುಬದ್ಧ ಪ್ರಕ್ರಿಯೆ ಎಂದು ಹೇಳಿದರು. ಭಾರತ-ಅಮೆರಿಕ ಅಣು ಒಪ್ಪಂದಕ್ಕಾಗಿ ಸಮಾಲೋಚನೆಗಳು ನಡೆಯುತ್ತಿರುವ ಸಮಯದಲ್ಲಿ ಅದಕ್ಕೆ ತಮ್ಮ ಪಕ್ಷ ವಿಧಿಸಿದ್ದ ಎಲ್ಲ ಷರತ್ತುಗಳನ್ನು ಯೆಚೂರಿ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಸಿಪಿಐ(ಎಂ) ಷರತ್ತುಗಳು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತೃಪ್ತಿಪಡಿಸಿದವು. ಸೀತಾರಾಮ್

ಮಾರ್ಚ್ 3, 2015 ರಂದು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾಡಿದ ಭಾಷಣಕ್ಕೆ ಯೆಚೂರಿ ತಿದ್ದುಪಡಿಯನ್ನು ಪ್ರಸ್ತಾಪಿಸಿದರು. ಅದನ್ನು ರಾಜ್ಯಸಭೆ ಅನುಮೋದಿಸಿದ್ದು ಮೋದಿ ಸರ್ಕಾರಕ್ಕೆ ತಲೆತಗ್ಗಿಸುವಂತೆ ಮಾಡಿತು. ಯೆಚೂರಿ ಅವರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹೇಳಿದರು. ರಾಷ್ಟ್ರಪತಿಯವರ ಭಾಷಣಕ್ಕೆ ತಿದ್ದುಪಡಿ ತರಲು ಮುಂದಾಗಿರುವುದು ಸಂಪ್ರದಾಯವಲ್ಲ ಎಂದು, ಹಾಗಾಗಿ ಅದನ್ನು ಹಿಂಪಡೆಯಲು ಸೂಚಿಸಿದರು. ಎಂದಿನಂತಿದ್ದರೆ ಈ ಮನವಿಯನ್ನು ಸ್ವೀಕರಿಸುತ್ತಿದ್ದೆ, ಆದರೆ 14 ಗಂಟೆಗಳ ಚರ್ಚೆಯ ನಂತರವೂ ಸರ್ಕಾರವು ಬಗ್ಗದ ಕಾರಣಕ್ಕಾಗಿ ತಿದ್ದುಪಡಿಗೆ ಒತ್ತಾಯಿಸುತ್ತಿರುವುದಾಗಿ ಯೆಚೂರಿ ಉತ್ತರಿಸಿದರು. ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲೆ ಪ್ರತಿಪಕ್ಷಗಳು ಮಂಡಿಸಿದ ತಿದ್ದುಪಡಿಯನ್ನು ಸದನವು ಅಂಗೀಕರಿಸಿದ್ದು ರಾಜ್ಯಸಭೆಯ ಇತಿಹಾಸದಲ್ಲಿ ಇದು ನಾಲ್ಕನೇ ಬಾರಿ. ಸೀತಾರಾಮ್

ವೈಯಕ್ತಿಕ ಜೀವನ

ಯೆಚೂರಿ ಪತ್ನಿ ಸೀಮಾ ಚಿಸ್ತಿ ಪತ್ರಕರ್ತೆ. ಅವರು 'ದಿ ವೈರ್' ಪೋರ್ಟಲ್‌ನ ಸಂಪಾದಕರಾಗಿ ಮತ್ತು ಮೊದಲು ಬಿಬಿಸಿ ಹಿಂದಿ ಸೇವೆಗಳ ಸಂಪಾದಕರಾಗಿ ಕೆಲಸ ಮಾಡಿದರು. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ದೆಹಲಿ ನಿವಾಸಿ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಯೆಚೂರಿ ಅವರ ಪುತ್ರಿ ಅಖಿಲಾ ಯೆಚೂರಿ ಅವರು ಎಡಿನ್‌ಬರ್ಗ್ ವಿಶ್ವವಿದ್ಯಾಲಯ ಮತ್ತು ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿದ್ದಾರೆ. ಆಂಧ್ರಪ್ರದೇಶ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಮೋಹನ್ ಕಾಂಡ ಯೆಚೂರಿ ಅವರ ಚಿಕ್ಕಪ್ಪ. ಯೆಚೂರಿ ಅವರ ಪುತ್ರ ಆಶಿಶ್ ಯೆಚೂರಿ ಅವರು ಕೋವಿಡ್‌ನಿಂದಾಗಿ ಏಪ್ರಿಲ್ 22, 2021 ರಂದು ನಿಧನರಾದರು. ಸೀತಾರಾಮ್

2020 ರ ದೆಹಲಿ ಗಲಭೆ ಪ್ರಕರಣದಲ್ಲಿ ಯೆಚೂರಿ, ಯೋಗೇಂದ್ರ ಯಾದವ್ ಮತ್ತು ಇತರರನ್ನು ಪೂರಕ ಚಾರ್ಜ್ ಶೀಟ್‌ನಲ್ಲಿ ಸೇರಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಯೆಚೂರಿ, ವಿರೋಧ ಪಕ್ಷಗಳನ್ನು ಗುರಿಯಾಗಿಸಲು ಬಿಜೆಪಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಟೀಕಿಸಿದರು.

ಬರಹಗಾರರಾಗಿ…

ಯೆಚೂರಿ ಅವರು ಲೇಖಕರಾಗಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ವಾಟ್ ಇಸ್ ದಿಸ್ ಹಿಂದೂ ರಾಷ್ಟ್ರ? (ಕನ್ನಡದಲ್ಲಿ: ಏನಿದು ಹಿಂದೂ ರಾಷ್ಟ್ರ?), ಆನ್ ಗೋಲ್ವಾಲ್ಕರ್ ಫ್ಯಾಸಿಸ್ಟ್ ಐಡಿಯಾಲಜಿ ಅಂಡ್ ಸಫ್ರಾನ್ ಬ್ರಿಗೇಡ್ಸ್ ಪ್ರಾಕ್ಟಿಸ್ (An Golwalkar Fascist Ideology and Saffron Brigades Practice), ಸೂಡೋ ಹಿಂದುಯಿಸಂ ಎಕ್ಸ್ಪೋಸಡ್ (Pseudo Hinduism Exposed), ಕೇಸರಿ ಬ್ರಿಗೇಡ್ ಪುರಾಣಗಳು ಮತ್ತು ವಾಸ್ತವ (Saffron Brigade Myths and Reality),
ಇಂದು ಭಾರತೀಯ ರಾಜಕೀಯದಲ್ಲಿ ಜಾತಿ ಮತ್ತು ವರ್ಗ (Cast and Class in Indian Politics Today), ತೈಲ ಸಂಗ್ರಹದ ಕೊರತೆ ಅಥವಾ ಸೆಸ್ ಪೂಲ್ ಆಫ್ ಡಿಸಿಟ್ (Oil Pool Deficit or Cess Pool of Decit), ಬದಲಾಗುತ್ತಿರುವ ಜಗತ್ತಿನಲ್ಲಿ ಸಮಾಜವಾದ (Socialism in a Changing World) , Left Hand Drive: Concrete Analysis of Concrete Conditions,

ಮೋದಿ ಸರ್ಕಾರ: ನ್ಯೂ ಸರ್ಜ್ ಆಫ್ ಕಮ್ಯುನಲಿಸಂ (Modi Government: New Surge of Communalism), Communalism Versus Secularism, Grina Ki Rajneeti, ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ಪೀಪಲ್ಸ್ ಡೈರಿ ಆಫ್ ಫ್ರೀಡಂ ಸ್ಟ್ರಗಲ್, ದಿ ಗ್ರೇಟ್ ರಿವಾಲ್ಟ್ ಎ ಲೆಫ್ಟ್ ಅಪ್ರೈಸಲ್, ಗ್ಲೋಬಲ್ ಎಕನಾಮಿಕ್ ಕ್ರೈಸಿಸ್: ಎ ಮಾರ್ಕ್ಸ್‌ಸ್ಟ್ ಪರ್ಸ್ಪೆಕ್ಟಿವ್ ಎಂಬ ಪುಸ್ತಕಗಳು ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿವೆ. ದೀರ್ಘಕಾಲ ಸಿಪಿಎಂನ ಅಧಿಕೃತ ವಾರಪತ್ರಿಕೆ ‘ಪೀಪಲ್ಸ್ ಡೆಮಾಕ್ರಸಿ’ಯ ಸಂಪಾದಕರಾಗಿದ್ದರು. ಸೀತಾರಾಮ್

ಕೃಪೆ : ಸೆಪ್ಟೆಂಬರ್ ಪ್ರಜಾಶಕ್ತಿ,  13,2024 

ಇದನ್ನೂ ನೋಡಿ: ಬಿಸಿ ಪ್ರಳಯದ ಹೊಸ್ತಿಲಲ್ಲಿ ಕೃಷಿಕರ ಸಮಾಜಕ್ಕೆ ಹೊಸ ಸವಾಲುಗಳು – ನಾಗೇಶ ಹೆಗಡೆ Janashakthi Media

Donate Janashakthi Media

Leave a Reply

Your email address will not be published. Required fields are marked *