ಬೆಂಗಳೂರಿನಲ್ಲಿ ಪ್ರತಿ ತಿಂಗಳು ಕನಿಷ್ಠ ಒಂದು ಬಾಲ್ಯ ವಿವಾಹ!

ಬೆಂಗಳೂರು :  ವೇಗವಾಗಿ ಬೆಳೆಯುತ್ತಿರುವ ಜಾಗತಿಕ ನಗರವೆಂದು ಪರಿಗಣಿಸಲ್ಪಟ್ಟಿರುವ ಬೆಂಗಳೂರಿನಲ್ಲಿ 2020 ರಿಂದ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿವೆ ಎಂದು ವರದಿ ಬಹಿರಂಗ ಪಡಿಸಿದೆ. ಈ ವರ್ಷ 2022ರ ಜನವರಿಯಿಂದ ಆಗಸ್ಟ್‌ವರೆಗೆ ಬೆಂಗಳೂರಿನಲ್ಲಿ 51 ಬಾಲ್ಯವಿವಾಹ ದೂರುಗಳು ಬಂದಿದ್ದು, ಅವುಗಳಲ್ಲಿ 42 ಮಾತ್ರ ತಡೆಯಲು ಸಾಧ್ಯವಾಯಿತು ಎಂಬ ಮಾಹಿತಿ ಹೊರ ಬಿದ್ದಿದೆ.

ಈ ಕುರಿತು ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ, 2020 ರಿಂದ ಆಗಸ್ಟ್ 2022 ರ ನಡುವೆ ಬೆಂಗಳೂರಿನಲ್ಲಿ ಒಟ್ಟು 47 ವಿವಾಹಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿಅಂಶಗಳು ಹೇಳಿವೆ. 2.5 ವರ್ಷಗಳ ಈ ಅವಧಿಯಲ್ಲಿ ಒಟ್ಟು 279 ದೂರುಗಳು ಬಂದಿದ್ದು, 232 ಮದುವೆಗಳನ್ನು ಅಧಿಕಾರಿಗಳು ನಿಲ್ಲಿಸಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.

ದಿ ನ್ಯೂಸ್ ಮಿನಿಟ್ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ನಡೆಸುವ ಮದುವೆಯ ಯತ್ನಗಳಲ್ಲಿ ಕನಿಷ್ಠ 84% ರಷ್ಟು ಮದುವೆಗಳನ್ನು ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ ಪ್ರತಿ ತಿಂಗಳು ಒಂದಕ್ಕಿಂತ ಹೆಚ್ಚು ಬಾಲ್ಯ ವಿವಾಹಗಳು ಅಕ್ರಮವಾಗಿ ನಡೆಯುತ್ತಿವೆ ಎಂದು ಅಂಕಿಅಂಶಗಳು ಹೇಳಿವೆ.

ರಾಜ್ಯದಲ್ಲಿ 2021-22ರಲ್ಲಿ ಒಟ್ಟು 418 ಬಾಲ್ಯವಿವಾಹಗಳು ನಡೆದಿದ್ದು, 2017-18ಕ್ಕೆ ಹೋಲಿಸಿದರೆ ಇದು 300% ಹೆಚ್ಚಳವಾಗಿದೆ ಎಂದು ವರದಿಯೊಂದು ತಿಳಿಸಿದೆ. ಕೊರೊನಾ ಸಾಂಕ್ರಾಮಿಕದ ವೇಳೆ ಉಂಟಾದ ಉದ್ಯೋಗ ನಷ್ಟ ಮತ್ತು ಆರ್ಥಿಕ ಅಸಮಾನತೆಗಳ ವಿಸ್ತರಣೆಯಿಂದಾಗಿ ರಾಜ್ಯದಲ್ಲಿ ಬಾಲ್ಯವಿವಾಹಗಳ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

“ಉದ್ಯೋಗ ನಷ್ಟ, ಆನ್‌ಲೈನ್ ತರಗತಿಗಳು ಮತ್ತು ಕೊರೊನಾದಿಂದ ಮಕ್ಕಳು ಒಬ್ಬರು ಅಥವಾ ಇಬ್ಬರ ಪೋಷಕರನ್ನು ಕಳೆದುಕೊಳ್ಳುವುದು ಬಾಲ್ಯ ವಿವಾಹದ ಉಲ್ಬಣಕ್ಕೆ ನೀಡಬಹುದಾದ ಕೆಲವು ಕಾರಣಗಳಾಗಿವೆ” ಎಂದು ಗ್ಲೋಬಲ್ ಕನ್ಸರ್ನ್ಸ್ ಇಂಡಿಯಾದ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಬೃಂದಾ ಅಡಿಗ ಹೇಳುತ್ತಾರೆ.

“ಶಾಲೆಗಳು ಆನ್‌ಲೈನ್ ತರಗತಿಗಳ ಮೋಡ್‌ಗೆ ಬದಲಾಯಿಸಿದವು, ಆದರೆ ಪೋಷಕರು ತಮ್ಮ ಕೆಲಸವನ್ನು ಕಳೆದುಕೊಂಡರು. ಅನೇಕರು ತಮ್ಮ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಮಗುವಿಗೆ ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಬಹಳಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದು, ಕುಟುಂಬವನ್ನು ಸಾಕಲು ಕೆಲಸವನ್ನು ಹುಡುಕುತ್ತಿದ್ದಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ 15 ಕೋಟಿಗೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಶಾಲೆಗಳು ಪ್ರಾರಂಭವಾದ ನಂತರ, ಆನ್‌ಲೈನ್ ತರಗತಿಗಳು ಮತ್ತು ಪರೀಕ್ಷೆಗಳನ್ನು ತಪ್ಪಿಸಿದವರು ಅಂತರವನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ. ಜೊತೆಗೆ ಅವರು ಗಳಿಗೆ ಪ್ರಾರಂಭಿಸಿರುವುದರಿಂದ, ಶಾಲೆಗೆ ಹೋಗುವುದನ್ನು ನಿಲ್ಲಿಸಿ, ಕೆಲಸವನ್ನು ಮುಂದುವರಿಸಲು ನಿರ್ಧರಿಸಿದರು. ಈ ಸಮಯದಲ್ಲಿ ಹುಡುಗಿಯರ ಕೆಲಸದ ವಿಚಾರದಲ್ಲಿ ಪೋಷಕರು ಸುರಕ್ಷತೆಯ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ಹುಡುಗಿಯರು ಮನೆಯಲ್ಲಿಯೇ ಇರಲು ನಿರ್ಧರಿಸಿದರೆ, ಅದು ಅವರಿಗೆ ಮತ್ತೊಂದು ಹೊರೆಯಾಗಿತ್ತು. ಜೊತೆಗೆ ಹುಡುಗಿಯರನ್ನು ಪೋಷಕರು ಹೊಣೆಗಾರಿಕೆ ಎಂದು ಪರಿಗಣಿಸಿ, ಅವರಿಗೆ ಮದುವೆ ಮಾಡಲು ನಿರ್ಧರಿಸುತ್ತಾರೆ. ಮದುವೆ ಎಂಬುವುದು ಹೆಣ್ಣುಮಕ್ಕಳ ಸ್ಥಿರವಾದ ಭವಿಷ್ಯಕ್ಕೆ ಸಮನಾಗಿರುತ್ತದೆ ಎಂದು ಅವರು ಭಾವಿಸುತ್ತಾರೆ” ಎಂದು ಬೃಂದಾ ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *