ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಮೂರನೇ ಜಗತ್ತಿನ ದೇಶಗಳಿಗೆ ಮುಂದುವರಿದ ದೇಶಗಳು ನೀಡುವ ಸಾಲಗಳು ಅವುಗಳು ತಮ್ಮ ಬಳಕೆಯನ್ನೋ, ಹೂಡಿಕೆಯನ್ನೋ ‘ತ್ಯಾಗ’ ಮಾಡಿ ನೀಡಿದವುಗಳು ಎಂಬ ಭಾವನೆಯಿದೆ. ಆದರೆ ವಾಸ್ತವವಾಗಿ ಇದರ ಪರಿಣಾಮವಾಗಿ ಅವರ ಜನಗಳ ಬಳಕೆ , ಅದಕ್ಕೆ ಸಮನಾಗಿ ಅವರ ಒಟ್ಟು ಉತ್ಪಾದನೆ ಮತ್ತು ಅದಕ್ಕನುಗುಣವಾಗಿ ಉದ್ಯೋಗದ ಮಟ್ಟವೂ ಹೆಚ್ಚುತ್ತದೆ. ಇದು ಸರಳ ಅರ್ಥಶಾಸ್ತ್ರ. ಆದರೆ ಇದನ್ನು ಐಎಂಎಫ್, ವಿಶ್ವ ಅರ್ಥಶಾಸ್ತ್ರಜ್ಞರು ಮರೆಮಾಚಿ,. ಕಠಿಣ ಸಾಲ ಶರತ್ತುಗಳನ್ನು ವಿಧಿಸುತ್ತಾರೆ. ಸಾಲವನ್ನು ನಿಗದಿತ ಗಡುವಿನೊಳಗೆ ತೀರಿಸಬೇಕೆಂಬ ಷರತ್ತಿನ ಬದಲು, ಪ್ರತಿವರ್ಷ ತಮ್ಮ ರಫ್ತು ಗಳಿಕೆಯ ಒಂದು ನಿರ್ದಿಷ್ಟ ಪ್ರಮಾಣವನ್ನು ಸಾಲ ತೀರಿಸುವ ಉದ್ದೇಶಕ್ಕಾಗಿ ಮೀಸಲಿಡುವ ಅವಕಾಶ ನೀಡಬೇಕೆಂದು ಮತ್ತು ಸಾಲಗಾರ ದೇಶಗಳು ಸಾಮೂಹಿಕವಾಗಿ ಒತ್ತಾಯಿಸಬಹುದು. ಈ ನಿಟ್ಟಿನಲ್ಲಿ ಜಿ-2೦ರ ಪ್ರಸಕ್ತ ಅಧ್ಯಕ್ಷ ದೇಶವಾಗಿ ಭಾರತ ಮುಂದಡಿಯಿಡಬೇಕು. ಆಗ ಜಿ-2೦ರ ಅಧ್ಯಕ್ಷತೆ ಸರ‍್ಥಕವಾಗುತ್ತದೆ.
ಭಾರತ ಮತ್ತು ಇತರ ಮೂರನೆಯ ಜಗತ್ತಿನ ದೇಶಗಳು ಜಿ-2೦ ಶೃಂಗಸಭೆಯಲ್ಲಿ ಇಡೀ ಮೂರನೆಯ ಜಗತ್ತಿನ ದೇಶಗಳು ಸಮಾನವಾಗಿ ಎದುರಿಸುತ್ತಿರುವ ತರ‍್ತಿನ ಸಮಸ್ಯೆಗಳನ್ನು ಎತ್ತಿದಾಗ ಮಾತ್ರ, ಸಾಮ್ರಾಜ್ಯಶಾಹಿ ಶಕ್ತಿಗಳೊಂದಿಗೆ ಅವು ಜಿ-2೦ ಶೃಂಗಸಭೆಯ ಭಾಗವಾಗಿರುವುದನ್ನು ನೈತಿಕವಾಗಿ ಸರ‍್ಥಿಸಿಕೊಳ್ಳಬಹುದು. ಅಂತಹ ಸಮಸ್ಯೆಗಳ ಪೈಕಿ ಅತ್ಯಂತ ಪ್ರಮುಖವಾದುದೆಂದರೆ, ಬಹುಶಃ, ನವ-ಉದಾರವಾದಿ ಬಂಡವಾಳಶಾಹಿಯ ಪ್ರಸ್ತುತ ಬಿಕ್ಕಟ್ಟಿನ ಕಾರಣದಿಂದಾಗಿ ಮುನ್ನೆಲೆಗೆ ಬಂದಿರುವ ಈ ದೇಶಗಳ ಬಾಹ್ಯ ಸಾಲದ ಸಮಸ್ಯೆಯೇ. ಈ ಸಮಸ್ಯೆಗೆ ಪರಿಹಾರ ಪಡೆಯುವ ವಿಷಯವನ್ನು ಮುಂದಿನ ಜಿ-2೦ ಶೃಂಗಸಭೆಯ ಆತಿಥ್ಯ ವಹಿಸಿರುವ ಮತ್ತು ಅದರ ಅಧ್ಯಕ್ಷನಾಗಿರುವ ಭಾರತವು ಜಿ-2೦ ಸಭೆಯಲ್ಲಿ ಪ್ರಸ್ತಾಪಿಸಬೇಕು. ಬಾಹ್ಯ ಸಾಲದ ಸಮಸ್ಯೆ ಬಗ್ಗೆ ಬಹಳ ಗೊಂದಲವಿರುವುದರಿಂದ, ಸರಳ ಅರ್ಥಶಾಸ್ತ್ರ ಮೂಲಕ ಈ ವಿಷಯದಲ್ಲಿ ಒಂದಿಷ್ಟು ಸ್ಪಷ್ಟತೆಯನ್ನು ಪಡೆಯಬಹುದು. ಅದು ಹೇಗೆಂಬುದನ್ನು ನೋಡೋಣ.
ಮೂರನೇ ಜಗತ್ತಿನ ಬಾಹ್ಯ ಸಾಲದ ಬಗ್ಗೆ ಸಾಮಾನ್ಯವಾಗಿರುವ ಒಂದು ಗ್ರಹಿಕೆ ಎಂದರೆ, ಮುಂದುವರಿದ ಬಂಡವಾಳಶಾಹಿ ದೇಶಗಳು ಈ ಸಾಲಗಳನ್ನು ನೀಡಲು ಬೇಕಾಗುವ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಲು ತಮ್ಮ ಆಂತರಿಕ ಬಳಕೆಯನ್ನೊ ಅಥವಾ ಹೂಡಿಕೆಯನ್ನೊ ತ್ಯಜಿಸಿದ್ದವು ಎಂಬುದು ಮುಂದುವರಿದ ದೇಶಗಳ ಹಣಕಾಸು ಸಂಸ್ಥೆಗಳಿಂದ ಪಡೆದ ಈ ಸಾಲಗಳನ್ನು ಮೂರನೇ ಜಗತ್ತಿನ ದೇಶಗಳು ತಮ್ಮ ಚಾಲ್ತಿ ಖಾತೆ ಕೊರತೆಯನ್ನು ಸರಿದೂಗಿಸಿಕೊಂಡ ನಂತರ ಉಳಿದ ಮೊತ್ತವನ್ನು ತಮ್ಮ ವಿದೇಶಿ ವಿನಿಮಯ ಮೀಸಲುಗಳಿಗೆ ಸೇರಿಸಿಕೊಳ್ಳುತ್ತವೆ. ಆದ್ದರಿಂದ ಅದು ನಿವ್ವಳ ಸಾಲವಾಗುವುದಿಲ್ಲ. ಒಂದು ನಿರ್ದಿಷ್ಟ ವರ್ಷದಲ್ಲಿ ಚಾಲ್ತಿ ಖಾತೆ ಕೊರತೆಗಾಗಿ ಹಣ ಹೊಂದಿಸಿಕೊಂಡ ಒಂದು ನರ‍್ದಿಷ್ಟ ನಿವ್ವಳ ಸಾಲವೂ ಇದ್ದಿರಬಹುದು. ಅಂಥಹ ಒಂದು ಕೊರತೆ ಇಲ್ಲದಿದ್ದ ಸನ್ನಿವೇಶದಲ್ಲೂ, ಸಾಲದ ಮೇಲೆ ಚಕ್ರಬಡ್ಡಿ ವಿಧಿಸುವ ಕಾರಣದಿಂದ ನಿವ್ವಳ ಸಾಲದ ಮೊತ್ತವು ಬೆಳೆಯುತ್ತಲೇ ಹೋಗುತ್ತದೆ. ಆದರೆ, ಈ ಎಲ್ಲ ನಿವ್ವಳ ಸಾಲಗಳನ್ನೂ ಪ್ರಾಥಮಿಕವಾಗಿ ಚಾಲ್ತಿ ಖಾತೆ ಕೊರತೆಗಳನ್ನು ಸರಿದೂಗಿಸುವ ಉದ್ದೇಶಕ್ಕಾಗಿಯೇ ಪಡೆಯಲಾಗಿರುತ್ತದೆ. ಜೊತೆಗೆ, ಈ ಸಾಲಗಳ ನೀಡಿಕೆಯು ಆ ದೇಶಗಳ ತ್ಯಾಗದ ಒಂದು ಪ್ರತೀಕವಾಗಿರುವುದರಿಂದ, ನಂತರದ ದಿನಗಳಲ್ಲಿ ಈ ಸಾಲಗಳನ್ನು ತೀರಿಸಬೇಕಾಗುತ್ತದೆ.
ತಪ್ಪು ಗ್ರಹಿಕೆ
ಈ ಇಡೀ ಗ್ರಹಿಕೆಯೇ ತಪ್ಪು ಎಂಬುದನ್ನು ಸರಳ ಅರ್ಥಶಾಸ್ತ್ರ ತೋರಿಸುತ್ತದೆ. ಹೇಗೆಂದರೆ, ಯಾವುದೇ ಒಂದು ಸರಕಿನ ಪೂರೈಕೆಗೆ ಹೋಲಿಸಿದರೆ, ಅದರ ಮೇಲಿನ ಬೇಡಿಕೆಯು ಇಳಿದಾಗ ಅದರ ಹೊಂದಾಣಿಕೆಯು ಮೂರು ರೀತಿಯಲ್ಲಿ ಸಾಧ್ಯವಿದೆ: ಆ ಸರಕಿನ ಬೆಲೆ ಕುಸಿಯಬಹುದು ಅಥವಾ ಆ ಸರಕನ್ನು ದಾಸ್ತಾನಿನಲ್ಲಿ ಇಟ್ಟುಕೊಳ್ಳಬಹುದು ಅಥವಾ ಆ ಸರಕಿನ ಉತ್ಪಾದನೆ ಕುಸಿಯಬಹುದು. ಈಗ, ತಯಾರಿಕಾ ಸರಕುಗಳ (ಮತ್ತು ಸೇವೆಗಳ) ಬೆಲೆ ಕುಸಿಯುವ ಬಗ್ಗೆ ಹೇಳುವುದಾದರೆ, ಅವುಗಳ ಬೆಲೆಗಳನ್ನು ಸಾಮಾನ್ಯವಾಗಿ ಹಿಡಿಯಷ್ಟು ಪ್ರಬಲ ಉತ್ಪಾದಕರ(ಒಲಿಗೋಪೊಲಿಸ್ಟಿಕ್) ಕೂಟದವರು ನಿರ್ಧರಿಸುತ್ತಾರೆ. ಆದ್ದರಿಂದ (ಬಹುಶಃ ಅವರ ಒಂದು ಅಲ್ಪಾವಧಿ ಕುಟಿಲ ತಂತ್ರವನ್ನು ಹೊರತುಪಡಿಸಿ) ಅವುಗಳ ಬೆಲೆಗಳು ಇಳಿಯುವುದಿಲ್ಲ. ಅಂತೆಯೇ, ಆ ಸರಕಿನ ದಾಸ್ತಾನುಗಳು ಸಂಗ್ರಹದಲ್ಲಿ ಹಾಗೆಯೇ ಉಳಿದಿದ್ದರೆ, ತ್ವರಿತವಾಗಿ ಅವುಗಳನ್ನು ಬಳಸಿಕೊಳ್ಳಲಾಗುತ್ತದೆ. ಹಾಗಾಗಿ, ಬೃಹತ್ ದಾಸ್ತಾನುಗಳು ಹೆಚ್ಚು ಕಾಲ ಹಾಗೆಯೇ ಉಳಿಯುವುದಿಲ್ಲ. ಅಂತೆಯೇ, ಆ ಸರಕಿನ ಬೇಡಿಕೆಯ ಕುಸಿತವು ಅದರ ಉತ್ಪಾದನೆಯನ್ನು ಮೊಟಕುಗೊಳಿಸಲು ಕಾರಣವಾಗುತ್ತದೆ. ಹಾಗಾಗಿ, ಅರ್ಥವ್ಯವಸ್ಥೆಯನ್ನು ಒಟ್ಟಾಗಿ ನೋಡಿದರೆ, ಅಂದರೆ ಎಲ್ಲಾ ಸರಕುಗಳ (ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿರುವ ಹಾಗೆ ಇವು ಸಾಮಾನ್ಯವಾಗಿ ತಯಾರಿಸಿದ ಸರಕುಗಳು ಮತ್ತು ಸೇವೆಗಳಾಗಿದ್ದರೆ), ಉತ್ಪಾದನೆಯು ಯಾವುದೇ ಸಮಯದಲ್ಲಿ ಗಮನಿಸಿದಾಗಲೂ ಅದೇ ಆಗಿರುತ್ತದೆ. ಏಕೆಂದರೆ, ಅದರ ಮೇಲಿನ ಬೇಡಿಕೆಯು ಹೆಚ್ಚುವುದೂ ಇಲ್ಲ ಅಥವಾ ಇಳಿಯುವುದೂ ಇಲ್ಲ. ಹಾಗಾಗಿಯೇ, ಬಂಡವಾಳಶಾಹಿಯು ಒಂದು ಬೇಡಿಕೆ-ನರ‍್ಬಂಧಿತ ವ್ಯವಸ್ಥೆಯಾಗಿದೆ: ಬಂಡವಾಳಶಾಹಿಯ ಅಡಿಯಲ್ಲಿ, ಯಾವುದೇ ಒಂದು ನಿರ್ದಿಷ್ಟ ಅವಧಿಯಲ್ಲಿ, ಒಟ್ಟು ಬೇಡಿಕೆಯು ಸಾಕಷ್ಟು ಇಲ್ಲದ ಪರಿಸ್ಥಿತಿಯಲ್ಲಿ ಉತ್ಪಾದನೆಯನ್ನು ಮತ್ತು ಉದ್ಯೋಗವನ್ನು ಹೆಚ್ಚಿಸುವುದಿಲ್ಲ.
ಈಗ ಮೂರನೇ ಜಗತ್ತಿನ ದೇಶಗಳ ಚಾಲ್ತಿ ಖಾತೆ ಕೊರತೆಯ ಬಗ್ಗೆ ಹೇಳುವುದಾದರೆ, ಮೆಟ್ರೋಪಾಲಿಟನ್(ಮುಂದುವರೆದ) ದೇಶಗಳಿಗೆ ಹೋಲಿಸಿದರೆ ಮೂರನೇ ಜಗತ್ತಿನ ದೇಶಗಳ ಪ್ರಸ್ತುತ ಚಾಲ್ತಿ ಖಾತೆ ಕೊರತೆಗಳು, ಮೆಟ್ರೋಪಾಲಿಟನ್ ದೇಶಗಳ ಚಾಲ್ತಿ ಖಾತೆಯ ಮಿಗುತೆಯಲ್ಲದೆ ಬೇರೇನೂ ಅಲ್ಲ. ಈ ಮಿಗುತೆ ಎಂಬುದು ಒಟ್ಟಾರೆ ಬೇಡಿಕೆಯ ಒಂದು ಅಂಗ. ಈ ಮಿಗುತೆಯು ಇಲ್ಲದಿದ್ದರೆ, ಅಷ್ಟರ ಮಟ್ಟದ ಉತ್ಪಾದನೆಯೂ ಇರುವುದಿಲ್ಲ. ಮೂರನೇ ಜಗತ್ತಿನ ದೇಶಗಳು ಮೆಟ್ರೋಪಾಲಿಟನ್ ದೇಶಗಳಿಂದ ಪಡೆದ ನಿಜ ಸರಕುಗಳು ಮತ್ತು ಸೇವೆಗಳು ನಿಖರವಾಗಿ ಈ ಸಾಲಗಳನ್ನು ನೀಡಿದ್ದರಿಂದಲೇ ಉತ್ಪಾದಿಸಲ್ಪಟ್ಟಿರುತ್ತವೆ. ಹಾಗಾಗಿ, ಮೂರನೇ ಜಗತ್ತಿನ ದೇಶಗಳಿಗೆ ಈ ಸಾಲಗಳನ್ನು ನೀಡುವ ಮೆಟ್ರೋಪಾಲಿಟನ್ ದೇಶಗಳು ತಮ್ಮ ಆಂತರಿಕ ಬಳಕೆಯನ್ನಾಗಲಿ ಅಥವಾ ಹೂಡಿಕೆಯನ್ನಾಗಲಿ ಮೊಟಕುಗೊಳಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ.
ಸರಳ ಅರ್ಥಶಾಸ್ತ್ರ
ಈ ಅಂಶವನ್ನು ಒಂದು ಉದಾಹರಣೆಯ ಮೂಲಕ ನೋಡೋಣ: ಮೂರನೇ ಜಗತ್ತಿನ ದೇಶಗಳಿಗೆ ಹೋಲಿಸಿದರೆ, ಮೆಟ್ರೋಪಾಲಿಟನ್ ದೇಶಗಳ ಚಾಲ್ತಿ ಖಾತೆಯ ಮಿಗುತೆಯು $1೦೦ ಎಂದು ಭಾವಿಸೋಣ. ಈ $1೦೦ ಮಿಗುತೆಯು, ಮೆಟ್ರೋಪಾಲಿಟನ್ ದೇಶಗಳು ತಮ್ಮ ಆಂತರಿಕ ಹೂಡಿಕೆಗೆ ಹಣ ಒದಗಿಸಿಕೊಂಡ ನಂತರವೂ ಅಧಿಕವಾಗಿ ಉಳಿದ ಉಳಿತಾಯವೇ ಆಗಿರುತ್ತದೆ. ಅವರ ಉಳಿತಾಯದ ಅನುಪಾತವು (ಅಂದರೆ, ಉಳಿತಾಯವನ್ನು ರಾಷ್ಟ್ರೀಯ ಆದಾಯದಿಂದ ಭಾಗಿಸಲಾದ ಅಂಶವು) ಒಂದು ವೇಳೆ ಶೇ. 25ರಷ್ಟಿದ್ದರೆ, ಈ $1೦೦ ಮಟ್ಟದ ಮಿಗುತೆಯನ್ನು ಪಡೆಯಲು, ಅವರ ಆದಾಯವು $4೦೦ರ ಮಟ್ಟಕ್ಕೆ ಏರಬೇಕಾಗುತ್ತದೆ. ಅಂದರೆ, ಅವರ ಬಳಕೆಯು $3೦೦ರ ಮಟ್ಟಕ್ಕೆ (ಅಂದರೆ $4೦೦-1೦೦) ಏರಬೇಕಾಗುತ್ತದೆ. ಅಂದರೆ, ಮೆಟ್ರೋಪಾಲಿಟನ್ ದೇಶಗಳು ನೀಡಿದ ಸಾಲಗಳು ಅವರ ಬಳಕೆಯನ್ನು ಕಡಿಮೆ (ತ್ಯಾಗ) ಮಾಡುವುದರ ಬದಲು, ಸಾಲ ಮೊತ್ತದ ಮೂರು ಪಟ್ಟು ಹೆಚ್ಚು ಬಳಕೆಗೆ ಕಾರಣವಾಗುತ್ತವೆ. ಹಾಗಾಗಿ, ಮೆಟ್ರೋಪಾಲಿಟನ್ ದೇಶಗಳು ಮೂರನೇ ಜಗತ್ತಿಗೆ ಸಾಲ ನೀಡುವಲ್ಲಿ ಅವರು ಹೇಳಿಕೊಳ್ಳುವ ಬಳಕೆಯ ತ್ಯಾಗಕ್ಕೆ ವ್ಯತಿರಿಕ್ತವಾಗಿ ಅವರ ಆಂತರಿಕ ಬಳಕೆಯು (ಸಾಲದ ಕಾರಣದಿಂದ) ಹೆಚ್ಚುತ್ತದೆ. ಸಾಲ ನೀಡದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಅವರ ಬಳಕೆಯ ಈ ಹೆಚ್ಚಳ ಮತ್ತು ಅವರು ನೀಡಿದ ಸಾಲಗಳ ಮೊತ್ತಕ್ಕೆ ಸಮನಾದ ಮೊತ್ತದಷ್ಟು ಅವರ ಒಟ್ಟು ಉತ್ಪಾದನೆಯೂ (ಆದಾಯವೂ) ಹೆಚ್ಚುತ್ತದೆ ಮತ್ತು ಅದಕ್ಕನುಗುಣವಾಗಿ ಉದ್ಯೋಗದ ಮಟ್ಟವೂ ಹೆಚ್ಚುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮೆಟ್ರೋಪಾಲಿಟನ್ ದೇಶಗಳು ನೀಡುವ ಸಾಲಗಳು ಅವರ ಒಟ್ಟು ಆದಾಯದ ಮೇಲೆ “ಗುಣಕ” ಪರಿಣಾಮ ಬೀರುತ್ತವೆ. ಅಂದರೆ, ಅವರ ಉಳಿತಾಯದ ಅನುಪಾತವು ಒಂದು ವೇಳೆ ಶೇ. 25ರಷ್ಟಿದ್ದರೆ, ಅವರ ವರಮಾನವು ಅದರ ನಾಲ್ಕರಷ್ಟಿರುತ್ತದೆ.
ಇದೆಲ್ಲವೂ ಸರಳ ಅರ್ಥಶಾಸ್ತ್ರವೇ. (ಶಾಲಾ ಪಠ್ಯಪುಸ್ತಕಗಳು ಸಹ ಇವೆಲ್ಲವನ್ನೂ ಕಲಿಸುತ್ತಿದ್ದವು. ಆದರೆ, ವಿಚಾರಹೀನತೆಯಲ್ಲಿ ಒಲವುಳ್ಳ ಬಿಜೆಪಿ ಸರ್ಕಾರ ಅದನ್ನು ಪಠ್ಯಪುಸ್ತಕಗಳಲ್ಲಿ ಇನ್ನೂ ಉಳಿಸಿಕೊಂಡಿದೆಯೇ ಎಂಬುದು ನನಗೆ ತಿಳಿದಿಲ್ಲ). ವಿಷಯವೆಂದರೆ, ಮೆಟ್ರೋಪಾಲಿಟನ್ ದೇಶಗಳು ಮೂರನೇ ಜಗತ್ತಿನ ದೇಶಗಳಿಗೆ ನೀಡಿದ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಿದರೂ, ಅವರ ಪರಿಸ್ಥಿತಿಯೇನೂ ಹದಗೆಡುವುದಿಲ್ಲ. ವಾಸ್ತವವಾಗಿ, ಸಾಲ ನೀಡಿದ ನಂತರ, ಸಾಲ ನೀಡಿದ ಕಾರಣದಿಂದಾಗಿ ಉಂಟಾಗುವ ಬಳಕೆಯ ಹೆಚ್ಚಳ ಮತ್ತು ಉದ್ಯೋಗಗಳ ಹೆಚ್ಚಳದಿಂದಾಗಿ ಅವರ ರ‍್ಥಿಕ ಪರಿಸ್ಥಿತಿಗಳು ಸಾಲ ನೀಡುವ ಮೊದಲು ಇದ್ದುದಕ್ಕಿಂತಲೂ ಉತ್ತಮವಾಗಿರುತ್ತವೆ.
ಈ ಎಲ್ಲ ಪರಿಣಾಮಗಳೂ ಸಾಲ ನೀಡಿದ್ದರಿಂದಾಗಿಯೇ ಉಂಟಾಗುತ್ತವೆ ಎಂಬುದನ್ನು ಮತ್ತು ಅದರ ಹಿಂದಿರುವ ಸರಳ ಅರ್ಥಶಾಸ್ತ್ರವನ್ನು ಮರೆಮಾಚಲು ಬ್ರೆಟ್ಟನ್ ವುಡ್ಸ್ ಸಂಸ್ಥೆಗಳು, ಮೆಟ್ರೋಪಾಲಿಟನ್ ಹಣಕಾಸು ಹಿತಾಸಕ್ತಿಗಳು ಮತ್ತು ತಮ್ಮ ಬೋಧನಾ ಶಾಖೆಯನ್ನು ಮಾರ್ಕ್ಸ್ ಕರೆದಿದ್ದ ರೀತಿಯ “ಕಳಪೆ ಅರ್ಥಶಾಸ್ತ್ರ”ವಾಗಿ ಪರಿರ‍್ತಿಸಿದ ವೃತ್ತಿಪರ ಅರ್ಥಶಾಸ್ತ್ರಜ್ಞರು ಪ್ರಯತ್ನಿಸುತ್ತಾರೆ. ನಿಜ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆಯೂ ಒಂದು “ತ್ಯಾಗ”ದ ಕಥನವನ್ನೇ (ಬಂಡವಾಳಶಾಹಿ ಅರ್ಥವ್ಯವಸ್ಥೆಗಳು ನಿರಂತರವಾಗಿ ಪೂರೈಕೆ-ನಿರ್ಬಂಧಿತವಾಗಿವೆಯೋ ಎಂಬಂತೆ) ಹೆಣೆಯುವುದೂ ಅಲ್ಲದೆ, ಸಾಲಗಳನ್ನು ನೀಡಲು ಲಭ್ಯವಿರುವ ಹಣದ ಪ್ರಮಾಣವು ಯಾವಾಗಲೂ ಸೀಮಿತವಾಗಿರುತ್ತದೆ ಎನ್ನುವ ಹಣ ಸಂಪನ್ಮೂಲಗಳ ಕೊರತೆಯನ್ನೂ ಸಹ ಅವರು ಹೆಣೆಯುತ್ತಾರೆ!
ಕೀನ್ಸ್ ಹೇಳಿಕೆ ಮತ್ತು ಬ್ರಾಂಟ್ ಆಯೋಗದ ಶಿಫಾರಸು
ಮಹಾ ಕುಸಿತದ ಸಂದರ್ಭದಲ್ಲಿ ಪ್ರಸಿದ್ಧ ಇಂಗ್ಲಿಷ್ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅವರು ವಿಚಿತ್ರವಾಗಿ ತೋರುವ ಒಂದು ಹೇಳಿಕೆಯನ್ನು ನೀಡಿದ್ದರು. ಅದೇನೆಂದರೆ, ನಿರುದ್ಯೋಗಿಗಳನ್ನು ರಸ್ತೆಗಳಲ್ಲಿ ಗುಂಡಿ ತೋಡುವುದಕ್ಕಾಗಿ ಮತ್ತು ತಕ್ಷಣವೇ ಅದೇ ಗುಂಡಿಗಳನ್ನು ಮುಚ್ಚುವುದಕ್ಕಾಗಿ ನೇಮಿಸಿಕೊಂಡರೂ ಸಹ, ಸಮಾಜವು ರಸ್ತೆಗಳಲ್ಲಿ ಗುಂಡಿ ತೋಡುವ ಮೊದಲು ಇದ್ದದ್ದಕ್ಕಿಂತಲೂ ಉತ್ತಮವಾಗಿಯೇ ಇರುತ್ತದೆ ಎಂಬುದನ್ನು. ಅಂಥಹ ಒಂದು “ಅತ್ಯಂತ ನಿಷ್ಪ್ರಯೋಜಕ” ಎನ್ನಬಹುದಾದ ಯೋಜನೆಗೂ ಸಹ ಒಂದು ವೇಳೆ $100 ರ‍್ಚು ಮಾಡಿದ್ದೇ ಆದರೆ, ಅದು $300 ಮೊತ್ತದ ಬಳಕೆಯನ್ನು (ಮತ್ತು ಅದಕ್ಕನುಗುಣವಾಗಿ ಅಧಿಕ ಉದ್ಯೋಗಗಳನ್ನೂ) ಸೃಜಿಸುವಲ್ಲಿ ಪರಿಣಮಿಸುತ್ತದೆ ಮತ್ತು ಸಾಮಾಜಿಕವಾಗಿ ಅದು ಒಂದು ಉತ್ತಮ ಪರಿಸ್ಥಿತಿಯನ್ನೂ ಪರಿಸ್ಥಿತಿಯನ್ನೂ ನಿರ್ಮಿಸುತ್ತದೆ. ಅದೇ ರೀತಿಯಲ್ಲಿ, ಮೂರನೇ ಜಗತ್ತಿಗೆ $100 ಸಾಲವನ್ನು ಮನ್ನಾ ಮಾಡುವ ಕ್ರಮವು ರಸ್ತೆಗಳಲ್ಲಿ ಗುಂಡಿ ತೋಡುವ ಮತ್ತು ಅದೇ ಗುಂಡಿಗಳನ್ನು ತಕ್ಷಣವೇ ಮುಚ್ಚಲು ಮಾಡುವ $100 ಖರ್ಚುಗಳಿಗೆ ಹೋಲುತ್ತದೆ ಮತ್ತು ಆ ದೇಶಗಳ ಪರಿಸ್ಥಿತಿಯನ್ನು ಮತ್ತಷ್ಟು ಉತ್ತಮವಾಗಿಸುತ್ತದೆ.
ಸಾಂದರ್ಭಿಕವಾಗಿ ಹೇಳುವುದಾದರೆ, ಈ ರೀತಿಯ ಚಿಂತನೆಯೇ, ಮುಂದುವರಿದ ದೇಶಗಳು ಪ್ರತಿವರ್ಷ ತಮ್ಮ ಜಿಡಿಪಿಯ ಶೇ. ಒಂದರಷ್ಟು ಹಣವನ್ನು ಹಿಂದುಳಿದ ದೇಶಗಳಿಗೆ ಅನುದಾನ ನೀಡುವುದಕ್ಕಾಗಿ ಮೀಸಲಿಡಬೇಕು ಎಂಬ ಬ್ರಾಂಟ್ ಆಯೋಗದ ಶಿಫಾರಸಿನ ಹಿಂದಿರುವ ಆಲೋಚನೆಯಾಗಿತ್ತು. ಈ ಶಿಫಾರಸನ್ನು ಜಾರಿ ಮಾಡುವುದರಿಂದ ಮುಂದುವರಿದ ದೇಶಗಳಿಗೆ ಎಳ್ಳಷ್ಟೂ ಹಾನಿಯಾಗುವುದಿಲ್ಲ. ಏಕೆಂದರೆ, ಈ ದೇಶಗಳು ಹೊಂದಿರುವ ರ‍್ಥಿಕ ವ್ಯವಸ್ಥೆಗಳು ಬೇಡಿಕೆ-ನಿರ್ಬಂಧಿತವಾಗಿವೆ. ಆದ್ದರಿಂದ, ಹಾನಿಯಾಗುವುದಕ್ಕೆ ತದ್ವಿರುದ್ಧವಾಗಿ, ಇಂಥಹ ಅನುದಾನಗಳ “ಗುಣಕ ಪರಿಣಾಮ”ಗಳು ಆ ದೇಶಗಳಿಗೆ ಪ್ರಯೋಜನಕಾರಿಯಾಗುತ್ತವೆ.
ಮೂರನೇ ಜಗತ್ತಿನ ದೇಶಗಳು ತಮ್ಮ ಬಾಹ್ಯ ಸಾಲಗಳನ್ನು ಮೆಟ್ರೋಪಾಲಿಟನ್ ದೇಶಗಳಿಂದ ಮಾತ್ರ ಪಡೆದಿವೆ ಮತ್ತು ಬಾಕಿ ಉಳಿಸಿಕೊಂಡಿವೆ ಎಂದು ನಾವು ಈವರೆಗೂ ಭಾವಿಸಿಕೊಂಡಿದ್ದೆವು. ಅದು ನಿಜವಲ್ಲ. ಚೀನಾ ಮತ್ತು ತೈಲ ಉತ್ಪಾದಿಸುವ ದೇಶಗಳೂ ಸಹ ಮೂರನೇ ಜಗತ್ತಿಗೆ ಸಾಲ ನೀಡಿವೆ. ಈ ಸಾಲಗಳನ್ನು ಸಾಮಾನ್ಯವಾಗಿ ಪರೋಕ್ಷವಾಗಿ, ಅಂದರೆ, ಮೆಟ್ರೋಪಾಲಿಟನ್ ದೇಶಗಳ ಬ್ಯಾಂಕುಗಳ ಮಧ್ಯಸ್ಥಿಕೆಯ ಮೂಲಕ ಪಡೆಯಲಾಗಿದೆ. ಮೇಲಿನ ನಮ್ಮ ಚರ್ಚೆಯು ಈ ಸಾಲದಾತರಿಗೆ ಅನ್ವಯವಾಗುವುದಿಲ್ಲ. ಏಕೆಂದರೆ, ಚೀನಾದ ಮತ್ತು ತೈಲ ಉತ್ಪಾದಕ ದೇಶಗಳ ಅರ್ಥವ್ಯವಸ್ಥೆಗಳನ್ನು ಮೆಟ್ರೋಪಾಲಿಟನ್ ದೇಶಗಳ ರೀತಿಯ ಬೇಡಿಕೆ-ನಿರ್ಬಂಧಿತ ಅರ್ಥವ್ಯವಸ್ಥೆಗಳೆಂದು ಪರಿಗಣಿಸಲಾಗದು. ಆದ್ದರಿಂದ, ಈ ಸಾಲಗಳನ್ನು ನೀಡಿದ ಚೀನಾ ಮತ್ತು ತೈಲ ಉತ್ಪಾದಕ ದೇಶಗಳೊಂದಿಗೆ ತಮ್ಮ ಸಾಲಗಳನ್ನು ಮನ್ನಾ ಮಾಡುವ ಬಗ್ಗೆ ಮತ್ತು ಅವರೊಂದಿಗೆ ನೇರ ಸಂಬಂಧಗಳನ್ನು ವೃದ್ಧಿಸಿಕೊಳ್ಳುವ ಬಗ್ಗೆ ಸಾಲಗಾರ ಮೂರನೇ ಜಗತ್ತಿನ ದೇಶಗಳು, ಮೆಟ್ರೋಪಾಲಿಟನ್ ದೇಶದ ಹಣಕಾಸು ಸಂಸ್ಥೆಗಳ ಮಧ್ಯಸ್ಥಿಕೆಯನ್ನು ಕೋರದೆ, ಪ್ರತ್ಯೇಕ ರ‍್ಪಾಟುಗಳನ್ನು ತಾವೇ ಮಾಡಿಕೊಳ್ಳಬೇಕು. ಜಾಗತಿಕ ಅರ್ಥವ್ಯವಸ್ಥೆಯ ಮೇಲೆ ಮೆಟ್ರೋಪಾಲಿಟನ್ ದೇಶಗಳು ಹೊಂದಿರುವ ಪ್ರಾಬಲ್ಯವು ದುರ್ಬಲಗೊಳ್ಳುತ್ತಿರುವುದರಿಂದ, ಅಂಥಹ ಪ್ರತ್ಯೇಕ ಏರ್ಪಾಟುಗಳನ್ನು ಮಾಡಿಕೊಳ್ಳುವ ಸಾಧ್ಯತೆಗಳು ಇಂದು ಹೆಚ್ಚಾಗಿವೆ.
ಸಾಮೂಹಿಕ ಪ್ರಯತ್ನದ ಅಗತ್ಯತೆ
ಅದೇನೇ ಇರಲಿ, ಮೂರನೇ ಜಗತ್ತಿನ ದೇಶಗಳಿಗೆ ಸಾಲ ನೀಡುವಾಗ ತಮ್ಮ ಬಳಕೆಯನ್ನು ಮತ್ತು ಹೂಡಿಕೆಯನ್ನು “ತ್ಯಾಗ” ಮಾಡಿದ್ದಾವೆ ಎಂಬ ನಂಬಿಕೆಯು ವಿಶ್ವಾಸಾರ್ಹವಲ್ಲದ ಕಾರಣದಿಂದ, ಈ ಮೆಟ್ರೋಪಾಲಿಟನ್ ದೇಶಗಳು, ಐಎಂಎಫ್ ಮಧ್ಯಸ್ಥಿಕೆಯ “ಪಾರುಗಾಣಿಕಾ ಪ್ಯಾಕೇಜ್”ಗಳನ್ನು ಸಾಲಗಾರ ದೇಶಗಳ ಮೇಲೆ ಹೇರುವುದರ ಬದಲು, ಅವರ ರ‍್ಥಿಕ ಅಗತ್ಯಗಳಿಗೆ ಸರಿಹೊಂದುವ ಸಾಲ-ತೀರಿಸುವ ಹೊಸ ಷರತ್ತುಗಳನ್ನು ನಿಗದಿಪಡಿಸಬೇಕು. ಸಾಲ ತೀರಿಸುವ ಸಲುವಾಗಿ ಸಂನ್ಮೂಲಗಳನ್ನು ಹಿಂಡುವ ಕಾರಣದಿಂದ ಬೇಡಿಕೆ ಕುಗ್ಗುವುದರಿಂದ, ಐಎಂಎಫ್ ಮಧ್ಯಸ್ಥಿಕೆಯ “ಪ್ಯಾಕೇಜ್‌ಗಳು” ಮೂಲತಃ ಸಾಲಗಾರ ದೇಶಗಳ ಜನರ ಜೀವನ ಮಟ್ಟವನ್ನು ಕುಗ್ಗಿಸುವ ಮೂಲಕ ಸಾಲದಾತರ ಹಿತಾಸಕ್ತಿಗಳನ್ನು ರಕ್ಷಿಸುತ್ತವೆ.
ಸಾಲ ಪಡೆದ ಯಾವುದೇ ಒಂದು ದೇಶವು ಮೆಟ್ರೋಪಾಲಿಟನ್ ದೇಶಗಳನ್ನು ಒಂಟಿಯಾಗಿ ಎದುರಿಸುವ ಶಕ್ತಿಯನ್ನು ಹೊಂದಿರುವುದಿಲ್ಲ. ಆದ್ದರಿಂದ, ಅದು ತನ್ನ ಸಾಲ ಮರುಪಾವತಿಯನ್ನು ಮತ್ತು ಬಡ್ಡಿ ಪಾವತಿಗಳಿಗೆ ಸಂಬಂಧಿಸಿದಂತೆ ಅನುಕೂಲಕರ ಷರತ್ತುಗಳನ್ನು ರೂಪಿಸುವಂತೆ ಕೋರುವುದು ಸಾಧ್ಯವಿಲ್ಲ. ಆದರೆ, ಸಾಲ ಪಡೆದ ದೇಶಗಳು ಅದನ್ನು ಸಾಮೂಹಿಕವಾಗಿ ಸಾಧಿಸಬಹುದು. ಸಾಲವನ್ನು ನಿಗದಿತ ಗಡುವಿನೊಳಗೆ ತೀರಿಸಬೇಕೆಂಬ ಷರತ್ತಿನ ಬದಲು, ಪ್ರತಿ ರ‍್ಷ ತಮ್ಮ ರಫ್ತು ಗಳಿಕೆಯ ಒಂದು ನಿರ್ದಿಷ್ಟ ಪ್ರಮಾಣವನ್ನು ಸಾಲ ತೀರಿಸುವ ಉದ್ದೇಶಕ್ಕಾಗಿ ಮೀಸಲಿಡುವ ಅವಕಾಶ ನೀಡಬೇಕೆಂದು ಮತ್ತು ಸಾಲದ ಮೊತ್ತವನ್ನು ಸಾಕಷ್ಟು ಕಡಿಮೆ ಮಾಡಬೇಕೆಂದು ಸಾಲಗಾರ ದೇಶಗಳು ಸಾಮೂಹಿಕವಾಗಿ ಒತ್ತಾಯಿಸಬಹುದು. ಪೆರು ದೇಶದ ಮಾಜಿ ಅಧ್ಯಕ್ಷ ಅಲನ್ ಗಾರ್ಸಿಯಾ ಒಮ್ಮೆ ಇದನ್ನು ಸಾಧಿಸಿದ್ದ ಉದಾಹರಣೆಯೂ ಇದೆ.
ಈ ಎಲ್ಲದಕ್ಕೂ ಮುಂಚೆ ಸಾಲಗಾರರ ನಡುವೆ ರ‍್ಚೆಗಳು ನಡೆಯಬೇಕಾಗುತ್ತದೆ, ನಂತರ ಸಾಲಗಾರರು ಮತ್ತು ಸಾಲದಾತರ ನಡುವೆ ಮಾತುಕತೆಗಳನ್ನು ನಡೆಸಬೇಕಾಗುತ್ತದೆ. ಜಿ-20ರ ಸದಸ್ಯರಾದ ಭಾರತದಂತಹ ದೇಶಗಳು ಇಂಥಹ ಮಾತುಕತೆಗಳನ್ನು ಆಯೋಜಿಸಲು ಮುಂದಾಗಬೇಕು.