ಬಳ್ಳಾರಿ: ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ. ಐದು ವರ್ಷ ಕಂಪ್ಲೀಟ್ ಮಾಡ್ತಾರೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದರು.
ಬಳ್ಳಾರಿಯಲ್ಲಿ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ಹಿಂದುಳಿದ ನಾಯಕರು ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅದನ್ನ ಬಿಜೆಪಿಯವ್ರಿಗೆ ಸಹಿಸಲು ಆಗ್ತಿಲ್ಲ. ದೇವರಾಜು ಅರಸು ಅವರನ್ನ ಬಿಟ್ರೆ ಎರಡು ಬಾರಿ ಸಿಎಂ ಆಗಿದ್ದು ಸಿದ್ದರಾಮಯ್ಯ. ಇಡೀ ಕರ್ನಾಟಕಕ್ಕೆ ಒಳ್ಳೆ ಆಡಳಿತ ಕೊಡ್ತಾರೆ ಎಂದರು.
ಇದನ್ನೂ ಓದಿ:-ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ: ಶರಣಪ್ರಕಾಶ್ ಪಾಟೀಲ್
ಇನ್ನೂ ಹಾಲಿನ ದರ 4ರೂ ಹೆಚ್ಚಳ ಮಾಡಿದ್ದಕ್ಕೆ ಬಿಜೆಪಿ ಆಕ್ಷೇಪ ವಿಚಾರಕ್ಕೂ ಪ್ರತಿಕ್ರಿಯಿಸಿದ ಭೀಮಾ ನಾಯ್ಕ್, ಬಿಜೆಪಿಯವ್ರಿಗೆ ಮಾಡೋದಕ್ಕೆ ಯಾವುದೇ ಕೆಲಸ ಇಲ್ಲ. ಬರೀ ಟೀಕೆ ಮಾಡುವುದೇ ಅವರ ಕೆಲಸ. ಹಿಂದೆ ಬೊಮ್ಮಾಯಿ ಸಿಎಂ ಇದ್ದಾಗ 700ಕೋಟಿ ಪ್ರೋತ್ಸಾಹ ಧನ ಪೆಂಡಿಂಗ್ ಇಟ್ಟು ಹೋಗಿದ್ರು. ಯಡಿಯೂರಪ್ಪ ಇದ್ದಾಗ 2ರೂ ಪ್ರೋತ್ಸಾಹ ಧನ ಮಾಡಿದ್ರು. ನಮ್ಮ ಸಿದ್ದರಾಮಯ್ಯ ಸಾಹೇಬ್ರು ಇದ್ದಾಗ 5ರೂ ಮಾಡಿದ್ದೀವಿ ಅದರ ಬಗ್ಗೆ ಚರ್ಚೆ ಮಾಡಲಿ ಎಂದರು.
ಹಾಲಿನ ಪುಡಿ ಮಾಡಿ ಶಾಲೆಗಳು, ಅಂಗನವಾಡಿಗಳಿಗೆ 25ರೂಗೆ ಕೊಡ್ತಿದ್ದೇವೆ. ಬಿಜೆಪಿಯವರು ಇದನ್ನ ಚರ್ಚೆ ಮಾಡೋದಕ್ಕೆ ಬರಲಿ. ಬಿಜೆಪಿಯವ್ರಿಗೆ ಮಾಡೋದಕ್ಕೆ ಬೇರೆ ಕೆಲಸ ಇಲ್ಲ. ಸುಮ್ನೇ ಗ್ಯಾರಂಟಿ ಬಗ್ಗೆ ಮಾತಾಡ್ತಾರೆ. ಯಾಕೆ ರೈತರಿಗೆ ಹಣ ಕೊಡಬಾರದಾ. ನಾನು ಸ್ಪಷ್ಟವಾಗಿ ಹೇಳಲು ಬಯಸ್ತೇನೆ. ಬಿಜೆಪಿಯವ್ರು ರೈತ ವಿರೋಧಿಗಳು. ಬಿಜೆಪಿ ಸರ್ಕಾರದಲ್ಲಿ ದರ ಏರಿಕೆ ಮಾಡಿಲ್ವಾ?. ಆಗ ಏರಿಕೆ ಮಾಡಿದ್ದು ಬೊಮ್ಮಾಯಿ ಅವರ ಮನೆಗೆ ಹೋಯ್ತಾ. ನಾವು ಏರಿಕೆ ಮಾಡಿದ್ದು.ನೇರವಾಗಿ ರೈತರಿಗೆ ಹೋಗ್ತದೆ. ಸುಮ್ನೇ ಬಿಜೆಪಿಯವ್ರಿಗೆ ಮಾಡೋದಕ್ಕೆ ಕೆಲಸ ಇಲ್ಲ, ಹೀಗಾಗಿ ವಿರೋಧ ಮಾಡ್ತಾರೆ.
ಇದನ್ನೂ ಓದಿ:-ಉದ್ಯೋಗ ಕಳೆದುಕೊಂಡ ಬಡಕುಟುಂಬ ಊರಿಗೆ ಬರಲು ದುಡ್ಡಿಲ್ಲದೆ 95 ಕಿ.ಮೀ ಕಾಲ್ನಡಿಗೆ
ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದನ್ನ ಮುಚ್ಚಿಕೊಳ್ಳೋದಕ್ಕೆ ರೈತರ ವಿಚಾರಕ್ಕೆ ಬರ್ತಾರೆ. ಕೆಎಂಎಫ್ ವಿಚಾರಕ್ಕೆ ಬಿಜೆಪಿಯವ್ರು ಯಾಕ್ ಬರ್ತಾರೆ? ಸರ್ಕಾರಕ್ಕೂ ಕೆಎಂಎಫ್ ಗೂ ಏನ್ ಸಂಬಂಧ? ಅದೇನ್ ನಾಲ್ಕು ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ಹೋಗ್ತದಾ? ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಪಂಚ ಗ್ಯಾರಂಟಿಗಳಿಂದಲೇ ಬಿಜೆಪಿಯವ್ರಿಗೆ ಬೇಧಿ ಹತ್ತಿದೆ ಎಂದು ಭೀಮಾ ನಾಯ್ಕ್ ಕೌಂಟರ್ ಕೊಟ್ಟರು.