ಮುಂಬೈ:ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ ಶ್ಯಾಮ್ ಬೆನಗಲ್ ನಿಧನರಾಗಿದ್ದಾರೆ. ಮೃತರಿಗೆ 90 ವರ್ಷ ವಯಸ್ಸಾಗಿತ್ತು.
ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಶ್ಯಾಮ್ ಬೆನಗಲ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಡಿಸೆಂಬರ್ 23ರ ಸಂಜೆ 6:30ಕ್ಕೆ ನಿಧನರಾಗಿದ್ದಾರೆ.
ಶ್ಯಾಮ್ ಬೆನಗಲ್ (Shyam Benegal) ಅವರು ಅಂಕುರ್, ನಿಶಾಂತ್, ಮಂಥನ್, ಭೂಮಿಕಾ, ಜುನೂನ್ ಮತ್ತು ಮಂಡಿಯಂತಹ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದು, ಡಿಸೆಂಬರ್ 14ರಮದು ಇವರು ತಮ್ಮ 90ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು.
ಪ್ರಭಾವಶಾಲಿ ಕಥೆ ಮತ್ತು ಸಾಮಾಜಿಕ ಸಂಬಂಧಿತ ವಿಷಯಗಳ ಮೂಲಕ ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. 18ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಅವರು ಫಿಲ್ಮ್ ಫೇರ್, ನಂದಿ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶ್ಯಾಮ್ ಬೆನೆಗಲ್ ಅವರ ನಿಧನಕ್ಕೆ ಸಿನಿಮಾ, ರಾಜಕೀಯ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.