ರಾಯಚೂರು ಫೆ 05 : ಶಾಲಾ ಶುಲ್ಕ ಕಟ್ಟದ ಹಿನ್ನೆಲೆ ವಿದ್ಯಾರ್ಥಿ ಹಾಗೂ ಪೋಷಕರ ಮೇಲೆ ಹಲ್ಲೆ ಮಾಡಿದ ಘಟನೆ ರಾಯಚೂರಿನ ಸಿಂಧನೂರಿನ PWD ಕ್ಯಾಂಪ್ ನ ಮಾಂಟೆಸ್ಸರಿ ಶಾಲೆಯಲ್ಲಿ ನಡೆದಿದೆ.
ಮಾಂಟೆಸ್ಸರಿ ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿ ಶಾಲಾ ಶುಲ್ಕ ಸಂಪೂರ್ಣವಾಗಿ ಕಟ್ಟದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯವರು ಗೂಂಡಾಗಿರಿ ನಡೆಸಿದ್ದು, ವಿದ್ಯಾರ್ಥಿಯ ತಾಯಿ ನಾಗವಿದ್ಯಾ ಮೇಲೆ ಹಲ್ಲೆ ಮಾಡಿದ್ದಾರೆ.
ಫೀ ಕಟ್ಟದ ಕಾರಣಕ್ಕೆ ಆಡಳಿತ ಮಂಡಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸ್ ಠಾಣೆಯಲ್ಲೇ ಪೋಷಕಿ ಮೇಲೆ ಆಡಳಿತ ಮಂಡಳಿ ಮುಖ್ಯಸ್ಥ ಸತೀಶ್ ಕುಮಾರ್ ಹಲ್ಲೆ ನಡೆಸಿದ್ದಾನೆ.
ಹಲ್ಲೆ ಮಾಡಿದ ಸತೀಶ್ ಕುಮಾರ್ ನನ್ನ ಪೋಲಿಸರು ಬಂಧಿಸಿದ್ದಾರೆ. ಆತನ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಗ್ರಾಮಸ್ತರು ಆಗ್ರಹಿಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಕ್ರಮಕ್ಕೆ ಎಸ್.ಎಫ್.ಐ ಆಗ್ರಹ : ಶುಲ್ಕದ ವಿನಾಯಿತಿ ಕೇಳಿದ ವಿದ್ಯಾರ್ಥಿ, ಪಾಲಕರ ಮೇಲೆ ಪೋಲಿಸರ ಸಮ್ಮುಖದಲ್ಲೆ ಆಡಳಿತ ಮಂಡಳಿ ಮುಖ್ಯಸ್ಥ ಸತೀಶ್ ಹಲ್ಲೆ ನಡೆಸಿದ್ದು ಖಂಡನೀಯ ಮತ್ತು ಅಕ್ಷಮ್ಯ ಅಪರಾಧ ಎಂದು ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಆರೋಪಿಸಿದ್ದಾರೆ.
ಸರ್ಕಾರ ಮತ್ತು ಶಿಕ್ಷಣ ಇಲಾಖೆ ಪಾಲಕ – ಪೋಷಕರಿರಂದ ಒತ್ತಾಯ ಪೂರ್ವಕವಾಗಿ ಪೂರ್ಣ ಪ್ರಮಾಣದ ಶುಲ್ಕ ವನ್ನು ಪಾವತಿ ಮಾಡಿಕೊಳ್ಳಬಾರದು ಎಂದು ರಾಜ್ಯ ಸರಕಾರ ಆದೇಶವನ್ನು ನೀಡಿದರು ಮತ್ತು ಕೋರ್ಟ್ ಆದೇಶ ಇದ್ದರು ಅವುಗಳಿಗೆ ಗೌರವ ಕೊಡದೆ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕದ ನೆಪದಲ್ಲಿ ವಸೂಲಿಗೆ ನಿಂತು ವಿದ್ಯಾರ್ಥಿಗಳು ಮತ್ತು ಪೋಷಕರ ಜೀವವನ್ನು ಹಿಂಡುವ ಕೆಲಸವನ್ನು ಮಾಡುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಘಟನೆ ನಡೆದಿದೆ.
ಕೂಡಲೇ ಈ ಶಾಲೆಯ ಪರವಾನಗಿಯನ್ನು ರದ್ದು ಮಾಡಬೇಕು ಹಾಗೂ ಪಾಲಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಸೂಕ್ತ ಶಿಕ್ಷೆಗೆ ಗುರಿಯಾಗಿಸಬೇಕು ಹಾಗೂ ಜಿಲ್ಲೆಯ ಎಲ್ಲಾ ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ಪಾವತಿಗೆ ಪಾಲಕರನ್ನು ಪೀಡಿಸದಂತೆ ಆದೇಶವನ್ನು ಹೊರಡಿಸಬೇಕು ಮತ್ತು ಡೊನೇಶನ್ ಹಾವಳಿ ನಿಯಂತ್ರಣ ಸಮಿತ ( ಡೇರಾ ಕಮಿಟಿ ) ಸಕ್ರೀಯಗೊಳಿಸಬೇಕೆಂದುಆಗ್ರಹಿಸಿದ್ದಾರೆ.