ಬೆಂಗಳೂರು: ರಾಜ್ಯದ ಪ್ರೌಢಶಾಲೆಗಳಲ್ಲಿ 11,796 ಮಂದಿ ಖಾಯಂ ಶಿಕ್ಷಕರ ಕೊರತೆ ಇದ್ದು, ಹೈಸ್ಕೂಲ್‌ನ ಪಠ್ಯ ಚಟುವಟಿಕೆ ಮತ್ತು ಎಸೆಸೆಲ್ಸಿ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಕಠಿಣವಾಗಿರುವ ವಿಜ್ಞಾನ ಇಂಗಿಷ್ ವಿಷಯಗಳಲ್ಲಿಯೂ ಶಿಕ್ಷಕರ ತೀವ್ರ ಕೂರತೆ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ರಾಜ್ಯ
ಒಟ್ಟು 4,871 ಸರಕಾರಿ ಶಾಲೆಗಳು ರಾಜ್ಯದಲ್ಲಿ ಇದೆ. ಪ್ರತೀ ಶಾಲೆಯು 2 ರಿಂದ 3 ಶಿಕ್ಷಕರ ಕೊರತೆ ಎದುರಿಸುತ್ತಿದೆ. ಅದರಲ್ಲಿಯೂ ಶೈಕ್ಷಣಿಕವಾಗಿ ಹಿಂದುಳಿದಿರುವ ಮತ್ತು ಎಸೆಸೆಲ್ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ ತೋರುವ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೇ. 50ರಷ್ಟು ಪ್ರೌಢಶಾಲಾ ಶಿಕ್ಷಕರ ಕೊರತೆಯಿದೆ. ಒಟ್ಟಾರೆ ರಾಜ್ಯದಲ್ಲಿ ಶಿಕ್ಷಕರ ಕೊರತೆ ಪ್ರಮಾಣ ಶೇ. 27ರಷ್ಟಿದೆ.
ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಹಿಂದುಳಿದಿರುವಿಕೆಗೆ ಆಡಳಿತವಾಹ ನಿರ್ಲಕ ತೋರುತ್ತಿರುವುದಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊನೆಯ ಸ್ಥಾನಗಳಲ್ಲಿರುವ ಯಾದಗಿರಿ, ಕಲಬುರಗಿ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆ ಇರುವುದನ್ನು ಅಂಕಿ-ಅಂಶಗಳು ಸಾರುತ್ತಿವೆ.
ಇದನ್ನೂ ಓದಿ: ದೇಗುಲಗಳಲ್ಲಿ ಪುರುಷರು ಮೇಲಂಗಿ ಕಳಚುವ ಪದ್ಧತಿ ಕೈಬಿಡಲು ಚಿಂತನೆ: ಸಿಎಂ ಪಿಣರಾಯಿ ವಿಜಯನ್
ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಯಾದಗಿರಿಯಲ್ಲಿ 1,431 ಮಂಜೂರಾದ ಹುದ್ದೆಗಳಿದರೆ ಈ ಪೈಕಿ ಬರೋಬ್ಬರಿ 734 ಹುದ್ದೆಗಳು ಅಂದರೆ ಶೇ. 52 ಹುದ್ದೆಗಳು ಖಾಲಿ ಉಳಿದಿದ್ದು, ಆ ಭಾಗದ ಶೈಕ್ಷಣಿಕ ಪ್ರಗತಿಗೆ ತೊಡರುಗಾಲಾಗಿದೆ. ರಾಯಚೂರಿನ 2,239 ಮಂಜೂರಾದ ಹುದ್ದೆಯಲ್ಲಿ 1,040 ಹುದ್ದೆ, ಉಳಿದಂತೆ ಕಲಬುರಗಿಯಲ್ಲಿ 2,507 ಮಂಜೂರಾದ ಹುದ್ದೆಯಲ್ಲಿ 566, ಕೊಪ್ಪಳದ 1,688 ಮಂಜೂರಾದ ಹುದ್ದೆಯಲ್ಲಿ 565, ಬೀದರ್‌ನ 1,520ರಲ್ಲಿ 417 ಹುದ್ದೆ, ಬಳ್ಳಾರಿಯ 1,1700 547 ಹುದ್ದೆಗಳು ಖಾಲಿ ಉಳಿದಿವ. ಒಟ್ಟಾರೆ ಕಾಣ ಕರ್ನಾಟಕದಲ್ಲಿ ಮುಂಜೂರಾದ ಹೊಸ ಶಿಕ್ಷಕರಲ್ಲಿ, ಶೇ. 37 ಹುದ್ದೆಗಳು ಖಾಲಿ ಇವೆ.
ಚಿಕ್ಕೋಡಿಯಲ್ಲಿ 1,287 ಮಂಜೂರಾದ ಹುದ್ದೆ ಯಲ್ಲಿ 564, ಮಂಡ್ಯದ 1,783 ಹುದ್ದೆಗಳಲ್ಲಿ 533, ಹಾಸನದ 1,999ರಲ್ಲಿ 583 ಹುದ್ದೆಗಳು ಖಾಲಿ ಇವೆ.
ಬಾಗಲಕೋಟೆಯಲ್ಲಿ 346, ಬೆಳಗಾವಿ -313, ಬೆಂಗಳೂರು ಗ್ರಾಮಾಂತರ -207, ಬೆಂಗಳೂರು ಉತ್ತರ -58, ಬೆಂಗಳೂರು ದಕ್ಷಿಣ-155, ಚಾಮರಾಜನಗರ – 223, ಚಿಕ್ಕಬಳ್ಳಾಪುರ – 234, ಚಿಕ್ಕಮಗಳೂರು-238, ಚಿತ್ರದುರ್ಗ- 159, ದಕ್ಷಿಣ ಕನ್ನಡ-359, ದಾವಣಗೆರೆ – 162, ಧಾರವಾಡ- 164, ಗದಗ-282, ಹಾವೇರಿ-327, ಕೊಡಗು-128, ಕೋಲಾರ -411, ಮೈಸೂರು-349, ರಾಮನಗರ-301, ಶಿವಮೊಗ್ಗ-239, ತುಮಕೂರು-307, ಮಧುಗಿರಿ-271, ಉಡುಪಿ-211, ಉತ್ತರ ಕನ್ನಡ -40, ಶಿರಸಿ-187, ವಿಜಯನಗರ-232 ಮತ್ತು ವಿಜಯಪುರ-244 ಶಿಕ್ಷಕರ ಕೊರತೆಯಿದೆ.
ವಿಜ್ಞಾನ ವಿಷಯಗಳಿಗೆ ಒಟ್ಟು 13,090 ಹುದ್ದೆ ಮಂಜೂರಾಗಿದ್ದು, ಈ ಪೈಕಿ 1,794 ಹುದ್ದೆಗಳು ಖಾಲಿ ಇವೆ. ಈ ಪೈಕಿ ರಾಯಚೂರಿನಲ್ಲಿ 247, ಯಾದಗಿರಿಯಲ್ಲಿ 207, ಕಲಬುರಗಿ 120, ಚಿಕ್ಕೋಡಿ 109, ಕೊಪ್ಪಳ 102 ಹುದ್ದೆಗಳು ಖಾಲಿ ಉಳಿದಿವೆ.
ಕನ್ನಡ ಮಾಧ್ಯಮದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ಆಂಗ್ಲ ಭಾಷೆಯ ಶಿಕ್ಷಕರ ಕೊರತೆ ತೀವ್ರವಾಗಿದೆ. ಮಂಜೂರಾದ 5,597 ಹುದ್ದೆಗಳಲ್ಲಿ 1,750 ಹುದ್ದೆಗಳು ಖಾಲಿ ಉಳಿದಿವೆ. ರಾಯಚೂರಿನಲ್ಲಿ 153, ಯಾದಗಿರಿ 110, ಬಳ್ಳಾರಿ 96, ಕಲಬುರಗಿ-94, ಕೊಪ್ಪಳ- 90 ಹುದ್ದೆ ಖಾಲಿ ಇದೆ.
ಕಲಾ ವಿಷಯದಲ್ಲಿ ಮಂಜೂರಾಗಿರುವ 6,659 ಹುದ್ದೆಗಳಲ್ಲಿ ಬರೋಬ್ಬರಿ 2,374 ಹುದ್ದೆ ಖಾಲಿ ಇದೆ. ರಾಯಚೂರು -182 ಚಿಕ್ಕೋಡಿ- 159, ಹಾಸನ- 135 ಬಳ್ಳಾರಿ-108 ಶಿಕ್ಷಕರ ಕೊರತೆಯಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂ ಹುದ್ದೆ ಭರ್ತಿ ಆಗುವವರೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿದ್ದೇವೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ 385 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿದ್ದೇವೆ. ಇನ್ನು ಸಚಿವ ಸಂಪುಟವು ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಿಗೆ ನೇರ ನೇಮಕಾತಿ ಮಾಡಲು ಹೊಸ ಅಧಿಸೂಚನೆ ಹೊರಡಿಸಬಾರದು ಎಂದು ಸೂಚಿಸಿದೆ.
ಇದನ್ನೂ ನೋಡಿ: ಕುವೆಂಪು 120| lವಿಚಾರ ಕ್ರಾಂತಿಗೆ ಆಹ್ವಾನ : ಹಿಂದಿ ಹೇರಿಕೆಯ ಭಾಷೆ Janashakthi Media