ಬಿಡಿದಿಯ ಫಾರ್ಮ್‌ಹೌಸ್ ನಿಂದ ಹೊರಗೆ ಬರ್ತಿದ್ದ ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.
ಗುಂಡಿನ ಜಾಡು ಹಿಡಿದು ಹೊರಟ ಪೊಲೀಸ್ರು ಮುತ್ತಪ್ಪರೈ ಗೆ ಗನ್ ಮ್ಯಾನ್ ಆಗಿದ್ದ ವಿಠಲ್‌ನ ಬುಡಕ್ಕೆ ತಂದು ನಿಲ್ಲಿಸಿದ್ದಾರೆ. ಅಸಲಿಗೆ ಅವತ್ತು ವಿಠಲ್ ನಿಂದ ಶೂಟ್ ಮಾಡಿಸಿರೊ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ.
ಇದನ್ನು ಓದಿ :-ಹಣಕಾಸು ಅಕ್ರಮ ಪ್ರಕರಣದಲ್ಲಿ ಟಾಲಿವುಡ್ ನಟ ಮಹೇಶ್ ಬಾಬುಗೆ ಸಮನ್ಸ್
ಹೀಗಾಗಿಯೇ ಮುತ್ತಪ್ಪ ರೈ ಮಾಜಿ ಗನ್ ಮ್ಯಾನ್ ವಿಠಲ್ ಇಂದ ಎರಡು ಏರ್ ಗನ್ ಮತ್ತು 4 ಶಾಟ್ ಗನ್ ಸೀಜ್ ಮಾಡಲಾಗಿದೆ.
ಅಲ್ಲದೆ ರಿಕ್ಕಿ ರೈ ವಿಠಲ್ ಜೊತೆ ಪರ್ಸನಲ್ ಆಗಿ ಮಾತಾಡಿರೊ ಸಿಟಿಟಿವಿ ಕೂಡ ಸೀಜ್ ಮಾಡಲಾಗಿದೆ. ಶೂಟೌಟ್ ರಾತ್ರಿ ರಿಕ್ಕಿ ರೈ ಜೊತೆಗಿದ್ದ ಅನಿಲ್‌ನಿಂದ ಏರ್ ಫೈರ್ ಮಾಡಲಾಗಿದ್ದು, ರಿಕ್ಕಿ ಕಾರಿನ ಬಳಿ ಕಾಟ್ರಿಡ್ಜ್ ಸಹ ಸೀಜ್ ಮಾಡಲಾಗಿದೆ. ಸೀಜ್ ಆಗಿರೊ ಗನ್ ಗಳಿಂದಲೇ ಫೈರಿಂಗ್ ಮಾಡಲಾಗಿತ್ತಾ? ಅಲ್ಲದೆ ಇದು ಪ್ರೀ ಪ್ಲಾನ್ ನಿಂದ ಮಾಡಲಾಗಿತ್ತಾ ಅಂತಾ ವಿಚಾರಣೆ ಚುರುಕುಗೊಳಿಸಿದ್ದಾರೆ.
ಇದನ್ನು ಓದಿ :-ಹುಬ್ಬಳ್ಳಿ| ಬೆಲೆ ಏರಿಕೆ ವಿರುದ್ದ ಮೇ 2ರಂದು ಪ್ರತಿಭಟನೆ: ಸಲೀಂ ಅಹ್ಮದ್