ನಿಮ್ಮ ಹೆತ್ತವರು ಮತ ಹಾಕದಿದ್ದರೆ 2 ದಿನ ಊಟ ಮಾಡಬೇಡಿ | ಶಾಲಾ ಮಕ್ಕಳಿಗೆ ಶಿವಸೇನೆ ಶಾಸಕ

ಮುಂಬೈ: ‘ನಿಮ್ಮ ಹೆತ್ತವರು ನನಗೆ ಮತ ನೀಡದಿದ್ದರೆ 2 ದಿನಗಳ ಕಾಲ ಏನನ್ನೂ ತಿನ್ನಬೇಡಿ’  ಮಹಾರಾಷ್ಟ್ರದ ಆಡಳಿತರೂಢ ಶಿವಸೇನೆ ಶಾಸಕ ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರ ಭಾಷಣವನ್ನು ಶಾಲಾ ಮಕ್ಕಳ ಮುಂದೆ ಮಾಡಿದ್ದಾರೆ. 2024ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಶಾಸಕ ತನ್ನ ಭಾಷಣದ ಮೂಲಕ ಆಡಳಿತರೂಢ ಮಹಾಯುತಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಶಾಲಾ ಶಿಕ್ಷಣವನ್ನು ಅರ್ಧದಲ್ಲೆ ಮೊಟಕುಗೊಳಿಸಿರುವ ಕಳಮ್ನೂರಿ ಕ್ಷೇತ್ರದ ಶಿವಸೇನೆ ಶಾಸಕ ಸಂತೋಷ್ ಎಲ್. ಬಂಗಾರ್‌ ಅವರು ತಮ್ಮ ಕ್ಷೇತ್ರವಾದ ಲಕ್ಷ ಗ್ರಾಮದಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 50ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಮಕ್ಕಳ ನಡುವೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಇದನ್ನೂ ಓದಿ: ‘ಮನೆ ಕೆಡವಿ ಪತ್ರಿಕೆಯಲ್ಲಿ ಪ್ರಕಟಿಸುವುದು ಫ್ಯಾಶನ್ ಆಗಿದೆ’ – ಮುನ್ಸಿಪಲ್ ಕಾರ್ಪೊರೇಷನ್‌ ವಿರುದ್ಧ ಹೈಕೋರ್ಟ್‌ ಆಕ್ರೋಶ

ಶಾಲಾ ಮಕ್ಕಳ ಮುಂದೆ ವಿಲಕ್ಷಣವಾಗಿ ಭಾಷಣ ಮಾಡಿದ ಅವರು, “ಮುಂದಿನ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ ಎರಡು ದಿನಗಳ ಕಾಲ ಊಟ ಮಾಡಬೇಡಿ” ಎಂದು ಮಕ್ಕಳ ಜೊತೆಗೆ ಕೇಳಿಕೊಂಡಿದ್ದಾರೆ. ಅವರು ಮಾಡಿರುವ ಭಾಷಣದ ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿದೆ.

“ಯಾಕೆ ಊಟ ಮಾಡುತ್ತಿಲ್ಲ ಎಂದು ನಿಮ್ಮ ಪೋಷಕರು ಕೇಳಿದರೆ, ಮೊದಲು ‘ಸಂತೋಷ್ ಬಂಗಾರ್’ಗೆ ಮತ ಹಾಕಿ. ನಂತರ ನಾನು ಊಟ ಮಾಡುತ್ತೇನೆ ಎಂದು ಹೆತ್ತವರಿಗೆ ಹೇಳಿ” ಬಂಗಾರ್ ಅವರು ಮಕ್ಕಳನ್ನು ಕೇಳಿದ್ದಾರೆ. ಅವರು ಈ ಮಾತನ್ನು ಬಹಳ ನಿಷ್ಠುರವಾಗಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ಚಿಕ್ಕಚಿಕ್ಕ ಮಕ್ಕಳ ಜೊತೆಗೆ ‘ಸಂತೋಷ್ ಬಂಗಾರ್’ ಎಂದು ತನ್ನ ಹೆಸರನ್ನು ಕನಿಷ್ಠ ಮೂರು ಬಾರಿ ಕೂಗಿಸಿದ್ದಾರೆ. ಈ ವೇಳೆ ಅವರ ಬೆಂಬಲಿಗರು ಮತ್ತು ಶಿಕ್ಷಕರು ಅಲ್ಲೆ ನಿಂತು ನಗುತ್ತಿದ್ದರು ಎಂದು ವರದಿಗಳು ಹೇಳಿವೆ.

ಶಾಸಕ ಬಂಗಾರ್ ಅವರ ಈ ನಿರ್ಲಜ್ಜ ವರ್ತನೆಗಳ ವಿರುದ್ಧ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತಗಳನ್ನು ಸೆಳೆಯಲು ಚಿಕ್ಕ ಮಕ್ಕಳನ್ನು ‘ಶೋಷಣೆ’ ಮಾಡಿದ್ದಕ್ಕಾಗಿ ಬಂಗಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು. ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಅವರು ಆಡಳಿತಾರೂಢ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಅಣ್ಣಾಮಲೈ ವಿರುದ್ಧದ ದ್ವೇಷ ಭಾಷಣ ಪ್ರಕರಣ ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಕಾರ

“ಭಾರತೀಯ ಚುನಾವಣಾ ಆಯೋಗವು (ಇಸಿಐ) ಮಕ್ಕಳನ್ನು ರಾಜಕೀಯ ಪ್ರಚಾರಕ್ಕೆ ಅಥವಾ ಯಾವುದೇ ಚುನಾವಣೆ ಸಂಬಂಧಿತ ಕೆಲಸಗಳಿಗೆ ಬಳಸದಂತೆ ಆದೇಶ ನೀಡಿರುವ ಹೊರತಾಗಿಯೂ, ಆಡಳಿತ ಪಕ್ಷದ ಶಾಸಕರು ಮತ ಪ್ರಚಾರಕ್ಕಾಗಿ ಶಾಲೆಗೆ ಹೋಗುವ ಮೂಲಕ ಇದನ್ನು ಮಾಡುತ್ತಿದ್ದಾರೆ” ಎಂದು ವಾಡೆಟ್ಟಿವಾರ್ ಹೇಳಿದ್ದಾರೆ. ರಾಜ್ಯದ ಶಿಕ್ಷಣ ಸಚಿವರು ನಿದ್ರಿಸುತ್ತಿದ್ದಾರಾ? ಚುನಾವಣಾ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಕ್ಕಾಗಿ ಬಂಗಾರ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆಯೇ ಎಂದು ಅವರು ಕೇಳಿದ್ದಾರೆ.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎಸ್‌ಪಿ) ಶಾಸಕ ರೋಹಿತ್ ಆರ್. ಪವಾರ್, “ತಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಅವರ ದೊಡ್ಡ ಕೊಡುಗೆ ಏನು… ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಅಪರಾಧ ಮತ್ತು ಅಂತಹ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಉತ್ತರಾಖಂಡ | ಮಸೀದಿ & ಮದ್ರಸಾ ಧ್ವಂಸದ ನಂತರ ಭುಗಿಲೆದ್ದ ಹಿಂಸಾಚಾರ; 5 ಸಾವು

ಶಿವಸೇನೆ (ಯುಬಿಟಿ) ರಾಷ್ಟ್ರೀಯ ವಕ್ತಾರ ಕಿಶೋರ್ ತಿವಾರಿ ಅವರು ಇಂತಹ ಸಣ್ಣ ಮತ್ತು ಮುಗ್ಧ ಮಕ್ಕಳ ಮುಂದೆ ಬಂಗಾರ್ ಅವರ ನಾಚಿಕೆಗೇಡಿನ ಮನವಿಯು ಅವರ ದುರಹಂಕಾರ ಮತ್ತು ಸಾರ್ವಜನಿಕವಾಗಿ ತನ್ನ ಕ್ಷೇತ್ರದ ಜನರನ್ನು ಮತ್ತು ಪೋಷಕರನ್ನು ಎದುರಿಸಲು ಅವರಿಗೆ “ಮುಖವಿಲ್ಲ” ಎಂದು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.

“ಮಹಾಯುತಿ ಶಾಸಕರು ಯಾವ ಮಟ್ಟಕ್ಕೆ ಕುಸಿದಿದ್ದಾರೆ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ…ಈಗ ಅವರು ತಮ್ಮ ಪೋಷಕರಿಗೆ ಮತ ಹಾಕುವಂತೆ ಮಕ್ಕಳನ್ನು ‘ಬ್ಲಾಕ್‌ಮೇಲ್’ ಮಾಡಲು ಗುರಿಯಾಗಿದ್ದಾರೆ. ನಾಳೆ, ಅವರು ಮೊದಲ ಬಾರಿ ಮತ ನೀಡುವ ಮತದಾರರು ಅಥವಾ ಮಹಿಳೆಯರು ಸೇರಿದಂತೆ ಸಮಾಜದ ಇತರ ವರ್ಗಗಳಿಗೆ ಬೆದರಿಕೆ ಹಾಕುತ್ತಾರೆ” ಎಂದು ತಿವಾರಿ ಹೇಳಿದ್ದಾರೆ.

ವಿಡಿಯೊ ನೋಡಿ: ಯುವಜನತೆಯನ್ನು ಮತಾಂಧತೆಯ ಖೆಡ್ಡಾಗೆ ತಳ್ಳಿದ ಸಂಘ ಪರಿವಾರ… Janashakthi Media

Donate Janashakthi Media

Leave a Reply

Your email address will not be published. Required fields are marked *