ಶಾಲಾ ಮಕ್ಕಳಿಗೆ ಧ್ಯಾನ; ಶಿಕ್ಷಣ ಸಚಿವರ ಏಕಪಕ್ಷೀಯ ತೀರ್ಮಾನಕ್ಕೆ ಭಾರೀ ವಿರೋಧ

ಬೆಂಗಳೂರು: ರಾಜ್ಯದಲ್ಲಿ ಸಾಂವಿಧಾನಿಕವಾಗಿ ಮತ್ತು ಶಿಕ್ಷಣ ಹಕ್ಕು ಕಾಯಿದೆಯ ಅನ್ವಯ ಸಮಾನತೆಯ ನೆಲೆಯಲ್ಲಿ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವುದನ್ನು ಬಿಟ್ಟು ಶಿಕ್ಷಣ ಸಚಿವರ ಏಕಪಕ್ಷೀಯ ತೀರ್ಮಾನಗಳಿಂದ ದಿನಕ್ಕೊಂದು ಹೊಸ ಬಗೆಯ ವಿವಾದಗಳನ್ನು ಹುಟ್ಟು ಹಾಕುತ್ತಿದ್ದು, ಜಾತ್ಯತೀತ, ವೈಜ್ಞಾನಿಕ ನೆಲೆಯಲ್ಲಿ ಆಧುನಿಕ ಶಿಕ್ಷಣವನ್ನು ಕೊಡಮಾಡುವ ಬದಲು ಶಾಲಾ ಶಿಕ್ಷಣವನ್ನು ಅಸ್ತವ್ಯಸ್ತಗೊಳಿಸುತ್ತಿರುವುದಕ್ಕೆ ಸಮಾನ ಮನಸ್ಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ರಾಜ್ಯದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಡತೆ, ಏಕಾಗ್ರತೆ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿದೆ ಎಂಬ ಸುತ್ತೋಲೆಯನ್ನು ಕಳುಹಿಸಿದ್ದಾರೆ. ಈ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಪ್ರೊ. ನಿರಂಜನಾರಾಧ್ಯ ವಿಪಿ, ಡಾ. ಎಸ್ ಜಿ ಸಿದ್ದರಾಮಯ್ಯ, ಡಾ. ವಿಜಯಮ್ಮ, ಡಾ. ಕಾಳೇಗೌಡ ನಾಗವಾರ, ಹಿ ಶಿ ರಾಮಚಂದ್ರೇಗೌಡ,  ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಡಾ. ಪಿವಿ ಭಂಡಾರಿ,  ಡಾ. ಯೋಗಾನಂದ ರೆಡ್ಡಿ ಆಗ್ರಹಿಸಿದ್ದಾರೆ.

ಕೊರೊನಾ ಕಾಲದಲ್ಲಿ ಶಾಲೆಗಳನ್ನು ಮುಚ್ಚಿದ ಪರಿಣಾಮ ಸಮಸ್ಯೆಗಳಾಗಿದ್ದು, ಅದನ್ನು ಸರಿಪಡಿಸಲು ಮಕ್ಕಳಿಗೆ ಪ್ರತಿನಿತ್ಯ ಧ್ಯಾನ ಮಾಡಿಸಬೇಕೆಂದೂ, ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿನಂತಿಸಿದೆ. ಈಗಾಗಲೇ ಕೆಲವು ಶಾಲೆಗಳಲ್ಲಿ ಇದನ್ನು ಮಾಡಲಾಗುತ್ತಿದೆ ಅದರಂತೆ, ಎಲ್ಲಾ ಶಾಲೆಗಳಿಗೆ ವಿಸ್ತರಿಸುವಂತೆ ಕೇಳಿಕೊಂಡಿದ್ದು, ಕೂಡಲೇ ಶಿಕ್ಷಣ ಸಚಿವರು ಆದೇಶವನ್ನು ಹೊರಡಿಸಿದ್ದಾರೆ. ಇದು ಈ ಸರಕಾರದ ಸಂವೇದನಾರಹಿತವೂ, ಅವೈಜ್ಞಾನಿಕವೂ ಆಗಿದೆ ಎನ್ನುವುದಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದು ಆರೋಪಿಸಲಾಗಿದೆ.

ಕೊರೊನಾ ಕಾಲದಲ್ಲಿ ರಾಜ್ಯದ ಅನೇಕ ವೈದ್ಯಕೀಯ ತಜ್ಞರು, ಮನೋರೋಗ ತಜ್ಞರು, ಶಿಕ್ಷಣ ತಜ್ಞರು, ಶಾಲಾಭಿವೃದ್ಧಿ ಸಮಿತಿಗಳು, ವಿದ್ಯಾರ್ಥಿಗಳು ಮತ್ತು ಹೆತ್ತವರು ಶಾಲೆಗಳನ್ನು ಮುಚ್ಚದಂತೆ, ಮುಚ್ಚಿದ ಶಾಲೆಗಳನ್ನು ಕೂಡಲೇ ತೆರೆಯುವಂತೆ, ವಿದ್ಯಾಗಮವನ್ನು ನಿಲ್ಲಿಸದಂತೆ ಹಲವು ಬಾರಿ ಬೇಡಿಕೊಂಡಿದ್ದರು, ಪ್ರತಿಭಟನೆಗಳನ್ನೂ ನಡೆಸಿದ್ದರು. ಇವುಗಳನ್ನು ಲೆಕ್ಕಿಸದೆ ಸುಮಾರು ಎರಡು ವರ್ಷ ಶಾಲೆಗಳನ್ನು ಮುಚ್ಚಿ ಮಕ್ಕಳನ್ನು ಕಲಿಕೆಯಿಂದ ವಂಚಿತರಾಗಿಸಿ, ಅಂತರ್ಜಾಲ ಆಧಾರಿತ ಶಿಕ್ಷಣದ ನೆಪದಲ್ಲಿ ಮೊಬೈಲ್ ಸಾಧನಗಳ ದಾಸ್ಯಕ್ಕೆ ತಳ್ಳಿದ ಸರಕಾರವು ಈಗ ಅದಕ್ಕೆ ಪರಿಹಾರವಾಗಿ ಧ್ಯಾನ ಮಾಡಬೇಕೆಂದು ಸುತ್ತೋಲೆ ಹೊರಡಿಸುತ್ತಿರುವುದು ಇನ್ನೂ ದೊಡ್ಡ ಅಪಚಾರವಾಗುತ್ತದೆ.

ಮಕ್ಕಳ ದೈಹಿಕ, ಮಾನಸಿಕ ಆರೋಗ್ಯಕ್ಕೆ, ಏಕಾಗ್ರತೆಗೆ, ಮೊಬೈಲ್ ಸಾಧನಗಳ ಚಟದಿಂದ ಮುಕ್ತಿಗೆ ಧ್ಯಾನ ಮಾಡುವುದರಿಂದ ಪ್ರಯೋಜನವಿದೆಯೆನ್ನಲು ಯಾವುದೇ ಆಧಾರಗಳಿಲ್ಲ, ದೇಶದ ಯಾ ವಿಶ್ವದ ಯಾವುದೇ ಭಾಗದಲ್ಲೂ ಇಂಥ ಪರಿಹಾರವನ್ನು ಯಾರೂ ಸೂಚಿಸಿಲ್ಲ, ಜಾರಿಗೊಳಿಸಿಯೂ ಇಲ್ಲ. ಆದ್ದರಿಂದ ಇಂಥ ಅವೈಜ್ಞಾನಿಕವಾದ ಕ್ರಮಗಳು ಮಕ್ಕಳಿಗೆ ಯಾವುದೇ ಸಹಾಯವನ್ನು ಮಾಡುವುದಿಲ್ಲ. ಮಕ್ಕಳು ಎಲ್ಲರೊಂದಿಗೆ ಬೆರೆತು, ಆಡಿ, ನಲಿದು ಬೆಳೆಯಬೇಕಲ್ಲದೆ ಅಂತರ್ಮುಖಿಗಳಾಗಿ ಧ್ಯಾನಿಸುವುದಲ್ಲ.

ಯುನಿಸೆಫ್ ಸಂಸ್ಥೆಯು ಕೊರೊನಾ ಕಾಲದಲ್ಲಿ ಶಾಲೆಗಳನ್ನು ಮುಚ್ಚುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಶಾಲೆಗಳ ಮುಚ್ಚುವಿಕೆಯಿಂದ ಮಕ್ಕಳಲ್ಲಾಗಿರುವ ಮಾನಸಿಕ ಸಮಸ್ಯೆಗಳನ್ನು  ನಿಭಾಯಿಸಲು ವಿಷದವಾದ ಕಾರ್ಯಸೂಚಿಗಳನ್ನು ಕೂಡಾ ಯುನಿಸೆಫ್ ಪ್ರಕಟಿಸಿತು.  ಅದರಲ್ಲಿ ಎಲ್ಲಿಯೂ ಧ್ಯಾನ, ಯೋಗ, ಪ್ರಾಣಾಯಾಮ ಎಂಬ ಪದಗಳೇ ಕಾಣಸಿಗುವುದಿಲ್ಲ. ಆದ್ದರಿಂದ ರಾಜ್ಯದಲ್ಲಿ ಯುನಿಸೆಫ್ ಕಾರ್ಯಸೂಚಿಯ ಆಧಾರದಲ್ಲಿ ವೈಜ್ಞಾನಿಕ ಕ್ರಮಗಳನ್ನಷ್ಟೇ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಶಾಲಾ ಚಟುವಟಿಕೆಗಳ ಭಾಗವಾಗಿ ಯಾವುದೇ ಕಲಿಕೆ ಅಥವಾ ಕಲಿಕೇತರ ಚಟುವಟಿಕೆಗಳನ್ನು ಶಿಕ್ಷಣ ಶಾಸ್ತ್ರದ ನೆಲೆಯಲ್ಲಿ ಗೊತ್ತುಪಡಿಸುವ ಪರಮಾಧಿಕಾರವನ್ನು ಕಾನೂನು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ  ಇಲಾಖೆಗೆ ವಹಿಸಿ ಅದು ಸಕ್ಷಮ ಪ್ರಾಧಿಕಾರ ಎಂದು ಘೋಷಿಸಿದೆ.

ಧ್ಯಾನ ಇತ್ಯಾದಿಗಳನ್ನು ಶಾಲೆಗಳಲ್ಲಿ ನಡೆಸುವುದಕ್ಕೆ ಶಿಕ್ಷಕರ ಸಂಘಕ್ಕೆ ಯಾವುದೇ ಅಧಿಕಾರವಿಲ್ಲ, ಅವು ಈಗಾಗಲೇ ಹಾಗೆ ಮಾಡಿರುವುದು ನ್ಯಾಯಬಾಹಿರವಾಗಿದ್ದು, ಅದನ್ನು ಸಮರ್ಥಿಸಿ, ವಿಸ್ತರಿಸಲು ಹೇಳುತ್ತಿರುವ ಸಚಿವರ ನಡೆಯು ವಿಷಾದನೀಯವೂ, ಆಘಾತಕಾರಿಯೂ ಆಗಿದೆ ಎಂದು ಹೇಳಲಾಗಿದೆ.

ಈ ಎಲ್ಲಾ ಅಂಶಗಳನ್ನು ಗಾಳಿಗೆ ತೂರಿ ತಮಗೆ ಮನಬಂದಂತೆ ಹಾಗೂ  ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಶಿಕ್ಷಣ ಸಚಿವರ ನಡೆಯನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದು ಸಮಾನ ಮನಸ್ಕರು ಪ್ರಕಟಿಸಿದ್ದಾರೆ. ಸಚಿವರು ಕ್ರಮೇಣವಾಗಿ ಸಾರ್ವಜನಿಕ ಶಾಲೆಗಳನ್ನು ಸರಸ್ವತಿ ಶಿಶು ಮಂದಿಗಳನ್ನಾಗಿಸುವ ಹುನ್ನಾರ ನಡೆಸುತ್ತಿದ್ದು, ಅವರ ಈ ಕಾನೂನು ಬಾಹಿರ ನಡೆಯನ್ನು

Donate Janashakthi Media

Leave a Reply

Your email address will not be published. Required fields are marked *