ತಮ್ಮ ನೇತೃತ್ವದ ಎನ್‌ಸಿಪಿ ಬಣದ ಚಿಹ್ನೆ ಅನಾವರಣಗೊಳಿಸಿದ ಶರದ್ ಪವಾರ್

ಮುಂಬೈ: ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರು ಶನಿವಾರ ತಮ್ಮ ಬಣದ ಹೊಸ ಚುನಾವಣಾ ಚಿಹ್ನೆಯಾದ ತುರ್ಹಾ (ಸಾಂಪ್ರದಾಯಿಕ ಕಹಳೆ)ಯನ್ನು ಅನಾವರಣಗೊಳಿಸಿದ್ದಾರೆ. ಹೊಸ ಚಿಹ್ನೆಯು ಜನರ ಕಲ್ಯಾಣ ಮತ್ತು ಅವರ ಉನ್ನತಿಗಾಗಿ ಕೆಲಸ ಮಾಡುವ ಸರ್ಕಾರಕ್ಕಾಗಿ ಹೊಸ ಹೋರಾಟವನ್ನು ಪ್ರಾರಂಭಿಸಲು ಸ್ಫೂರ್ತಿ ಎಂದು ಅವರು ಕರೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅಜಿತ್ ಪವಾರ್ ಅವರು ಎನ್‌ಸಿಪಿಯೊಂದಿಗೆ ಬೇರ್ಪಟ್ಟಿತ್ತು. ಅದಾಗಿ ತಿಂಗಳುಗಳ ನಂತರ ಚುನಾವಣಾ ಆಯೋಗವು ಇತ್ತೀಚೆಗೆ ಅವರ ಬಣವನ್ನು ನಿಜವಾದ ಎನ್‌ಸಿಪಿ ಎಂದು ಗುರುತಿಸಿದ್ದು, ಪಕ್ಷದ ಮೂಲ ಚಿಹ್ನೆಯಾದ ಗೋಡೆ ಗಡಿಯಾರವನ್ನು ಅದಕ್ಕೆ ನೀಡಿದೆ.

ಇದನ್ನೂ ಓದಿ: ಬಿಲ್ಕೀಸ್ ಬಾನೋ ಪ್ರಕರಣದ ಮತ್ತೊಬ್ಬ ಅಪರಾಧಿಗೆ ಪೆರೋಲ್ ನೀಡಿದ ಗುಜರಾತ್ ಹೈಕೋರ್ಟ್

ಅದರ ನಂತರ, ಚುನಾವಣಾ ಆಯೋಗ ಶರದ್ ಪವಾರ್ ಅವರ ಬಣಕ್ಕೆ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್‌ಚಂದ್ರ ಪವಾರ್’ ಎಂದು ಹೆಸರಿಸಿದೆ. ಗುರುವಾರ ಅವರ ಬಣಕ್ಕೆ ತುರ್ಹಾ (ಸಾಂಪ್ರದಾಯಿಕ ಕಹಳೆ) ಊದುವ ಚಿಹ್ನೆಯನ್ನು ನಿಗದಿಪಡಿಸಿದೆ.

ಚಿಹ್ನೆಯನ್ನು ಅನಾವರಣಗೊಳಿಸಿದ ನಂತರ ರಾಯಗಡ ಕೋಟೆಯಲ್ಲಿ ಮಾತನಾಡಿದ ಪವಾರ್, ಏರುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದಿಂದ ಸಂಕಷ್ಟದಲ್ಲಿರುವ ಜನರಿಗೆ ಕಹಳೆ ಸಂತೋಷವನ್ನು ತರುತ್ತದೆ ಎಂದು ಹೇಳಿದ್ದಾರೆ. ಜನಪರ ಸರ್ಕಾರವನ್ನು ಸ್ಥಾಪಿಸಲು, ನಾವು ಹೋರಾಟ ಮಾಡಬೇಕಾಗಿದೆ ಮತ್ತು ಆದ್ದರಿಂದ ನಾವು ಕಹಳೆ ಚಿಹ್ನೆಯನ್ನು ಬಲಪಡಿಸಬೇಕಾಗಿದೆ ಎಂದು ತಿಳಿಸಿದರು.

“ಜನರ ಶ್ರೇಯೋಭಿವೃದ್ಧಿಗಾಗಿ ಮತ್ತು ಅವರ ಉನ್ನತಿಗಾಗಿ ಶ್ರಮಿಸುವ ಸರ್ಕಾರಕ್ಕಾಗಿ ಹೊಸ ಹೋರಾಟವನ್ನು ಪ್ರಾರಂಭಿಸಲು ಇದು ಸ್ಫೂರ್ತಿಯಾಗಿದೆ, ”ಎಂದು ಅವರು ಹೇಳಿದ್ದಾರೆ. ಸಾಮಾನ್ಯ ಜನರ ಕಲ್ಯಾಣ ಮತ್ತು ಪ್ರಗತಿಗಾಗಿ ಕೆಲಸ ಮಾಡುವ ಸರ್ಕಾರವನ್ನು ತರಲು ತಮ್ಮ ಪಕ್ಷದ ಕಾರ್ಯಕರ್ತರ ಬೆಂಬಲವನ್ನು ಕೋರಿದ್ದಾರೆ. ಕಹಳೆ ಶೌರ್ಯ, ವಿಜಯ ಮತ್ತು ಹೋರಾಟದ ಸ್ಫೂರ್ತಿಯ ಸಂಕೇತವಾಗಿದೆ ಎಂದು ರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಹೇಳಿದ್ದಾರೆ.

ವಿಡಿಯೊ ನೋಡಿ: ‘ತತ್ವಜ್ಞಾನಿ ಬಸವಣ್ಣ ಸಾಂಸ್ಕೃತಿಕ ನಾಯಕ’ ಹಿನ್ನೆಲೆ ಮತ್ತು ಆಗಬೇಕಾದ ಕೆಲಸಗಳು – ವಿಶ್ಲೇಷಣೆ : ಮೀನಾಕ್ಷಿ ಬಾಳಿ

Donate Janashakthi Media

Leave a Reply

Your email address will not be published. Required fields are marked *