ರಾಣೇಬೆನ್ನೂರ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳ ನೇಮಕಾತಿ ಪರೀಕ್ಷೆ ಹಾಗೂ ಕಾನೂನು ಪದವಿ ಪರೀಕ್ಷೆಗಳು ಒಂದೇ ದಿನ ಇರುವುದರಿಂದ ಸಿವಿಲ್ ಪ್ರೊಸೀಜರ್ ಸಂಹಿತೆಯ (ಸಿಪಿಸಿ) ವಿಷಯದ ಪರೀಕ್ಷೆಗಳನ್ನು ಮುಂದೂಡಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ)ಕಾನೂನು ವಿದ್ಯಾರ್ಥಿಗಳ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆರ್.ಟಿ.ಇ.ಎಸ್ ಕಾನೂನು ಮಹಾವಿದ್ಯಾಲದ ಪ್ರಾಂಶುಪಾಲರಾದ ರಮೇಶ ಬಿ ರ ಮೂಲಕ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯ ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಬರುವ ಕಾನೂನು ಪದವಿ ಕಾಲೇಜ್ ಗಳ ಸೆಮಿಸ್ಟರ್ ಪರೀಕ್ಷೆಗಳು ಇದೆ ಜನವರಿ ತಿಂಗಳು ಪ್ರಾರಂಭವಾಗಿವೆ.
ಆದರೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳ ನೇಮಕಾತಿಯ ಅಭ್ಯಾರ್ಥಿಗಳಿಗೆ ಜನವರಿ 25 ಶನಿವಾರ ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿದ್ದು ಪರೀಕ್ಷೆ ಬರೆಯಲು ದೂರದ ಊರಗಳಿಗೆ ಅಂದರೆ ಸುಮಾರ 500-300 ಕಿಮೀ ಹೋಗಬೇಕಾಗಿದೆ.
ಇದನ್ನೂ ಓದಿ: ಟ್ರಂಪ್ 2.0: ಮೊದಲ ದಿನವೇ ಸುಗ್ರೀವಾಜ್ಞೆಗಳ ಸೆಂಚುರಿ
ಎರಡೂ ಮೂರು ದಿನಗಳು ಪ್ರಯಾಣ ಮಾಡುವುದರಿಂದ ಯಾವುದಾದರೂ ಒಂದು ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ. ಮತ್ತೊಂದು ಪರೀಕ್ಷೆಗಳಿಂದ ವಂಚಿತರಾಗುವ ಎಂಬ ಗೊಂದಲ, ಭಯದ ವಾತಾವರಣದಲ್ಲಿ ವಿದ್ಯಾರ್ಥಿಗಳು ಸಿಲುಕಿದ್ದಾರೆ.
ಆದರಿಂದ ಜನವರಿ 25 ರಂದು ನಡೆಯಬೇಕಾದ ಸಿವಿಲ್ ಪ್ರೊಸೀಜರ್ ಸಂಹಿತೆಯ (ಸಿಪಿಸಿ) ವಿಷಯದ ಪರೀಕ್ಷೆಗಳನ್ನು ಮೂಂದಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯ ಮಾನ್ಯ ಕುಲಪತಿಗಳಾದ ಪ್ರೊ. ಡಾ. ಸಿ. ಬಸವರಾಜು ಅವರಿಗೆ ಎಸ್ಎಫ್ಐ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿವರಾಜ ಹುಣಸಿಕಟ್ಟಿ, ಸುನೀಲ್ ಬೆಂದ್ರೆ, ವಿನಾಯಕ, ಮುತ್ತಯ್ಯ ಹೀರೆಮಠ, ಕಿರಣ ತುಮ್ಮಿನಕಟ್ಟಿ, ಕರಬಸಪ್ಪ ಹೆಚ್, ರಾಹುಲ್ ರಟ್ಟಿಹಳ್ಳಿ, ಅಜೇಯ್, ಹನುಮಂತ ಹರಿಜನ, ಪುನೀತ್ ಎಸ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಗೋಷ್ಠಿ -1 | ಗಣರಾಜ್ಯ ಭಾರತ @75 – ಅಸ್ಥಿರಗೊಳ್ಳುತ್ತಿರುವ ಪ್ರಜಾಪ್ರಭುತ್ವ – ಜನರ ಕರ್ತವ್ಯ | ಡಾ. ಚಂದ್ರ ಪೂಜಾರಿ