ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಿ; ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳಿಗಾಗಿ ಬಸ್ ನಿಲ್ಲಿಸಲು ಎಸ್ಎಫ್ಐ ಆಗ್ರಹ

ರಾಣೇಬೆನ್ನೂರ: ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳಿಗಾಗಿ ಬಸ್ ನಿಲ್ಲಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ಎಫ್ಐ) ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ  ಆಗಸ್ಟ್‌ 2ರಂದು ನಗರದ ಬಸ್ ನಿಲ್ದಾಣದ ಎದುರು ಸಾರಿಗೆ ಕಂಟ್ರೋಲರ್ ಮೂಲಕ ಘಟಕ ವ್ಯವಸ್ಥಾಪಕರಿಗೆ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು. ಸಮರ್ಪಕ

ಈ ಸಂದರ್ಭದಲ್ಲಿ ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ  ಗೌತಮ್ ಸಾವಕ್ಕನವರ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ವಿದ್ಯಾಭ್ಯಾಸದ ಉದ್ದೇಶದಿಂದ ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ತಾಲ್ಲೂಕು ಕೇಂದ್ರದ ಕಾಲೇಜುಗಳಿಗೆ ಬರುತ್ತಾರೆ. ಸಮರ್ಪಕ

ತಾಲ್ಲೂಕು ಕೇಂದ್ರ ಬಸ್ ನಿಲ್ದಾಣದಿಂದ ಬಹುತೇಕ ಶಾಲಾ-ಕಾಲೇಜುಗಳು, ಹಾಸ್ಟೆಲ್ ಗಳು ನಗರದಿಂದ ಸರಿಸುಮಾರು ದೂರದಲ್ಲಿರುವದರಿಂದ ದಿನ ನಿತ್ಯವೂ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಫ್ರೀಡಂ ಪಾರ್ಕ್‌ನಲ್ಲಿದ್ದ ಮರ ಕಡಿದ ಉಪ್ಪಾರಪೇಟೆ ಪೊಲೀಸರ ವಿರುದ್ಧ ಎಫ್‌ಐಆರ್‌

ಸ್ತ್ರೀ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹೆಸರಿಗಾಗಿ ಆಗಿದೆ ವಿನಃ ಸರಿಯಾಗಿ ಬಸ್ ಗಳನ್ನು ಬಿಡದೆ ವಿದ್ಯಾರ್ಥಿಗಳಿಗೆ ಸೇರಿದಂತೆ ಸಾರ್ವಜನಿಕರಿಗೂ ಅನಾನುಕೂಲವಾಗಿದೆ ಎಂದರು.

ಎಸ್ಎಫ್ಐ ಸಹ ಕಾರ್ಯದರ್ಶಿ ಕೃಷ್ಣ ನಾಯಕ ಮಾತನಾಡಿ, ಸಂಪೂರ್ಣ ಗ್ರಾಮೀಣ ಪ್ರದೇಶಗಳಿಗೆ ಬಸ್ ಗಳನ್ನು ಬಿಡದೆ ಕೇವಲ ನಗರ ದಿಂದ ನಗರಗಳಿಗೆ ನಾನ್ ಸ್ಟಾಪ್, ಕಲೆಕ್ಷನ್ ಮಾಡುವ ಪರಿಯಲ್ಲಿ ಇದೆ ವಿನಹ ಗ್ರಾಮೀಣ ಜನರ, ವಿದ್ಯಾರ್ಥಿಗಳ ಬಗ್ಗೆ ಗಮನಿಸುತ್ತಿಲ್ಲ. ಪ್ರತಿನಿತ್ಯ ತಾಲ್ಲೂಕು ಕೇಂದ್ರಕ್ಕೆ ಸಾವಿರಾರು ವಿದ್ಯಾರ್ಥಿಗಳು ಉದ್ಯೋಗಿಗಳು ಸಾರ್ವಜನಿಕರಿಗೆ  ಸರ್ಕಾರಿ ಬಸ್ ಸೌಲಭ್ಯ ಇಲ್ಲದೆ ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ. ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಸಾರಿಗೆ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಶೈಕ್ಷಣಿಕವಾಗಿ ಹಿನ್ನಡೆಯಾಗುತ್ತಿದೆ ಆದ್ದರಿಂದ ರೋಟರಿ ಕಾಲೇಜಿಗೆ ಬಸ್ ವ್ಯವಸ್ಥೆ ಸೇರಿದಂತೆ ನಗರ ಸಾರಿಗೆ ಬಸ್ ಬಿಡಲು ಅನೇಕ ಬಾರಿ ಹೋರಾಟ ಮಾಡಿ ಮನವಿ ಕೊಟ್ಟಿದ್ದೇವೆ.

ನಗರ ಸಾರಿಗೆ ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶಗಳಿಗೆ ಈ ಕೂಡಲೇ ಕೆಎಸ್ಆರ್ಟಿಸಿ ಸಂಸ್ಥೆಯು ಸಮರ್ಪಕವಾಗಿ ಬಸ್ ಸೌಲಭ್ಯ ಒದಗಿಸಬೇಕೆಂದು ಹಾಗೂ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ) ಸಂಘಟನೆ ಆಗ್ರಹ ಮಾಡುತ್ತದೆ.

ಬೇಡಿಕೆಗಳು

1. ರೋಟರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು.

2. ಕಮಲಾ ನಗರ ಹಾಗೂ ಈಶ್ವರಿ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರು ನಿಲಯಕ್ಕೆ ಹೆಚ್ಚುವರಿ ಬಸ್ ಬಿಡಬೇಕು.

3. ಕಮಲಾ ನಗರಕ್ಕೆ ಹತ್ತಿರವಾಗುವಂತೆ ದಾವಣಗೆರೆ ಮಾರ್ಗವಾಗಿ ಚಲಿಸುವ ಬಸ್ ಗಳಿಗೆ ಕಡ್ಡಾಯವಾಗಿ ಬಸ್ ನಿಲ್ಲಿಸಬೇಕು.

4. ಮಾಕನೂರ ಕ್ರಾಸ್ ಬಳಿ ಇಂಜಿನಿಯರಿಂಗ್, ರೋಟರಿ ಹೈಸ್ಕೂಲ್, ಪಿಯು ಕಾಲೇಜ್, ಆರ್.ಟಿ.ಇ.ಎಸ್. ಪದವಿ ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ದಾವಣಗೆರೆ, ಹರಿಹರ, ಶಿವಮೊಗ್ಗ ಮತ್ತು ಸ್ಥಳೀಯ ಎಲ್ಲಾ ಬಸ್ ಗಳಿಗೆ ಕೋರಿಕೆ ನಿಲುಗಡೆ ನೀಡಬೇಕು.

5. ನಿಯಮಗಳನ್ನು ಸಡಿಲ ಮಾಡಿ ಡಿಪೋ ದಿಂದ ಬಸ್ ನಿಲ್ದಾಣಕ್ಕೆ ಹೊರಡುವ ಖಾಲಿ ಬಸ್ ಗಳಿಗೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು.

6. ಹುಣಸಿಕಟ್ಟಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಸುಗಳನ್ನು ಕಲ್ಪಿಸಬೇಕು.

7. ಅನೇಕ ಗ್ರಾಮೀಣ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಹೆಚ್ಚುವರಿ ಬಸ್ಸುಗಳನ್ನು ಬಿಡಬೇಕು.

8. ಎಸ್ಎಫ್ಐ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಈಗಿರುವ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಹಾಗೂ ನೂತನ ವಿಶಾಲ ಬಸ್ ನಿಲ್ದಾಣ ಮಂಜೂರು ಮಾಡಬೇಕು.

9. ವಿದ್ಯಾರ್ಥಿಗಳ ಬಸ್ಸಿನ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರ ನೇತೃತ್ವದಲ್ಲಿ ಡಿಪೋ ಮ್ಯಾನೇಜರ್ ಹಾಗೂ ಎಸ್ಎಫ್ಐ ಸಂಘಟನೆ ಮುಖಂಡರ ಸಭೆ ಕರೆಯಬೇಕು.

ಈ ಸಂದರ್ಭದಲ್ಲಿ ಮಹೇಶ್ ಮುರೊಳ, ಪ್ರವೀಣ್ ಕೆ ಎನ್, ಕುಬೇರ ಹೆಚ್,  ಕಿಶನ್ ಡಿ,  ನಿಕಿತ್ ಆರ್ ಯು,  ಪ್ರಜ್ವಲ್ ಟಿ,  ರಾಜೇಶ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಧರ್ಮಸ್ಥಳದ ಕೊಲೆ ಪ್ರಕರಣ | ಉಗ್ರಪ್ಪ ಸಮಿತಿಯಲ್ಲಿ ಏನಿತ್ತು? ವಿ.ಎಸ್.‌ ಉಗ್ರಪ್ಪ ಜೊತೆ ಮಾತುಕತೆJanashakthi Media

Donate Janashakthi Media

Leave a Reply

Your email address will not be published. Required fields are marked *