ಬೆಂಗಳೂರು: ಎಸ್‌ಎಫ್‌ಐ ಕರ್ನಾಟಕದ ನಿಯೋಗವು ಜನವರಿ 23ರಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಎಸ್. ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ.ಸುಧಾಕರ್ ಅವರನ್ನು ಭೇಟಿಯಾಗಿ ಇತ್ತೀಚಿಗೆ ನಡೆದ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಪ್ರಿಯದರ್ಶಿನಿ ಆತ್ಮಹತ್ಯೆಯನ್ನು ತನಿಖೆ ಮಾಡಿ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಡಬೇಕು ಹಾಗೂ ಆತ್ಮಹತ್ಯೆಗೆ ಕಾರಣರಾದ ಕಾಲೇಜಿನ ಪ್ರಾಧ್ಯಾಪಕರ ಮತ್ತು ಆಡಳಿತದ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಆಕ್ಸ್ಫರ್ಡ್ ಡೆಂಟಲ್ ಕಾಲೇಜ್ ಬೊಮ್ಮನಹಳ್ಳಿ ಇದನ್ನು ಕಪ್ಪು ಚುಕ್ಕಿಗೆ ಸೇರಿಸಬೇಕು ಎಂದು ಎಸ್ಎಫ್ಐ ನಿಯೋಗ ಒತ್ತಾಯಿಸಿದೆ. ವಿದ್ಯಾರ್ಥಿನಿ
ಈ ಕುರಿತಾಗಿ ಪ್ರತಿಕ್ರಿಯಿಸಿದ ಶರಣಪ್ರಕಾಶ್ ಪಾಟೀಲ್ ಅವರು ನಿಮ್ಮ ಬೇಡಿಕೆಯಂತೆ ತನಿಖೆ ಮಾಡಲು ಸಮಿತಿಯನ್ನು ರಚನೆ ಮಾಡಲಾಗಿದೆ ಈ ಹಿನ್ನೆಲೆಯಲ್ಲಿ ತನಿಖೆಯ ವರದಿ ಬಂದ ಕೂಡಲೇ ಶಿಸ್ತು ಕ್ರಮ ಜರುಗಿಸಲಾಗುವುದು ಮತ್ತು ಕುಟುಂಬಕ್ಕೆ ಪರಿಹಾರವನ್ನು ಘೋಷಿಸುವ ವಿಚಾರವನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು. ವಿದ್ಯಾರ್ಥಿನಿ
ಅನುದಾನಿತ ಸರ್ಕಾರಿ ಕಾಲೇಜುಗಳಲ್ಲಿ ಮತ್ತು ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆಯಾಗಲಿ, ಸಮಸ್ಯೆಗಳು ಎದುರಾದಾಗ ಪ್ರಶ್ನಿಸುವುದಾಗಲಿ, ನೈತಿಕ ಬೆಂಬಲವನ್ನು ಕೊಡುವುದಾಗಲಿ, ಯಾವುದೇ ರೀತಿಯ ಧೈರ್ಯವಿಲ್ಲದ ವಿದ್ಯಾರ್ಥಿ ಸಮುದಾಯವನ್ನು ಸೃಷ್ಟಿಸುತ್ತಿರುವುದು ನಮ್ಮ ಶಿಕ್ಷಣದ ವೈಫಲ್ಯವನ್ನು ನಾವು ನೋಡುತ್ತೇವೆ. ಈ ಹಿನ್ನೆಲೆಯಲ್ಲಿ ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಹಾಗೂ ಕಾಲೇಜು ಕ್ಯಾಂಪಸ್ ಉಳಿವಿಗಾಗಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸಲು ಕರ್ನಾಟಕ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಭಾರತ ವಿದ್ಯಾರ್ಥಿ ಫೆಡರೇಶನ್ ಒತ್ತಾಯಿಸಿದೆ.
ಇದನ್ನೂ ಓದಿ: ಕೋಯಿಕ್ಕೋಡ್ | ಪ್ರಶ್ನೆ ಕೇಳುವುದೇ ಅಪರಾಧವಾಗುತ್ತಿರುವ ಕಾಲ: ಪ್ರಕಾಶ್ ರಾಜ್ ಎಚ್ಚರಿಕೆ
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಈಗಾಗಲೇ ವಿದ್ಯಾರ್ಥಿ ಸಂಘಟನೆಯ ಚುನಾವಣೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿ ಚೆರ್ಚೆ ನಡೆಯುತ್ತಿದೆ, ಇದಕ್ಕೆ ಪೂರಕವಾದ ಅಂತಹ ಕಾಲೇಜುಗಳಲ್ಲಿ ಚುನಾವಣೆಗಳು ಹೇಗೆ ನಡೆಯಬೇಕು ಎಂಬುವುದರ ಬಗ್ಗೆ ಮಾಹಿತಿಯನ್ನು ಎಎಫ್‌ಐ ವಿದ್ಯಾರ್ಥಿ ಸಂಘಟನೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದು ಸೂಕ್ತ ಎಂದು ಸಚಿವರು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಎಫ್ಐ ನ ಸಿಇಸಿ ಸದಸ್ಯರಾದ ನಿಖಿಲ್ ಅವರು ಈಗಾಗಲೇ ಜೆಎನ್‌ಯು, ಪಾಂಡಿಚರಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಯುತ್ತಲಿವೆ ಆ ಮಾದರಿಯನ್ನು ಅನುಸರಿಸಿ ಚುನಾವಣೆಯನ್ನು ನಡೆಸುವುದು ಸೂಕ್ತ ಎಂದರು. ಎಸ್ಎಫ್ಐ ಉಪಾಧ್ಯಕ್ಷರು ಮಾತನಾಡಿ ತಾವುಗಳು ಸಮಿತಿಯನ್ನು ರಚಿಸಿ ಆ ಸಮಿತಿಯಲ್ಲಿ ವಿದ್ಯಾರ್ಥಿ ಸಂಘಟನೆಯ ಮುಖಂಡರುಗಳನ್ನು ಬರಮಾಡಿಕೊಂಡು ಚೆರ್ಚಿಸಬೇಕು. ಕೂಡಲೆ ಸಭೆಯನ್ನು ಕರೆಯುವುದು ಸೂಕ್ತ ಆಗ ಆ ಸಭೆಯಲ್ಲಿ ವಿದ್ಯಾರ್ಥಿ ಸಂಘದ ಮುಖಂಡರುಗಳು ನೀಡುವ ಅಭಿಪ್ರಾಯಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಚುನಾವಣೆಗಳನ್ನು ನಡೆಸಬೇಕು ಎಂದು ತಿಳಿಸಲಾಯಿತು.

ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಮ್.ಸಿ.ಸುಧಾಕರ್ ಅವರು ಮಾತನಾಡಿ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು. ನಿಯೋಗ ಮುಂದಿಟ್ಟ ಬೇಡಿಕೆ.
1. ಆಕ್ಸ್‌ಫರ್ಡ್ ದಂತ ಕಾಲೇಜಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗೆ ನ್ಯಾಯ ಒದಗಿಸುವುದು ಮತ್ತು ಕುಟುಂಬಕ್ಕೆ ಪರಿಹಾರವಾಗಿ ಒಂದು ಕೋಟಿ ರೂಪಾಯಿ ನೀಡಬೇಕು.
2. ಮೆಡಿಕಲ್ ಇಂಜಿನಿಯರಿಂಗ್ ಕಲಿಯುವ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಜೀವವಿಮೆ ಸೌಲಭ್ಯ ನೀಡಲು ಸರ್ಕಾರ ಸೂಕ್ತ ಕ್ರಮವಹಿಸಬೇಕು.
3. ವಿದ್ಯಾರ್ಥಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಪ್ರಜಾಸತ್ತಾತ್ಮಕವಾಗಿ ಅವಕಾಶ ನೀಡುವ ಸಲುವಾಗಿ ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಡೆಸುವ ತುರ್ತು ಅಗತ್ಯವಿದೆ ಎಂದು ತಿಳಿಸಲಾಯಿತು. ನಿಯೋಗವು ಹಲವಾರು ವಿಷಯಗಳನ್ನು ಚರ್ಚಿಸಿತು.
ಜೊತೆಗೆ ಬೆಂಗಳೂರಿನ ಎಂಎಲ್‌ಎ ಸೌಮ್ಯ ರೆಡ್ಡಿ ಅವರು ಇದ್ದರು. ಈ ವಿಷಯಗಳ ಕುರಿತು ಸಂಘಟನೆಯ ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಚಿವರು ನಿರ್ಧರಿಸಿದ್ದಾರೆ.
ಈ ನಿಯೋಗದಲ್ಲಿ SFI ಕೇಂದ್ರ(ಸಿಇಸಿ) ಸದಸ್ಯರಾದ ನಿಖಿಲ್ ಹಾಗೂ ಬಸವರಾಜ್ ಗುಳೆದಾಳ್ ಬೆಂಗಳೂರಿನ SFI ಮುಖಂಡರಾದ ಕಾಸಿಂ ಮತ್ತು ಕಾವ್ಯ ಅವರು ಇದ್ದರು.
ಇದನ್ನೂ ನೋಡಿ: ಲಾಲ್‌ಬಾಗ್ ಫ್ಲವರ್ ಶೋ| ಬಣ್ಣಬಣ್ಣದ ಹೂಗಳ ಚಿತ್ತಾರದಲ್ಲಿ ‘ತೇಜಸ್ವಿ ವಿಸ್ಮಯ’ Janashakthi Media
