ಹೊಸ ತೆರಿಗೆ: ತ್ಯಾಜ್ಯ ವಿಲೇವಾರಿ ಸೇವೆಗಳಿಗೂ ‘ಸೇವಾ ಶುಲ್ಕ’

ಬೆಂಗಳೂರು: ನಗರದಲ್ಲಿ ಒಂದಾದ ಮೇಲೊಂದರ ಶುಲ್ಕದ ಬರೆ ಬೀಳುತ್ತಲೇ ಇದೆ. ತ್ಯಾಜ್ಯ ವಿಲೇವಾರಿ ಶುಲ್ಕ, ಆಸ್ತಿ ತೆರಿಗೆ ಶುಲ್ಕ, ಪಾರ್ಕಿಂಗ್ ಶುಲ್ಕ ಆಯ್ತು. ಇದೀಗ ಮನೆ ಮಾಲೀಕರಿಗೆ ಹೊಸ ತೆರಿಗೆ ತಲೆನೋವಾಗಿದೆ. ಈಗ ಕಟ್ಟಡ ನಿರ್ಮಾಣ ಮತ್ತು ಉರುಳಿಸುವಿಕೆ, ತ್ಯಾಜ್ಯ ವಿಲೇವಾರಿ ಸೇವೆಗಳಿಗೂ ಶುಲ್ಕದ ಬಿಸಿ ತಗುಲಲಿದೆ. ತೆರಿಗೆ

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ನಿರ್ಮಾಣ ಮತ್ತು ಉರುಳಿಸುವಿಕೆ (C&D) ತ್ಯಾಜ್ಯ ವಿಲೇವಾರಿ ಸೇವೆಗಳಿಗಾಗಿ ಪಾವತಿಸಬೇಕಾದ ‘ಸೇವಾ ಶುಲ್ಕ’ ವಿಧಿಸಲು ಸಜ್ಜಾಗಿದೆ. ಇದರಿಂದಾಗಿ, ಸಣ್ಣ ನವೀಕರಣಗಳಿಂದ ಹಿಡಿದು ದೊಡ್ಡ ಕಟ್ಟಡ ಧ್ವಂಸ ಕಾರ್ಯಗಳವರೆಗೆ ಹೆಚ್ಚು ಹಣ ಕೊಡುವ ಕಾಲ ಆರಂಭವಾಗಬಹುದು ಎಂಬ ಆತಂಕ ಇದೆ. ತೆರಿಗೆ

ಈ ಸೇವಾ ಶುಲ್ಕದ ಕುರಿತು ಖಾಸಗಿ ಕಂಪನಿಯೊಂದರ ಟೆಂಡರ್‍‌ನಲ್ಲಿ, ದರ ಪ್ರಸ್ತಾಪವಾಗಿದೆ. ಪ್ರತಿ ಟನ್‌ಗೆ 960 ರೂ.ಗಳವರೆಗೆ ಇರಬಹುದು ಎಂಬುದು ಬಹಿರಂಗವಾಗಿದೆ. ಇದೀಗ ತಲೆನೋವಿನ ಸಂಗತಿ ಏನೆಂದರೆ, ಇಷ್ಟು ದೊಡ್ಡ ಮೊತ್ತವನ್ನು ಸಾಮಾನ್ಯ ನಾಗರಿಕರೇ ಆಗಲಿ ಅಥವಾ ಸಣ್ಣ ಗುತ್ತಿಗೆದಾರರು ಆಗಲಿ ಭರಿಸುವುದು ಸಾಧ್ಯವಿಲ್ಲ. ಇದು ಸಾರ್ವಜನಿಕರ ಮೇಲೆ ಹೆಚ್ಚುವರಿ ಹಣದ ಬಿಕ್ಕಟ್ಟಾಗಬಹುದೆಂಬ ಆತಂಕ ಹಬ್ಬುತ್ತಿದೆ. ಇದಲ್ಲದೇ, ಈ ಸೇವೆಗೆ ಯಾವುದೇ ಸಬ್ಸಿಡಿ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಇನ್ನೂ ಸ್ಪಷ್ಟನೆ ನೀಡಿಲ್ಲ. ತೆರಿಗೆ

ಇದನ್ನೂ ಓದಿ: ಸಿಇಟಿ: ಅಂಕಗಳನ್ನು ದಾಖಲಿಸಲು ಮೇ 26ರಿಂದ ಆನ್‍ಲೈನ್ ಲಿಂಕ್ ತೆರವು

ಒಂದು ಏಜೆನ್ಸಿಗೆ ಇಡೀ ನಗರ?

ಅಂದಹಾಗೆ ಬೆಂಗಳೂರಿನ ನಗರದಾತ್ಯಂತ &D ತ್ಯಾಜ್ಯ ಸಂಗ್ರಹ ಹಾಗೂ ಸಾಗಣೆಗೆ BSWML ಕೇವಲ ಒಂದು ಏಜೆನ್ಸಿಯನ್ನು ಆಯ್ಕೆ ಮಾಡಿದೆ. ಆದರೆ ಇದೀಗ ಈ ಒಂದು ಪ್ರಕ್ರಿಯೆಯ ಬಗ್ಗೆಯೇ ಸಂಶಯ ಹುಟ್ಟಿಕೊಂಡಿದೆ. ಎಂಟು ಟೆಂಡರ್‌ಗಳಲ್ಲಿ ಐದು ಟೆಂಡರ್‍‌ಗಳನ್ನು ಬೆಂಗಳೂರು ಮೂಲದ ಚೈತ್ರ ಸಿವಿಲ್ ವೆಂಚರ್ಸ್ LLP ಗೆ ನೀಡಲಾಗಿದ್ದು, ಉಳಿದ ಮೂರು ಇನ್ನೂ ಬಾಕಿಯೇ ಇದೆ. ಇಡೀ ನಗರದಲ್ಲಿ ಒಂದೇ ಏಜೆನ್ಸಿಗೆ ವಿಲೇವಾರಿ ಅಧಿಕಾರ ನೀಡುವುದು “ಪ್ರಾಯೋಗಿಕವಾಗಿ ಸಾಧ್ಯವಿಲ್ಲ” ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಸೇವಾ ಶುಲ್ಕ ನೇರವಾಗಿ ಏಜೆನ್ಸಿಯಿಂದ?

ಇನ್ನ ಈ ಮೂಲ ಯೋಜನೆಯ ಪ್ರಕಾರ, ಖಾಸಗಿ ಏಜೆನ್ಸಿಗಳು ನೇರವಾಗಿ ತ್ಯಾಜ್ಯ ಉತ್ಪಾದಕರಿಂದ ಶುಲ್ಕವನ್ನು ವಸೂಲಿ ಮಾಡಬಹುದು ಎಂಬ ನಿಗದಿಯಾಗಿದ್ದದ್ದು ಮತ್ತೊಂದು ಚಿಂತೆಯಾಗಿದೆ. ಈ ಇಧಾನವು ಸಾರ್ವಜನಿಕರಿಗೆ ಹೆಚ್ಚು ತೊಂದರೆ ಉಂಟುಮಾಡಬಹುದು ಎಂಬ ಎಚ್ಚರಿಕೆಯನ್ನು ಕೆಲವು ಸ್ಥಳೀಯ ಸಂಸ್ಥೆಗಳ ಸಂಚಾಲಕರು ಸೂಚಿಸಿದ್ದಾರೆ. ಪರ್ಯಾಯವಾಗಿ, BSWML ಶುಲ್ಕವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ನಂತರ ಗುತ್ತಿಗೆದಾರರಿಗೆ ಪಾವತಿಸುವ ಸಾಧ್ಯತೆಯೂ ಹೊರಹೊಮ್ಮಿದೆ.

ಸೇವೆಯ ಸ್ಪರ್ಧಾತ್ಮಕತೆ ಇಲ್ಲದಿದ್ದರೆ ಜನ ಸೇರಲ್ಲ:

ಬೆಂಗಳೂರು ಒಕ್ಕೂಟದ ಸಂಚಾಲಕ ಆರ್. ರಾಜಗೋಪಾಲನ್ ಈ ನೂತನ ಯೋಜನೆಯ ಬಗ್ಗೆ ತಮ್ಮ ಗಂಭೀರ ಕಳವಳವನ್ನು ವ್ಯಕ್ತಪಡಿಸಿದ್ದಾರೆ. “ಸೇವೆಯು ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಭ್ಯವಿಲ್ಲದಿದ್ದರೆ, ಸಾರ್ವಜನಿಕರು ತ್ಯಾಜ್ಯ ಹಸ್ತಾಂತರಿಸಲು ಮುಚ್ಚಿನ ಮನಸ್ಸು ಹೊಂದಿರುತ್ತಾರೆ,” ಎಂದು ಅವರು ಹೇಳಿದರು. ಈ ದಾಕಲತೆಯ ಬೆಲೆಯಲ್ಲಿ ತ್ಯಾಜ್ಯ ವಿಲೇವಾರಿಯನ್ನು ನಿರ್ವಹಿಸಲು ಪ್ರೋತ್ಸಾಹ ನೀಡದಂತಾಗುತ್ತದೆ.

ಮುಂಬೈ ಮಹಾನಗರದಲ್ಲಿ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ, ಸಿ & ಡಿ ತ್ಯಾಜ್ಯ ಸೇವಾ ಶುಲ್ಕವನ್ನು ಪ್ರತಿ ಟನ್‌ಗೆ 400 ರೂ.ಗಳಿಂದ 200 ರೂ.ಗಳಿಗೆ ಇಳಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಬೆಂಗಳೂರಿನಲ್ಲಿ ಇದಕ್ಕೆ ವಿರುದ್ಧವಾಗಿ 960 ರೂ.ಗಳವರೆಗೆ ಶುಲ್ಕ ವಿಧಿಸುವ ಪ್ರಯತ್ನ, ಖರ್ಚು ಕಡಿತಕ್ಕಾಗಿ ಹೋರಾಡುತ್ತಿರುವ ನವೀನ ಗೃಹನಿರ್ಮಾಣದ ಮಾಲೀಕರಿಗೆ ಮತ್ತೊಂದು ಆರ್ಥಿಕ ಸಂಕಷ್ಟವಾಗಲಿದೆ.

ವಿಲೇವಾರಿ ಹಾಗೂ ಸಂಸ್ಕರಣೆ, ವಿಭಜನೆಯ ಅಗತ್ಯತೆ:

C&D ತ್ಯಾಜ್ಯವನ್ನು ಕೇವಲ ಸಂಗ್ರಹಿಸಿ ಸಾಗಿಸುವುದರಿಂದ ಮಾತ್ರ ಮುಗಿಯದು. ಶಿಲಾಖಂಡ ಹಾಗೂ ಇತರ ಅವಶೇಷಗಳ ಸಂಸ್ಕರಣೆಗೆ ವಿಭಿನ್ನ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಅಗತ್ಯ. ತಜ್ಞರು ಈ ಎರಡೂ ಪ್ರಕ್ರಿಯೆಗಳಿಗೆ ವಿಭಿನ್ನ ಗುತ್ತಿಗೆ ನೀಡುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಕಣ್ಣೂರು ಮತ್ತು ಚಿಕ್ಕಜಾಲದಲ್ಲಿ ಈಗಾಗಲೇ ಇರುವ ಸಂಸ್ಕರಣಾ ಘಟಕಗಳ ಬಳಕೆ ಮಾತ್ರ 100% ಆಗದಿರುವುದು, ಇನ್ನು ಹೊಸ ಘಟಕಗಳ ಅಗತ್ಯವಿದೆಯೇ ಎಂಬ ಪ್ರಶ್ನೆ ಎಬ್ಬಿಸುತ್ತಿದೆ.

ಆಡಳಿತ ವಿಕೇಂದ್ರೀಕರಣದ ಬದಲು ಒಗ್ಗಟ್ಟಿಗೆ ಒಲವು?

ರಾಜಗೋಪಾಲನ್ ಹೇಳಿದ್ದಾರೆ: “ಸರ್ಕಾರ ಆಡಳಿತ ವಿಕೇಂದ್ರೀಕರಣದ ಬಗ್ಗೆ ಮಾತನಾಡುತ್ತದೆ, ಆದರೆ ಟೆಂಡರ್‌ಗಳಲ್ಲಿ ಕೇಂದ್ರೀಕರಣದ ಪ್ರಯತ್ನವಿದೆ”. ಇದರಿಂದ ಸ್ಥಳೀಯ ಸಂಸ್ಥೆಗಳ ಕಾರ್ಯತಂತ್ರಗಳು ನೀರಸವಾಗಬಹುದು. “ಒಂದು ಸಂಸ್ಥೆಗೆ ಅಂತ್ಯದಿಂದ ಕೊನೆಯವರೆಗೆ ಅಧಿಕಾರ ಹಸ್ತಾಂತರ ಮಾಡಿದರೆ, ಕೇವಲ ಬಿಲ್ಲಿಂಗ್‌ಗಾಗಿ ತ್ಯಾಜ್ಯ ಉತ್ಪತ್ತಿಯನ್ನು ಅಧಿಕವಾಗಿ ತೋರಿಸುವ ಸಾಧ್ಯತೆಯೂ ಇದೆ”, ಎಂದಿದ್ದಾರೆ ಅವರು.

ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿರುವ, ತಂತ್ರಜ್ಞಾನ ಹಬ್ ಆಗಿರುವ ನಗರವಾದರೂ, ಮೂಲಭೂತ ಸೌಲಭ್ಯಗಳ ನಿರ್ವಹಣೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಒಂದು ನಿರಂತರ ಸಮಸ್ಯೆಯಾಗಿದೆ. C&D ತ್ಯಾಜ್ಯ ಸೇವಾ ಶುಲ್ಕದ ಬಗ್ಗೆ ಸ್ಪಷ್ಟ ನಿಯಮ, ಸಮರ್ಪಕ ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆ ಮತ್ತು ಸಾರ್ವಜನಿಕರ ನಂಬಿಕೆಯನ್ನು ಗಳಿಸುವ ವಾತಾವರಣ ನಿರ್ಮಾಣವಾಗದಿದ್ದರೆ, ಈ ಯೋಜನೆಯು ನಗರ ವ್ಯವಸ್ಥೆಯ ಮತ್ತೊಂದು ‘ಬಿಲ್ಡರ್ ಪ್ರಾಜೆಕ್ಟ್’ ಆಗಿ ಮಾರ್ಪಡಬಹುದೆಂಬ ಆತಂಕ ದಟ್ಟವಾಗಿದೆ.

ಇದನ್ನೂ ನೋಡಿ: ಫ್ಯಾಸಿಸಂ ವಿರುದ್ಧ ವಿಜಯದ 80 ವರ್ಷಗಳ ನಂತರ ಈಗ ಅದನ್ನು ಯಾಕೆ ನೆನಪಿಸಿಕೊಳ್ಳಬೇಕು ?

Donate Janashakthi Media

Leave a Reply

Your email address will not be published. Required fields are marked *