ಬೆಂಗಳೂರು: ನೈಸ್ ಕಂಪನಿ ದೌರ್ಜನ್ಯ ಹಾಗೂ ಭ್ರಷ್ಟಾಚಾರ ವಿರೋಧಿಸಿ ಸೆ-27 ರಂದು ದುಂಡು ಮೇಜಿನ ಸಭೆ ನಡೆಯಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ನೈಸ್ ಸಂತ್ರಸ್ಥ ರೈತರ ಹೋರಾಟ ಸಮಿತಿ ತಿಳಿಸಿದೆ.ಭ್ರಷ್ಟಾಚಾರ
ಇದನ್ನೂ ಓದಿ:ರೈತರ ಭೂಮಿ ಕಿತ್ತು ರಿಯಲ್ ಎಸ್ಟೇಟ್ ದಂಧೆ!: ನೈಸ್ ಸಂಸ್ಥೆ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜು
ಸೆ-25 ರಂದು ಬೆಂಗಳೂರು ಪ್ರಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ KPRS ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಮುಖಂಡರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KAIDB) ಮೂಲಕ 1997 ರಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಸರ್ಕಲ್‌ನಿಂದ ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರಿನವರೆಗೆ ಮತ್ತು ನೆಲಮಂಗಲ ರಸ್ತೆಯಿಂದ ಹೊಸೂರು ರಸ್ತೆಯವರೆಗೆ ಬಿಎಂಐಸಿ ಹೆದ್ದಾರಿ ಹಾಗೂ ಟೌನ್ ಶಿಪ್‌ಗಳ ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು. ನೈಸ್ ಕಂಪನಿಗೆ ಹಸ್ತಾಂತರಿಸಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ ಎಂದರು.
ಈ ರೀತಿ ಭೂಮಿ ಪಡೆದ ನೈಸ್ ಕಂಪನಿ ಸುಮಾರು 27 ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸದೇ ಮೂಲ ಒಪ್ಪಂದದ ಚೌಕ್ಕಟ್ಟನ್ನು ಉಲ್ಲಂಘಿಸಿದೆ. ರೈತರ ಒಪ್ಪಿಗೆ ಇಲ್ಲದೇ, ರೈತರ ಗಮನಕ್ಕೂ ಬಾರದಂತೆ ಭೂ ಸ್ವಾಧೀನದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿಕೊಂಡು. ಈಗ ಯಾವುದೇ ಪರಿಹಾರ ನೀಡದೇ ಸಿವಿಲ್ ಕೋರ್ಟ್‌ಗಳಲ್ಲಿ ರೈತರ ವಿರುದ್ಧ ಪ್ರತಿಬಂಧಾಕಜ್ಞೆ ಆದೇಶ ತಂದು ಬಲವಂತವಾಗಿ ಒಕ್ಕಲೆಬ್ಬಿಸುತ್ತಿದೆ. ಈಗಾಗಲೇ ಬೆಂಗಳೂರು ದಕ್ಷಿಣ ತಾಲ್ಲೂಕಿನ ಹಾಗೂ ರಾಮನಗರ ತಾಲ್ಲೂಕಿನ ರೈತರಿಗೆ ಇಂತಹ ನೋಟೀಸ್‌ಗಳು ತಲುಪಿ ಆತಂಕವನ್ನು ಉಂಟು ಮಾಡಿವೆ ಮತ್ತು ಕೆಲವರ ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ. ಹಂತ ಹಂತವಾಗಿ ಮೈಸೂರಿನ ತನಕ ಭೂಮಿ ಕಿತ್ತುಕೊಳ್ಳುವ ದೌರ್ಜನ್ಯಕ್ಕೆ ನೈಸ್ ಕಂಪನಿ ತನ್ನ ಖಾಸಗಿ ಗೂಂಡಾಪಡೆಯನ್ನು ಹಾಗೂ ಪೊಲೀಸ್ ಬಲವನ್ನು ಬಳಸುತ್ತಿದೆ ಎಂದು ಹೇಳಿದರು.ಭ್ರಷ್ಟಾಚಾರ
ಶ್ರೀ ಟಿ.ಬಿ.ಜಯಚಂದ್ರರವರ ನೇತೃತ್ವದ ಸದನ ಸಮಿತಿ, ಹಲವಾರು ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳು, ನೈಸ್ ಭೂ ಸ್ವಾಧೀನದ ವಿರುದ್ಧ ಇರುವಾಗಲೂ,ರೈತರ ಭೂಮಿ ಕಿತ್ತುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದರು.
ಇದನ್ನೂ ಓದಿ:ನೈಸ್ ಸಂಸ್ಥೆ ನಡೆಸಿರುವ ಅಕ್ರಮಗಳನ್ನು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು: ಕೆಪಿಆರ್‌ಎಸ್ ಒತ್ತಾಯ
ಈ ಹಿನ್ನೆಲೆಯಲ್ಲಿ ರೈತರ ಮೇಲೆ ನಡೆಯುತ್ತಿರುವ ಇಂತಹ ಅನ್ಯಾಯ-ದೌರ್ಜನ್ಯಗಳನ್ನು ಸಾರ್ವಜನಿಕರ ಹಾಗೂ ಸರ್ಕಾರದ ಗಮನ ಸೆಳೆಯಲು ನೈಸ್ ಕಂಪನಿಯ ಭ್ರಷ್ಟಾಚಾರ-ಅಕ್ರಮಗಳ ಕುರಿತು ತನಿಖೆಗೆ ಒಳಪಡಿಸಿ ಶಿಕ್ಷಿಸುವಂತೆ ಆಗ್ರಹಿಸಲು, ರೈತರ ಗಮನಕ್ಕೆ ಬಾರದಂತೆ ಭೂ ಸ್ವಾಧೀನ ಮಾಡಿರುವ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸುವಂತೆ, ನೈಸ್ ಕಂಪನಿಗೆ ಹಸ್ತಾಂತರಿಸಿರುವ ಭೂಮಿಯ ರಿಯಲ್ ಎಸ್ಟೇಟ್ ಮಾರಾಟವನ್ನು ರದ್ದುಪಡಿಸುವಂತೆ, ಸದನ ಸಮಿತಿ ಮತ್ತು ಸಂಪುಟ ಉಪ ಸಮಿತಿಗಳು ನೀಡಿರುವ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಲು ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಕರ್ನಾಟಕ ರಾಜ್ಯ ಸಮಿತಿ ಬೆಂಗಳೂರಿನಲ್ಲಿ ದಿನಾಂಕ 27-09-23 ರಂದು ಶಾಸಕರ ಭವನ 2ರ ಸಮ್ಮೇಳನ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ದುಂಡು ಮೇಜಿನ ಸಭೆ ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.
ಈ ಸಭೆಯ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ರವರು, ಕರ್ನಾಟಕ ಪ್ರಾಂತ್ಯ ರೈತ ಸಂಘ (ಕೆಪಿಆರ್‌ಎಸ್) ರಾಜ್ಯಾಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ವಿ.ನಾಗರಾಜ್, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ, ಕೃಷಿ ಕೂಲಿಕಾರರ ಸಂಘಟನೆ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಮುಂತಾದವರು ಭಾಗವಹಿಸುತ್ತಿದ್ದಾರೆ.
ನೈಸ್ ಸಂತ್ರಸ್ಥೆ ರೈತರು, ಎಲ್ಲಾ ಕಾಳಜಿಯುಳ್ಳ ನಾಗರಿಕರು, ಜನ ಸಂಘಟನೆಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಬೇಕು ಎಂದು ನೈಸ್ ಸಂತ್ರಸ್ಥ ರೈತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಕರ್ನಾಟಕ ರಾಜ್ಯ ಸಮಿತಿ ಮನವಿ ಮಾಡಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.ಭ್ರಷ್ಟಾಚಾರ
ಪತ್ರಿಕಾಗೋಷ್ಠಿಯಲ್ಲಿ ನೈಸ್ ಸಂತ್ರಸ್ಥ ರೈತರ ಹೋರಾಟ ರಾಜ್ಯ ಸಮಿತಿ ಅಧ್ಯಕ್ಷರಾದ ಎನ್.ವೆಂಕಟಚಲಯ್ಯ, ಪ್ರಧಾನ ಕಾರ್ಯದರ್ಶಿ ಗಾಯಿತ್ರಿ ಜೆ, ಜಂಟಿ ಕಾರ್ಯದರ್ಶಿ ಪಟ್ಟರಾಜು, ಜಂಟಿ ಕಾರ್ಯದರ್ಶಿ ಕೆಂಪೇಗೌಡ,ರಾಮನಗರ ಅಧ್ಯಕ್ಷರಾದ ನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರು, ಖಂಜಾಜಿ ದಿನೇಶ್ ಆರಾಧ್ಯ ಇದ್ದರು.
ವಿಡಿಯೋ ನೋಡಿ:2ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ನೌಕರರ ಪ್ರತಿಭಟನೆ : ಪ್ರತಿಭಟನೆಯ ಜಾಗದಲ್ಲಿಯೇ ಗಣರಾಜ್ಯೋತ್ಸವ ಆಚರಣೆಗೆ ತೀರ್ಮಾನ