ಹಾಸನ: ಶ್ರವಣಬೆಳಗೊಳದ ಹಿರಿಯ ಪತ್ರಕರ್ತ ಎಸ್.ಎನ್.ಅಶೋಕ್‌ಕುಮಾರ್ ಅನಾರೋಗ್ಯದಿಂದ ಬಳಲುತಿದ್ದರು. ನಗರದ ಕೆ.ಆರ್.ಪುರಂನಲ್ಲಿರುವ ರಾಜೀವ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 8.25 ರಲ್ಲಿ ನಿಧನರಾಗಿದ್ದಾರೆ.
ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅವರು ಪತ್ನಿ, ಪುತ್ರರಾದ ರಾಜೀವ್ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಎಸ್.ಎ.ನಿತಿನ್, ಸಚಿನ್ ರನ್ನು ಅಗಲಿದ್ದಾರೆ.
ಇದನ್ನೂ ಓದಿ: ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ : ಬಿಜೆಪಿಗೆ ಆರಂಭಿಕ ಮುನ್ನಡೆ
ಶ್ರವಣಬೆಳಗೊಳ ಜೈನಮಠದಿಂದ ಪ್ರಕಟವಾಗುತ್ತಿರುವ ಗೊಮ್ಮಟವಾಣಿ ಪತ್ರಿಕೆಯ ಸಂಪಾದಕರಾಗಿ ಅವರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಈಚೆಗೆ ಅವರು ನಿವೃತ್ತರಾಗಿದ್ದರು.
ಮಧ್ಯಾಹ್ನ ಶ್ರವಣಬೆಳಗೊಳದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಎಸ್.ಎನ್.ಅಶೋಕ್‌ಕುಮಾರ್ ಅವರ ನಿಧನಕ್ಕೆ ಜಿಲ್ಲಾ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.
ಇದನ್ನೂ ನೋಡಿ: ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿJanashakthi Media