ಸಿಪಿಎಂ ಹಿರಿಯ‌ ಮುಖಂಡ ನಿತ್ಯಾನಂದಸ್ವಾಮಿ ನಿಧನ; ಮಾ. 3ರಂದು ಅಂತಿಮ ಗೌರವ ಸಲ್ಲಿಕೆ

ಬೆಂಗಳೂರು: ಸಿಪಿಐ(ಎಂ) ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಮಾಜಿ ಕಾರ್ಯದರ್ಶಿ ‌ಮಂಡಳಿ ಸದಸ್ಯರೂ ಕೃಷಿಕೂಲಿಕಾರ ಸಂಘದ ಮಾಜಿ ರಾಜ್ಯ ಅಧ್ಯಕ್ಷರೂ ಆಗಿದ್ದ ಕಾಮ್ರೇಡ್ ನಿತ್ಯಾನಂದ ಸ್ವಾಮಿ (78) ಅವರು ಮಾರ್ಚ್‌ 2ರ ಬೆಳಿಗ್ಗೆ ಬೆಂಗಳೂರಿನ ತೆರೆಸಾ ಆಸ್ಪತ್ರೆಯಲ್ಲಿ ದೀರ್ಘಕಾಲೀನ ಅನಾರೋಗ್ಯದ ಬಳಿಕ ನಿಧನರಾದರೆಂದು ತಿಳಿಸಲು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್ ವಾದಿ) ದ ರಾಜ್ಯ ಸಮಿತಿಯು ವಿಷಾದ ವ್ಯಕ್ತಪಡಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್ ಹೇಳಿದರು. ಮುಖಂಡ

ಮಾರ್ಚ 3 2026 ರಂದು ಬೆಳಿಗ್ಹೆ 10 ರಿಂದ ಮಧ್ಯಾನ್ಹ 2 ಗಂಟೆವರೆಗೆ ಸಾರ್ವಜನಿಕ ಹಾಗೂ ಪಕ್ಷದಿಂದ ಅಂತಿಮ ಗೌರವವನ್ನು ಬೆಂಗಳೂರಿನಲ್ಲಿರುವ ಪಕ್ಷದ ರಾಜ್ಯ ಸಮಿತಿ ಕಚೇರಿ ಮಹಾಲಕ್ಷ್ಮೀ‌ಲೇ ಔಟ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುಖಂಡ

ಸಂಕ್ಷಿಪ್ತ ಪರಿಚಯ; 

ಉಡುಪಿಯ ಕಲ್ಯಾಣಪುರದಲ್ಲಿ ಓರ್ವ ಕಟ್ಟಾ‌ ಕ್ರಿಶ್ಚಿಯನ್ ಕುಟುಂಬದಲ್ಲಿ ಆಗಸ್ಟ್ 25, 1949 ರಂದು ಜನಿಸಿದ ಅವರು ಆ‌ ಕ್ರಿಶ್ಚಿಯನ್ ಪಂಥದ ಅನುಸಾರವಾಗಿಯೇ ಆರಂಭಿಕ ಮತ್ತು ಉನ್ನತ ಶಿಕ್ಷಣ ಪಡೆದು  ಅದರ ಧರ್ಮಪ್ರಚಾರಕ್ಕಾಗಿ ಹಿಂದೂ ಕ್ರಿಶ್ಚಿಯನ್ ಪಂಥದ ಸ್ವಾಮಿಯಾಗಿ ನೇಮಕಗೊಂಡು ಕರ್ನಾಟಕದ ಬೆಳಗಾವಿ ಜಿಲ್ಲೆಯ ಸೌದತ್ತಿಗೆ ಕಳಿಸ್ಪಟ್ಟಿದ್ದರು. ಮುಖಂಡ

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಕೆ; AI ಜ್ಞಾನ ಪಾಠ

1980 ರ ಕಾಲಘಟ್ಟದಲ್ಲಿ ಸರ್ಕಾರದ ತೆರಿಗೆ ಹೇರಿಕೆ ವಿರುದ್ದ ಮಲಪ್ರಭಾ ಬಳಕೆದಾರ ರೈತರು ನಡೆಸಿದ ಐತಿಹಾಸಿಕ ನರಗುಂದ ನವಲಗುಂದದ ರೈತ ಚಳವಳಿ ಪ್ರಭಾವಕ್ಕೆ ಒಳಗಾದ ಅವರು ಅಂತಿಮವಾಗಿ ತನ್ನ ಧರ್ಮಪ್ರಚಾರಕ‌ ಹುದ್ದೆಯನ್ನು ತೊರೆದು ರೈತ ಕಾರ್ಮಿಕ ಚಳವಳಿಗೆ ಧುಮುಕಿದರು.

ಸೌದತ್ತಿಯಲ್ಲಿ ತಮ್ಮ ಉಪ ಜೀವನ‌‌ ನಿರ್ವಹಣೆಗಾಗಿ ಆರಂಭಿಸಿದ್ದ “ಜ್ಞಾನಕಿರಣ” ಟ್ಯೂಷನ್‌ ಕೇಂದ್ರವೂ  ಆ ಪ್ರದೇಶದ ವಿದ್ಯಾರ್ಥಿ, ರೈತ- ಕಾರ್ಮಿಕ ಚಳವಳಿಯ ಕೇಂದ್ರವಾಗಿಯೂ ಕೆಲಸ ಮಾಡಿತು. ಅದರ ಮೂಲಕ ಹೊರಹೊಮ್ಮಿದ ನೂರಾರು ವಿದ್ಯಾರ್ಥಿಗಳನ್ನು ಪ್ರಗತಿಪರ ಚಳವಳಿಗೆ ಆಕರ್ಷಿಸುವಲ್ಲಿ ಕೆಲಸ‌ಮಾಡಿತ್ತು.

ಕಾಮ್ರೇಡ್ ನಿತ್ಯಾನಂದಸ್ವಾಮಿ ಅವರಿಂದ ಉಚಿತ ಶಿಕ್ಷಣ ಪಡೆದ ಮತ್ತು ಶಿಷ್ಯರಾಗಿದ್ದ ನೂರಾರು ಜನರು ಇಂದೂ‌ ಕೂಡ ರಾಜ್ಯ ಹಾಗೂ ದೇಶದ ಹಲವಡೆ ಆರೋಗ್ಯ, ವಿಶ್ವವಿದ್ಯಾಲಯ, ಶಿಕ್ಷಣ-ಕಾನೂನು, ಮುಂತಾದ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಮತ್ತು ಈಗಲೂ ಇದ್ದು ಸೇವೆ ಸಲ್ಲಿಸುತ್ತಿದ್ದಾರೆ. ಮುಖಂಡ

ಭಾರತ ಕಮ್ಯೂನಿಸ್ಟ್‌ ಪಕ್ಷ(ಮಾರ್ಕ್ಸ್ ವಾದಿ) ಪಕ್ಷದ ಪೂರ್ಣವಧಿ ಕಾರ್ಯಕರ್ತರಾದ ಅವರು ಅವಿಭಜಿತ ಧಾರವಾಡ ಜಿಲ್ಲಾ ಪಕ್ಷದ ಜಿಲ್ಲಾ ಕಾರ್ಯದರ್ಶಿ ಯಾಗಿ ಹಲವು ದಶಕಗಳ ಕಾಲ ಹುಬ್ಬಳ್ಳಿ, ಹರಿಹರ, ಹಾನಗಲ್ ಕೇಂದ್ರವಾಗಿಸಿಕೊಂಡು ಕೆಲಸ ಮಾಡಿದರು. ಮುಖಂಡ

ಶಿಕ್ಷಣದಿಂದ, ಸಮಾಜದಿಂದ ವಂಚಿತರಾದ ಹತ್ತಾರು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ವಿದ್ಯಾರ್ಥಿ ಚಳವಳಿ ಸಕ್ರಿಯ ಕಾರ್ಯಕರ್ತರನ್ನಾಗಿ ಬೆಳೆಸುವಲ್ಲಿ ಮಾತ್ರವಲ್ಲ
ಹಲವು ಯುವಜನರಿಗೆ ಸಮಸಮಾಜದ ಕಟ್ಟುವ ಕನಸಿನೊಂದಿಗೆ ಅಂತರ್ಜಾತಿ‌ ಮದುವೆಗಳನ್ನು ಮಾಡಿಸಿ ಅವರ ಬದುಕಿಗೆ ಆಸರೆಯಾಗಿ ನಿಲ್ಲುವಲ್ಲಿ,
ಅನಿಷ್ಟ ದೇವದಾಸಿ ಪದ್ಧತಿ ವಿರುದ್ಧದ ಚಳುವಳಿಯಲ್ಲೂ ಅವರು ಅನುಕರಣೀಯ ಪಾತ್ರವಹಿಸಿದ್ದರು. ಸಕ್ರಿಯವಾಗಿದ್ದರು.

ಸಿಐಟಿಯು ರಾಜ್ಯ‌ಮುಖಂಡರಾಗಿ ರಾಜ್ಯದಲ್ಲಿ ನೇಕಾರರೂ ಸೇರಿದಂತೆ ಇತರೆ ಕಾರ್ಮಿಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ಕರ್ನಾಟಕ ರಾಜ್ಯ ನೇಕಾರರ ಸಮನ್ವಯ ಸಮಿತಿ ಅಧ್ಯಕ್ಷರಾಗಿ ನೇಕಾರರ ಬದುಕನ್ನು ಉತ್ತಮಪಡಿಸಲು ಹಲವು ಹೋರಾಟಗಳನ್ನು ಮುನ್ನಡೆಸಿದ್ದರು.

ಇದಲ್ಲದೆ ಬೀಡಿ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ಘನತೆಯ ಬದುಕಿಗಾಗಿ ಶ್ರಮಿಸಿದ್ದರು. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೃಷಿಕೂಲಿಕಾರರನ್ನು ಸಂಘಟಿಸಿ ಭೂಮಿಯ ಹಕ್ಕಿಗಾಗಿ ಹಲವು ವರ್ಷಗಳ ಕಾಲ ಸಂಘರ್ಷತ್ಮಾಕ ಹೋರಾಟ ನಡೆಸಿದ್ದರು ಮತ್ತು ಆ‌ ಕಾರಣದಿಂದ ನೂರಾರು ಬಡವರೊಂದಿಗೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಒಂದು ತಿಂಗಳ ಸೆರೆವಾಸ ಅನುಭವಿಸಿದ್ದರು.

ಕೃಷಿಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷರಾಗಿ ಗಂಗಾವತಿ ಸೇರಿ ರಾಜ್ಯದ ಹಲವಡೆ ಕೂಲಿಗಾಗಿ,ಉದ್ಯೋಗಖಾತ್ರಿ ಯೋಜನೆ ಜಾರಿಗಾಗಿ ಹೋರಾಟದ ನೇತೃತ್ವ ವಹಿಸಿದ್ದರು ಇದೇ ಅವಧಿಯಲ್ಲಿ ಗಂಗಾವತಿಯ “ಮರಕುಂಬಿ” ಗ್ರಾಮದ ದಲಿತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ದ ನಿರಂತರವಾದ ಹೋರಾಟ‌ನಡೆಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಭಾರತ ಕಮ್ಯೂನಿಸ್ಟ್‌ ಪಕ್ಷ(ಮಾರ್ಕ್ಸ್ ವಾದಿ) ಪಕ್ಷದ ಅತ್ಯುತ್ತಮ ಕಾರ್ಯಕರ್ತರಾಗಿ, ಮಾರ್ಕ್ಸ್‌ವಾದದಲ್ಲಿ ಅತ್ಯಂತ ದೃಢತೆ‌ ಮತ್ತು ಬದ್ದತೆ ಹಾಗೂ ಅಚಲವಾದ‌ ನಂಬಿಕೆಯೊಂದಿಗೆ ಸುಮಾರು ನಾಲ್ಕು ದಶಕಗಳಿಂದ ಪಕ್ಷ ಮತ್ತು ಜನ‌ಚಳವಳಿಯನ್ನೇ ತಮ್ಮ ಕುಟುಂಬವೆಂದು‌ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ ಸರಳ ಜೀವನ ನಡೆಸಿದ ಅವರು ಓರ್ವ ಅತ್ಯುತ್ತಮ ಮಾರ್ಕ್ಸ್ ವಾದಿ ಶಿಕ್ಷಣತಜ್ಞರಾಗಿದ್ದರು.

ಪಕ್ಷದ ಶಿಕ್ಷಣ ಉಪ‌ಸಮಿತಿ ಸಂಚಾಲಕರಾಗಿಯೂ ಕೆಲಸ‌ಮಾಡಿದ್ದರು. ಜನಶಕ್ತಿ ವಾರ ಪತ್ರಿಕೆಯ ಸಂಪಾದಕರಾಗಿಯೂ ಅವರು ಕೆಲಸ ಮಾಡಿದ್ದರು. ನಿತ್ಯಾನಂದ ಸ್ವಾಮಿ ಅವರ ಆದರ್ಶ ಮತ್ತು ಬದ್ದತೆಯ ಬದುಕು ನಮ್ಮ‌ಚಳವಳಿಗೊಂದು‌ ಮಾದರಿಯಾಗಿದೆ. ಅವರ‌ ನಿಧನ ರಾಜ್ಯದ ಕಮ್ಯೂನಿಸ್ಟ್‌ ಚಳವಳಿಗೆ ತುಂಬಲಾರದ ನಷ್ಟ ಉಂಟು‌ಮಾಡಿದೆ ಎಂದು ಪ್ರಕಾಶ್‌ ತಿಳಿಸಿದ್ದಾರೆ.

ಇದನ್ನೂ ನೋಡಿ: ಪುಸ್ತಕ ಹೆಸರು ನೋಡಿ ಸಂವಾದಕ್ಕೆ ಬರಬೇಡಿ, ಓದಿ ಬನ್ನಿ – ಎಂ.ಜಿ. ಹೆಗಡೆ Janashakthi Media

Donate Janashakthi Media

Leave a Reply

Your email address will not be published. Required fields are marked *