ಉತ್ತರ ಪ್ರದೇಶ| ಅಮಾನತುಗೊಂಡ ಇನ್​ಸ್ಪೆಕ್ಟರ್​ SSP ಕಚೇರಿ ಎದುರು ಟೀ ಮಾರಾಟ

ಉತ್ತರ ಪ್ರದೇಶ: SSP ಕಚೇರಿ ಎದುರು ಟೀ- ಮಾರುವ ಮೂಲಕ ಅಮಾನತುಗೊಂಡ ಇನ್ ಸ್ಪೆಕ್ಟರ್​ ಒಬ್ಬರು ತನಗಾದ ಅನ್ಯಾಯದ ವಿರುದ್ಧ ವಿಶೇಷ ಪ್ರತಿಭಟನೆ ಮಾಡಿದ್ದಾರೆ. ಇದೀಗ ಈ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ​​ ವೈರಲ್​ ಆಗಿದೆ. ಉತ್ತರ ಪ್ರದೇಶ

ಇಲ್ಲಿನ ಝಾನ್ಸಿ ಜಿಲ್ಲೆಯ ಠಾಣೆಯೊಂದರಲ್ಲಿ ಇನ್​ ಸ್ಪೆಕ್ಟರ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೋಹಿತ್​ ಯಾದವ್​ ಎನ್ನುವ ಪೊಲೀಸ್ ತಾನಗಾದ ಅನ್ಯಾಯ ಹೇಳಿಕೊಳ್ಳುವ ಸಲುವಾಗಿ ಎಸ್​ಎಸ್​ಪಿ ಕಚೇರಿ ಎದುರು ಟಿ- ಶಾಪ್​ ತೆರೆದು ಟೀ ಮಾರಾಟ ಮಾಡಿದ್ದಾನೆ.​ಇತ ಟೀ ಶಾಪ್​ ತೆರೆದಿರುವುದು ವಿಶೇಷವೇನಲ್ಲ.

ಅದ್ರೆ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಉತ್ತರ ಪ್ರದೇಶ

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ: ಅನಧಿಕೃತವಾಗಿ ಸಾಲ ಕೊಟ್ಟರೆ ಮನ್ನಾ, 10 ವರ್ಷ ಶಿಕ್ಷೆ

ಇತನ ವಿರುದ್ಧದ ಪ್ರಕರಣ ಏನು?

ಇನ್​ ಸ್ಪೆಕ್ಟರ್​ ಮೋಹಿತ್​ ಯಾದವ್​ ಜ.15ರಂದು ರಜೆ ಕೇಳಲು ಆರ್​ಐ(ಕೌಂಟರ್​ ಇನ್​ಸ್ಪೆಕ್ಟರ್​) ಬಳಿ ತೆರಳಿದಾಗ ರಜೆ ಬಗ್ಗೆ ಇಬ್ಬರ ನಡುವೆ ಜಗಳವಾಗಿದೆ. ವಿವಾದದಲ್ಲಿ ಆರ್​ಐ ಇನ್​ ಸ್ಪೆಕ್ಟರ್​ ಮೋಹಿತ್​ ಯಾದವ್​ ಅವರ ಜತೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಖಾಸಗಿ ಅಂಗಕ್ಕೆ ಒದ್ದು ರಜೆ ನೀಡಲ್ಲ ಎಂದು ಕಳುಹಿಸಿದ್ದಾರೆ.

ಈ ವಿವಾದದಲ್ಲಿ ಇನ್ ಸ್ಪೆಕ್ಟರ್​ ಮೋಹಿತ್​ ಅಮಾನತುಗೊಂಡಿದ್ದಾರೆ. ಹೀಗಾಗಿ, ಮೋಹಿತ್​ ಈ ವಿವಾದಲ್ಲಿ ನನ್ನ ತಪ್ಪಿಲ್ಲ ಎಂದು ಹೇಳಿಕೊಂಡಿದ್ದರು. ಆದರೂ ಮೋಹಿತ್​ನನ್ನು ಅಮಾನತಿನಲ್ಲಿಡಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ, ನನ್ನ ತಪ್ಪಿಲ್ಲ ಎಂದು ಮತ್ತೊಮ್ಮೆ ಹೇಳುವ ಉದ್ದೇಶದಿಂದ ಎಸ್​ಎಸ್​ಪಿ ಕಚೇರಿ ಎದುರು ಟೀ ಮಾರಾಟ ಮಾಡಿ ಪ್ರತಿಭಟನೆ ಮಾಡಿದ್ದಾನೆ.

ನನಗೆ ಸಂಬಳ ಬೇಡ, ಟೀ ಮಾರಿ ಕುಟುಂಬ ಸಾಕುವೆ

ನನಗೆ ಸಂಬಳ ಬೇಡ ಎಂದು ಡಿಐಜಿ ಕಚೇರಿಗೆ ಪತ್ರ ಬರೆದಿದ್ದೇನೆ. ನನ್ನ ಕುಟುಂಬವನ್ನು ಪೋಷಿಸಲು ಉದ್ದೇಶದಿಂದ ಟಿ-ಶಾಪ್​ ತೆರೆದಿದ್ದೇನೆ. ಅಲ್ಲದೆ, ನನಗೆ ಆದ ಅನ್ಯಾಯದ ಬಗ್ಗೆ ತನಿಖಾಧಿಕಾರಿಗೆ ಪತ್ರ ಬರೆದಿದ್ದೇನೆ. ಇದಕ್ಕೆ ಯಾವುದೇ ಸ್ಪಂದನೆ ಇಲ್ಲ. ನನ್ನ ಮತ್ತು ಪತ್ನಿಯ ಪೋನ್​ ಕದ್ದಾಲಿಕೆ ಮಾಡಲಾಗಿದೆ. ನನ್ನ ಮಕ್ಕಳು ಶಾಲೆಗೆ ಹೊಗುತ್ತಾರೆ. ಅಂತಹ ಸಂದರ್ಭದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂದು ಅಮಾನತುಗೊಂಡ ಇನ್​ ಸ್ಪೆಕ್ಟರ್​ ಮೋಹಿತ್​ ಯಾದವ್​ ಆರೋಪಿಸಿದ್ದಾರೆ.

ಇದನ್ನೂ ನೋಡಿ: ನಾನು ಹೀಗೆ ಇರೋದು, ಇದನ್ನೆ ತಿನ್ನೋದು ಎಂದು ಗಟ್ಟಿಯಾಗಿ ಹೇಳಬೇಕಿದೆ – ಬಂಜಗೆರೆ ಜಯಪ್ರಕಾಶ Janashakthi Media

Donate Janashakthi Media

Leave a Reply

Your email address will not be published. Required fields are marked *