ಪೇಜಾವರ ಮಠದ ಸ್ವಾಮೀಜಿ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಬೇಕು: ಎಂ.ಆರ್.ಭೇರಿ ಆಗ್ರಹ

ರಾಯಚೂರು: ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ತಮ್ಮನ್ನು ಗೌರವಿಸದ ಸಂವಿಧಾನ ಬೇಕು ಎಂದು ಹೇಳುವ ಮೂಲಕ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ್ದು ಕೂಡಲೇ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಉಸ್ತುವಾರಿ ಎಂ.ಆರ್.ಭೇರಿ ಆಗ್ರಹಿಸಿದ್ದಾರೆ.

ಹಿಂದುತ್ವ ಸಂಘಟನೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೇಜಾವರ ಶ್ರೀಗಳು ತಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂದು ಹೇಳಿದ್ದಾರೆ. ಸಂವಿಧಾನದಲ್ಲಿರುವ ಲೋಪವಾದರೂ ಏನು ಎಂದು ಹೇಳಬೇಕಿತ್ತು ಎಂದರು.

ಶ್ರೇಣಿಕೃತ ಸಮಾಜವನ್ನು ಆರಾಧಿಸುತ್ತಿರುವ ಪೇಜಾವರ ಶ್ರೀಗಳು ಸಮ ಸಮಾಜದ ಸಂವಿಧಾನವನ್ನು ಒಪ್ಪುತ್ತಿಲ್ಲ ಎಂಬದು ಸ್ಪಷ್ಟ, ತಮ್ಮನ್ನು ಗೌರವಿಸುವ ಸಂವಿಧಾನವೆ ಬೇಕಿದರೆ ಪ್ರತ್ಯೇಕ ದೇಶವನ್ನು ಕಟ್ಟಿಕೊಂಡು ರೂಪಿಸಲಿ, ಹೊರತು ಸಂವಿಧಾನ ಅಗೌರವಿಸುವ ಹೇಳಿಕ ನೀಡಿ ಪ್ರಚೋದಿಸುವ ಮಾತುಗಳನ್ನು ಆಡಬಾರದು ಎಂದರು.

ಇದನ್ನೂ ಓದಿ: ಭಾರತೀಯ ಸಂಸ್ಕೃತಿ ಉತ್ಸವ ಉದ್ಘಾಟನೆಯಲ್ಲಿ ಭಾಗವಹಿಸುವುದಿಲ್ಲ: ಸಿದ್ದರಾಮಯ್ಯ

ರಾಷ್ಟ್ರಧ್ವಜವನ್ನು ಗೌರವಿಸದೆ ಇರುವ ಆರೆಸ್ಸೆಸ್‌ ಸಂಘಟನೆ ಇಂದಿಗೂ ಸಂವಿಧಾನವನ್ನು ಗೌರವಿಸುತ್ತಿಲ್ಲ. ರಾಷ್ಟ್ರಧ್ವಜ, ರಾಷ್ಟ್ರಲಾಂಛನ, ರಾಷ್ಟ್ರಗೀತೆಯನ್ನು ಗೌರವಿಸುವುದು ಸಂವಿಧಾನ ಒಪ್ಪಿರುವ ಎಲ್ಲರ ಕರ್ತವ್ಯ. ಆದ ಕಾರಣ ಸಂವಿಧಾನ ವಿರೋಧಿ ಹೇಳಿಕೆಯನ್ನು ರಾಷ್ಟ್ರದ್ರೋಹಿ ಎಂದು ಪರಿಗಣಿಸಬೇಕೆಂದು ಆಗ್ರಹಿಸಿದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಬಸವರಾಜ ಭಂಡಾರಿ ಮಾತನಾಡಿ, ಸಂವಿಧಾನ ವಿರೋಧಿಸುವುದು ಮನುವಾದಿಗಳ ಮನಸ್ಥಿತಿಯಲ್ಲಿರುವುದರಿಂದ ನಡೆಯುತ್ತಿದೆ. ಸಂವಿಧಾನದ ಮೇಲೆ ನಂಬಿಕೆ ಇಲ್ಲದೇ ಇದ್ದರೆ ನಿತ್ಯಾನಂದ ಸ್ವಾಮಿಯಂತೆ ಪ್ರತ್ಯೇಕ ದೇಶ ಕಟ್ಟಿಕೊಳ್ಳಬಹುದು. ಸಂವಿಧಾನಕ್ಕೆ ಅಗೌರವಿಸುವುದು ದೇಶದ್ರೋಹ ಕೆಲಸವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಜಿ.ಭೀಮ, ರಾಜ್ಯ ಕಾರ್ಯದರ್ಶಿ ಹನುಮಂತಪ್ಪ ಅತ್ತನೂರು, ಬುಡ್ಡಪ್ಪ,ಕ, ಸೈಯದ್ ಅಬ್ದುಲ್ ಉಪಸ್ಥಿತರಿದ್ದರು.

ಇದನ್ನೂ ನೋಡಿ: ನಿರಂಜನ 100 | ದೇಶ -ವಿದೇಶದಲ್ಲಿ ಹೆಸರಾದ ನಿರಂಜನ – ವಿಶ್ಲೇಷಣೆ – ಜಿ.ಎನ್.‌ ನಾಗರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *