SCSP/TSP ಹಣವನ್ನು ಗ್ಯಾರಂಟಿಗೆ ಬಳಸಬೇಡಿ – ದಲಿತ ಹಕ್ಕುಗಳ ಸಮಿತಿ ಆಗ್ರಹ

ಬೆಂಗಳೂರು: ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯ (ಟಿಎಸ್‌ಪಿ) ಹಣವನ್ನು ‘ಗ್ಯಾರಂಟಿ’ ಯೋಜನೆಗಳಿಗೆ ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ದಲಿತ ಹಕ್ಕುಗಳ ಸಮಿತಿ ಒತ್ತಾಯಿಸಿದೆ.

ಡಿಎಚ್‌ಎಸ್‌ ರಾಜ್ಯ ಉಪಾಧ್ಯಕ್ಷರಾದ ಬಿ. ರಾಜಶೇಖರಮೂರ್ತಿ ಪತ್ರಿಕಾ ಹೇಳಿಕೆ ನೀಡಿದ್ದು, ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯ (Scsp/tsp) ರಾಜ್ಯ ಅಭಿವೃದ್ಧಿ ಪರಿಷತ್ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡ ದಲಿತರಿಗೆ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಜುಲೈ 5, 2024 ರಂದು ಪರಿಷತ್ ಸಭೆ ನಡೆಸಿ, ಪರಿಶಿಷ್ಟರ ಅಭಿವೃದ್ಧಿಗಾಗಿ 39,121 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಿದ್ದೇವೆಂದು ಹೇಳಿರುವುದು ಮುಖ್ಯಮಂತ್ರಿಯವರ ಟೊಳ್ಳು ಘೋಷಣೆಯಾಗಿದೆ. ಇದೇ ಸಭೆಯಲ್ಲಿ scsp/tsp ಉಪಯೋಜನೆಯ ಹಣದಲ್ಲಿ 14,282.38 ಕೋಟಿಯನ್ನು 5 ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತೇವೆ, ದಲಿತರೂ ಕೂಡ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ನಿಜ, ಆದರೆ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಬಡ ದಲಿತರ ಹಣವೇ ಬೇಕಿತ್ತೇ? ‘ಸಾಮಾಜಿಕ ನ್ಯಾಯ’ದ ಪರವಾಗಿದ್ದೇನೆಂದು ಹೇಳುವ ನೀವೂ ಇಂತ ಹೀನಾಯ ಕೆಲಸಕ್ಕೆ ಇಳಿಯಬಾರದಾಗಿತ್ತು. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ವಾಪಸ್ಸು ಪಡೆಯುವುದು ದಲಿತರಿಗೆ ಮಾಡುವ ವಂಚನೆಯಾಗಿದೆ. ಪರಿಷತ್ ಸಭೆಯಲ್ಲಿ 14,282.38 ಕೋಟಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಲು ಹೊರಟಿರುವುದು ದಲಿತರಿಗೆ ವಂಚಿಸುವುದೇ ಆಗಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ

ಇದನ್ನೂ ಓದಿ: ನಿರಂಜನ್ ನೆನಪು : ಇಂಡಿಯನ್ ಪೀಪಲ್ ಥಿಯೇಟರ್ ನ ಉದ್ದೇಶವೇನು?

ಕಳೆದ 10 ವರ್ಷಗಳಲ್ಲಿ, scsp/tsp ಯೋಜನೆಗಳಿಗೆ ಬಜೆಟ್‌ಗಳಲ್ಲಿ ಘೋಷಿಸಿರುವುದು ಎರಡುವರೆ ಲಕ್ಷ ಕೋಟಿಗಿಂತ ಹೆಚ್ಚು. ಇಷ್ಟು ದೊಡ್ಡ ಪ್ರಮಾಣದ ಹಣ ಅರ್ಹ ಬಡ ದಲಿತರಿಗೆ ತಲುಪದೆ ದುರಪಯೋಗವಾಗಿರುವುದೇ ಹೆಚ್ಚಾಗಿದೆ. ದಲಿತರ ಅಭ್ಯದಯಕ್ಕೆ ಬದಲಾಗಿ ಇತರೆ ಸಾಮಾನ್ಯ ಯೋಜನೆ-ಕಾಮಗಾರಿಗಳಿಗೆ ಬಳಸಲಾಗಿದೆ.  ಹೀಗಾಗಿಯೇ ಕಳೆದ ಬಜೆಟ್‌ನಲ್ಲಿ 7(ಡಿ) ಕಾಲಂನ್ನು  ತಿದ್ದುಪಡಿ ಮಾಡುತ್ತೇವೆಂದು ಘೋಷಿಸಿ, ತಾವೇ ತಿದ್ದುಪಡಿ  ಮಾಡಿದ್ದು. ಈಗ ತಾವೇ ರೂಪಿಸಿದ್ದ ನೀತಿಯನ್ನು ಉಲ್ಲಂಘಸುತ್ತಿರುವುದು ಎಷ್ಟು ಸರಿ? ರಾಜ್ಯದಲ್ಲಿರುವ ಶೇ.26 ರಷ್ಟಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಮಾತ್ರ ಈ ಮೀಸಲು ಹಣವನ್ನು ಬಳಕೆ ಮಾಡಬೇಕೆಂಬುದು ಕಾಯ್ದೆಯ ಉದ್ದೇಶವಾಗಿದೆ. ಆದರೆ ರಾಜ್ಯ ಸರ್ಕಾರ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಸೇರಿದಂತೆ, ಮೀಸಲು ಕ್ಷೇತ್ರಗಳನ್ನು ಪ್ರತಿನಿಧಿಸುವ ಮಂತ್ರಿಗಳು, ಶಾಸಕರು ಆಳುವ ಸರ್ಕಾರಕ್ಕೆ ಹೆದರಿ, ಇಂತಹ ತರ‍್ಮಾನಗಳಿಗೆ ಭಾಗಿಗಳಾಗಿ ಮೌನವಹಿಸಿರುವುದು ವಿಷಾದನೀಯವಾಗಿದೆ.  ದಲಿತರ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳು scsp/tsp ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವುದನ್ನು ಈ ಕೂಡಲೇ ತಡೆಯಿಡಿಯುವುದು. ಈ ಉಪಯೋಜನೆಯ ಭಾಗವಾಗಿ ಮೀಸಲಿಟ್ಟ ಹಣವನ್ನು ದಲಿತರ ಸಬಲೀಕರಣಕ್ಕೆ ಮಾತ್ರವೇ ಬಳಸುವಂತಾಗಬೇಕು ಎಂದು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ

ರಾಜ್ಯ ಸರ್ಕಾರ ಈ ಕೂಡಲೇ scsp/tsp ಉಪಯೋಜನೆ ಅನುದಾನ-ಅನುಷ್ಠಾನದ ಹಿನ್ನಲೆಯಲ್ಲಿ ದಲಿತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಎದುರಾಗಿರುವ ಸಮಸ್ಯೆ – ಸವಾಲುಗಳ ಕುರಿತು ಒಂದು ವಾರಗಳ ಕಾಲ ‘ವಿಶೇಷ ವಿಧಾನಸಭಾ ಅಧಿವೇಶನ’ವನ್ನು ಕರಿಯಬೇಕು. ಅದೇ ರೀತಿಯಲ್ಲಿ ಜಿಲ್ಲಾ-ತಾಲ್ಲೂಕು-ಗ್ರಾಮ ಪಂಚಾಯಿತ್‌ಗಳು, ಬೃಹತ್ ಮಹಾನಗರ ಪಾಲಿಕೆಗಳು, ನಗರ ಪಾಲಿಕೆಗಳು,  ಪುರಸಭೆಗಳಲ್ಲೂ ಒಂದು ವಾರಗಳ ಕಾಲ ವಿಶೇಷ ಸಭೆಗಳನ್ನು ನಡೆಸಬೇಕು. ರಾಜ್ಯಮಟ್ಟದಿಂದ ಸ್ಥಳೀಯ ಗ್ರಾಮ ಪಂಚಾಯತ್ ಮಟ್ಟದವರೆಗೂ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಮಿತಿಗಳ ಸಭೆ ಕಾಲಕಾಲಕ್ಕೆ ಸೇರುವಂತಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. scsp/tsp ಯೋಜನೆಗಳನ್ನು ಪುನರ್ ರೂಪಿಸಬೇಕು ಆಯಾ ಆಯಾ ಜಿಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಆಧರಿಸಿ ಉದ್ಯೋಗ ಸೃಷ್ಠಿಸುವಂತಹ ಯೋಜನೆಗಳನ್ನು ಆರಂಭಿಸಬೇಕು.

ಕಳೆದ 10 ವರ್ಷಗಳ scsp/tsp ಅನುದಾನ ಮತ್ತು ಅನುಷ್ಠಾನದ ಬಗ್ಗೆ ತಜ್ಞರ ಸಮಿತಿ ರಚಿಸಿ ಮೌಲ್ಯಮಾಪನ ಮಾಡಬೇಕು.  scsp/tsp ಕಾಯ್ದೆ ಉಪಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ವಿಳಂಬ ಅಥವ ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಕಾಯ್ದೆಯ ನಿಯಮದಂತೆ ಕಾನೂನಾತ್ಮಕವಾಗಿ ಶಿಕ್ಷೆಗೆ ಗುರಿಪಡಿಸಬೇಕು, scsp/tsp ಉಪಯೋಜನೆಗಳ ಬಗ್ಗೆ scst ಗಳ ಮನೆಮನೆಗೂ ಜಾಗೃತಿ ಮೂಡಿಸುವಂತಾಗಬೇಕು. scsp/tsp ರಾಜ್ಯ ವಿಚಕ್ಷಣಾ (vesilence) ಆಯೋಗ ರಚಿಸಬೇಕು.

ಇನ್ನಾದರೂ ಎಲ್ಲಾ ದಲಿತ ಪರ ಸಂಘಟನೆಗಳು ಒಂದಾಗಿ, ಆಳುವ ಸರ್ಕಾರಗಳ ದಲಿತ ವಿರೋಧಿ ಧೋರಣೆಯನ್ನು ವಿರೋಧಿಸಿ scsp/tsp  ಉಪಯೋಜನೆಯ ಸಮರ್ಪಕ ಜಾರಿಗಾಗಿ ಚಳವಳಿಯನ್ನು ರೂಪಿಸಲು ಮುಂದಾಗಬೇಕು ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಅಯೋಧ್ಯೆಯಲ್ಲಿ ಬಿಜೆಪಿಯನ್ನುಸೋಲಿಸಿದಂತೆ ಗುಜರಾತ್‌ನಲ್ಲೂ ಸೋಲಿಸುತ್ತೇವೆ – ರಾಹುಲ್ ಗಾಂಧಿJanashakthi Media

Donate Janashakthi Media

Leave a Reply

Your email address will not be published. Required fields are marked *