ಕೊಪ್ಪಳ; ಜ.30 : 2019-2020 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಕಾನೂನು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ “ವಿದ್ಯಾರ್ಥಿ ವೇತನ” ಬಿಡುಗಡೆ ಮಾಡಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆ “DBHPS ಕಾನೂನು ಮಹಾವಿದ್ಯಾಲಯ ಕೊಪ್ಪಳದ ದ್ವಿತೀಯ ವರ್ಷದ ಕಾನೂನು ವಿದ್ಯಾರ್ಥಿಗಳು ಕೊಪ್ಪಳದ ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ವಿಜಯಕುಮಾರ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಇಲಾಖೆ ವಿಳಂಬ ಮಾಡಿದೆ, ಅಲ್ಲದೆ ಸದರಿ ಕಾಲೇಜ್ ನಲ್ಲಿ L.L B, ಓದುತ್ತಿರುವ ಪರಿಶಿಷ್ಟ ಜಾತಿ(SC)41 ಮತ್ತುಪರಿಶಿಷ್ಟ ಪಂಗಡ (ST) 34 ಒಟ್ಟು= 75 ದ್ವಿತೀಯ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವು ಕೆಲವು ವಿದ್ಯಾರ್ಥಿಗಳಿಗೆ 5 ಸಾವಿರ ರೂಪಾಯಿ ಮಾತ್ರ ಬಂದಿರುತ್ತದೆ, ಅಲ್ಲದೆ ಇಷ್ಟು ವರ್ಷಗಳ ಈ ಹಿಂದೆ L.L.B, ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಸರಕಾರ ನಿಯಮದ ಪ್ರಕಾರ ಕಾಲೇಜಿನಲ್ಲಿ ಇರುವು ಎಲ್ಲಾ ಶುಲ್ಕವನ್ನು ಮರು ಪಾವತಿ ಮಾಡುತ್ತಿದ್ದರು.
ಇದನ್ನೂ ಓದಿ : ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಕಡಿತ : ವ್ಯಾಪಕ ಆಕ್ರೋಶ
ಕಳೆದ ವರ್ಷ ಈ ಹಿಂದೆ L.L.B ಮುಗಿಸಿದ ವಿದ್ಯಾರ್ಥಿಗಳಿಗೆ 25000, ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಿದ್ದಿರಿ ಆದರೆ ಈಗ ನಮ್ಮಗೆ ಮಾತ್ರ ಕೆಲವು ವಿದ್ಯಾರ್ಥಿಗಳಿಗೆ 5000/ ರೂಪಾಯಿ ಹಣ್ಣ ಹಾಕಿದ್ದು ಯಾಕೆ? ನಮ್ಮಗೂ ಪ್ರತಿವರ್ಷ ಕೊಡುತ್ತಿದ್ದ 25000/ ರೂಪಾಯಿ ವಿದ್ಯಾರ್ಥಿವೇತನ ಬಿಡುಗಡೆ ಮಾಡಿ, ಹಾಗೂ ಇನ್ನೂ ಈ ಶೈಕ್ಷಣಿಕ ಅವಧಿ ಮುಗಿಯಲು ಬರುತ್ತಿದ್ದರು ಬಹುತೇಕ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ವಿದ್ಯಾರ್ಥಿವೇತನ ಬಂದಿರುವುದಿಲ್ಲ, ಕರೋನಾ ಎಫೆಕ್ಟ್ ದಿಂದ ಮನೆಯಲ್ಲಿ ಪಾಲಕರಗೆ ಕಾಲೇಜು ಶುಲ್ಕ ಕಟ್ಟಲು ತುಂಬಾ ಸಮಸ್ಯ ಆಗಿದ್ದು ನಮ್ಮ ಕಾನೂನು ಶಿಕ್ಷಣ ಅರ್ದಕ್ಕೆ ಮೊಟಕ್ಕೂ ಗೊಳಿಸುವ ಪರಿಸ್ಥಿತಿ ಬಂದಿದ್ದೆ, ಆದ್ದರಿಂದ ಪ್ರಸ್ತುತ ಮತ್ತು ಮುಂದಿನ ವರ್ಷದ ಶೈಕ್ಷಣಿಕ ಶುಲ್ಕಗಳಿಗೆ ವಿದ್ಯಾರ್ಥಿಗಳಿಗೆ ಹಣಕಾಸಿನ ಆಡಚಣೆ ಆಗುತ್ತದೆ ಆದ್ದರಿಂದ ಈ ಕೂಡಲೇ ಸಂಪೂರ್ಣವಾಗಿ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಬೇಕೆಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಅಧಿಕಾರಿಗಳಿಗೆ ಒತ್ತಿಯಿಸಿದ್ದಾರೆ.
ಇದನ್ನೂ ಓದಿ : ದಲಿತರ ಅಭಿವೃದ್ಧಿ ಹಣ ಬಳಕೆಗೆ ಸರಕಾರದ ನಿರ್ಲಕ್ಷ್ಯ
ಈ ಸಂದರ್ಭದಲ್ಲಿ ಎಸ್ಎಫ್ಐ ವಿದ್ಯಾರ್ಥಿಗಳಾದ ಬಸವರಾಜ ರಾಠೋಡ್, ಹನುಮೇಶ, ಮಂಜುನಾಥ, ಲಕ್ಷ್ಮಣ,ಬಸವರಾಜ ನಾಗರಾಳ,ಹನುಮಂತ ರಾಠೋಡ್ ಇತರರು ಇದ್ದರು.
ಈ ವಿಡಿಯೋ ನೋಡಿ