ಉತ್ತರ ಪ್ರದೇಶದ ಜೈಲಿನಲ್ಲಿ ಇರುವ ವಿಚಾರಣಾಧೀನ ಖೈದಿಗಳಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಗುಂಪಿನವರು ಶೇ.75 ಭಾಗ; ಸಂಸತ್ತಿಗೆ ಮಾಹಿತಿ ನೀಡಿದ ಕೇಂದ್ರ

ನವದೆಹಲಿ: ಬಹುಜನ ಸಮಾಜವಾದಿ ಪಕ್ಷದ ಸಂಸದ ಶ್ಯಾಮ್ ಸಿಂಗ್ ಯಾದವ್ ಸಂಸತ್ತಿನಲ್ಲಿ  ಕೆಲವು ಪ್ರಶ್ನೆಗಳನ್ನು ವಿಚಾರಣಾಧೀನ ಖೈದಿಗಳ ಕುರಿತು ಕೇಳಿದ್ದರು. ದೇಶದ ಶೇ.76 ಖೈದಿಗಳು ಈವರೆಗೂ ವಿಚಾರಣೆಯನ್ನೇ ಎದುರಿಸದಿರುವುದು (ಈ ಪ್ರಮಾಣ ಜಾಗತಿಕವಾಗಿ ಶೇ.34 ರಷ್ಟಿದೆ), ಕೇಸುಗಳ ಇತ್ಯರ್ಥಕ್ಕೆ ಆಗುತ್ತಿರುವ ವಿಳಂಬಕ್ಕೆ ಕಾರಣಗಳು ಮತ್ತು ಈ ಸಂಖ್ಯೆ ಇಳಿಸಲು ಕೈಗೊಂಡ ಕ್ರಮಗಳು, ವಿಚಾರಣಾಧೀನ ಖೈದಿಗಳು ವಿಚಾರಣೆ ಎದುರಿಸುವಂತೆ ಕೈಗೊಂಡ ಕ್ರಮಗಳು, ಮುಂತಾದ ವಿವರ ಕೇಳಿದ ಅವರು, ಲಾಕ್ ಡೌನ್ ನಂತರ ಬಂಧನಗಳ ಸಂಖ್ಯೆ ಹೆಚ್ಚಾಗಿದ್ದು, ಇದರಿಂದಾಗಿ ಜೈಲುಗಳು ದಟ್ಟನೆಗೊಂಡು ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಇದು ಕಾರಣವಾಗಿರುವುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಎಂದು ಸಹ ಇವರು ಕೇಳಿದ್ದರು.

ಈ ಪ್ರಶ್ನೆಗಳಿಗೆ ಉತ್ತರಿಸುವಾಗ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ, ಉತ್ತರ ಪ್ರದೇಶದ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳಲ್ಲಿ ಶೇ.75 ಪ್ರಮಾಣ ಎಸ್ಸಿ, ಎಸ್ಟಿ ಮತ್ತು ಒಬಿಸಿ ಯವರು , 2021 ರ ದಾಖಲೆ ಪ್ರಕಾರ ದೇಶದಾದ್ಯಂತ 1410 ಅಪರಾಧಿಗಳು ತಮ್ಮ ಜೈಲು ಶಿಕ್ಷೆ ಅವಧಿ ಪೂರೈಸಿದ್ದರೂ ದಂಡ ಪಾವತಿಸದ ಕಾರಣ ಜೈಲಿನಲ್ಲಿಯೇ ಇದ್ದಾರೆ, ಎಂಬ ಹಲವು ಆಘಾತಕಾರಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಮರಣದಂಡನೆಗೆ ಬದಲಾಗಿ ಪರ‍್ಯಾಯ ವಿಧಾನವೇನಾದರೂ ಇವೆಯೇ: ಸರ್ವೋಚ್ಚ ನ್ಯಾಯಾಲಯ

ಜೈಲುಗಳ ಸುಧಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಚಿವರು ನೀಡಿದ ಪ್ರತಿಕ್ರಿಯೆ ಹೀಗಿದೆ – ʻʻಜೈಲುಗಳು/ ಜೈಲಿನಲ್ಲಿ ಇರುವ ಖೈದಿಗಳುʼʼ ಅಂಶವು ರಾಜ್ಯ ಪಟ್ಟಿಯಲ್ಲಿ ಬರುವುದರಿಂದ ಇದು ಆಯಾ ರಾಜ್ಯ /ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿ; ಕೇಂದ್ರ ಗೃಹ ಮಂತ್ರಾಲಯವು ಇದಕ್ಕೆ ಪೂರಕವಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ; ಎಲ್ಲಾ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಕಳಿಸಲಾದ ಜೈಲು ಮಾನ್ಯುಯಲ್ 2016ರಲ್ಲಿ ʻʻಕಾನೂನು ಸಹಾಯʼʼ ಮತ್ತು ʻʻವಿಚಾರಣಾಧೀನ ಖೈದಿಗಳುʼʼ ಭಾಗಗಳಿದ್ದು, ಇದರಲ್ಲಿ ಕಾನೂನು ರಕ್ಷಣೆ, ವಕೀಲರೊಡನೆ ಸಂದರ್ಶನಗಳು, ಸರ್ಕಾರಿ ವೆಚ್ಚದಲ್ಲಿ ಕಾನೂನು ನೆರವು ಕೋರಿ ಕೋರ್ಟ್ ಗಳಿಗೆ ಅರ್ಜಿ ಸಲ್ಲಿಸುವುದು, ಇತ್ಯಾದಿ ಬಗ್ಗೆ ವಿವರವಾದ ಮಾರ್ಗಸೂಚಿಗಳಿವೆ; ಕ್ರಿಮಿನಲ್ ಪ್ರೊಸೀಜರ್ ಕೋಡ್ ನಲ್ಲಿ ವಿಧಿ 436ಎ ಸೇರ್ಪಡಿಸುವ ಮೂಲಕ ತಮ್ಮ ಜೈಲು ಶಿಕ್ಷೆಯ ಅವಧಿಯಲ್ಲಿ ಅರ್ಧ ಅವಧಿ ಕಳೆದ ವಿಚಾರಣಾಧೀನ ಖೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅವಕಾಶ ನೀಡಲಾಗಿದೆ; ಇದೇ ಕೋಡ್ ನಲ್ಲಿ ವಾದಿ ಮತ್ತು ಪ್ರತಿವಾದಿ ನಡುವೆ ವಿಚಾರಣಾ ಪೂರ್ವ ಮಾತುಕತೆ ನಡೆಸಲು ಅನುವಾಗುವಂತೆ ʻಮನವಿ ಮಾತುಕತೆʼ ಕುರಿತ ಭಾಗವನ್ನು ಪರಿಚಯಿಸಲಾಗಿದೆ; ಇಲೆಕ್ಟ್ರಾನಿಕ್ ಜೈಲು ತಂತ್ರಾಶದ ಮೂಲಕ ಖೈದಿಗಳ ವಿವರಗಳನ್ನು ವೇಗವಾಗಿ ಪಡೆಯಲು ಮತ್ತು ವಿಚಾರಣಾಧೀನಾ ಪರಿಶೀಲನಾ ಸಮಿತಿಯ ಮುಂದೆ ಬರುವ ಕೇಸುಗಳ ಮಾಹಿತಿ ಪಡೆಯಲು ಆಯಾ ರಾಜ್ಯ ಜೈಲು ಅಧಿಕಾರಿಗಳಿಗೆ ನೆರವಾಗುತ್ತದೆ; ಜೈಲುಗಳಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದ್ದು, ಜೈಲುಗಳಲ್ಲಿ ಈ ಎಲ್ಲದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ʻʻದಿ ವೈರ್ʼʼ ಮಾಧ್ಯಮದಲ್ಲಿ ಮಾರ್ಚ್ 15, 2023 ರಂದು ಪ್ರಕಟವಾದ ಈ ಲೇಖನವು ಕೇಂದ್ರ ಸರ್ಕಾರದ ಘೋಷಿತ ಕ್ರಮಗಳ ನಡುವೆಯೂ ಆತಂಕಕಾರಿಯಾಗಿಯೇ ಇರುವ ಜೈಲುಗಳ ಪರಿಸ್ಥಿತಿ, ಪ್ರಮುಖವಾಗಿ ವಿಚಾರಣಾಧೀನಾ ಖೈದಿಗಳ ದುಃಸ್ಥಿತಿ ಬಗ್ಗೆ ಬೆಳಕು ಚೆಲ್ಲುತ್ತಿದೆ. ಜೈಲುಗಳಲ್ಲಿ ದಟ್ಟಣೆ ನಿವಾರಣಾ ಕ್ರಮಗಳು ಬಹುತೇಕವಾಗಿ ಜಾರಿಯಾಗಿಲ್ಲ ಎಂಬ ವಾಸ್ತವವನ್ನು ದಾಖಲೆಗಳು ತಿಳಿಸುತ್ತಿವೆ. ದೇಶದ ಒಟ್ಟು ಜೈಲುಗಳಲ್ಲಿ ಇರುವ ಖೈದಿಗಳ ಸಂಖ್ಯೆ ಆ ಜೈಲುಗಳ ಸಾಮರ್ಥ್ಯಕ್ಕಿಂತಲೂ ಬಹು ಪ್ರಮಾಣದಲ್ಲಿ ಹೆಚ್ಚಿವೆ ಎಂದು ಕೇಂದ್ರದ ದತ್ತಂಶವೇ ಹೇಳುತ್ತಿದೆ. ಈ ವರದಿಯ ಪ್ರಕಾರ, ಉತ್ತರಪ್ರದೇಶ, ಬಿಹಾರ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅತಿ ಹೆಚ್ಚು ಖೈದಿಗಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *