ನವದೆಹಲಿ : ವಿಶೇಷ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ತನ್ನ ವಿಶೇಷ ಅಧಿಕಾರ ಬಳಸಿ ಬಡ ದಲಿತ ವಿದ್ಯಾರ್ಥಿಗೆ ಪ್ರವೇಶ ಕಲ್ಪಿಸುವಂತೆ, ಐಐಟಿ–ಬಾಂಬೆಗೆ ನಿರ್ದೇಶನ ನೀಡಿದೆ.
ದಲಿತ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕಾಗಿ ಸುಪ್ರೀಂಕೋರ್ಟ್ ತನ್ನ ವಿಶೇಷ ಅಧಿಕಾರ ಬಳಸಿದ್ದು, ಸಂವಿಧಾನದ 142 ನೇ ವಿಧಿಯ ಅಡಿ ಸ್ಪೇಷಲ್ ಪವರ್ ಬಳಸಿ ದಲಿತ ವಿದ್ಯಾರ್ಥಿಗೆ ಪ್ರವೇಶ ನೀಡುವಂತೆ ಐಐಟಿ-ಬಾಂಬೆಗೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ. ಉತ್ತರ ಪ್ರದೇಶದ ಹಳ್ಳಿಗಾಡಿನಿಂದ ಬಂದಂಥಹ ದಲಿತ ವಿದ್ಯಾರ್ಥಿಯ ಪ್ರಕರಣ ಇದಾಗಿದ್ದು, ಉನ್ನತ ವಿದ್ಯಾಭ್ಯಾಸದ ಆಕಾಂಕ್ಷೆ ಹೊಂದಿದ್ದ ವಿದ್ಯಾರ್ಥಿ, ತಾಂತ್ರಿಕ ಸಮಸ್ಯೆಗಳಿಂದ ಗಡುವಿನೊಳಗೆ ತನ್ನ ಶುಲ್ಕ ಪಾವತಿ ಮಾಡಲು ಆಗಿರಲಿಲ್ಲ. ಇಂಥ ವಿದ್ಯಾರ್ಥಿಗೆ 48 ಗಂಟೆಯೊಳಗೆ ಅಡ್ಮಿಶನ್ ಮಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಐಐಟಿ ಬಾಂಬೆಗೆ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ, ಬೇರಾವುದೇ ವಿದ್ಯಾರ್ಥಿಗಳ ಪ್ರವೇಶಾತಿಗೆ ತೊಂದರೆಯಾಗದಂತೆ ಸೀಟು ಹಂಚಿಕೆ ಮಾಡಬೇಕು ಎಂದು ನ್ಯಾಯಾಲಯ ಹೇಳಿತು. ಅಲ್ಲದೆ, ಇತರ ಯಾವುದೇ ಸೀಟು ಖಾಲಿಯಾದರೆ ಈ ಸೀಟನ್ನು ಕ್ರಮಬದ್ಧಗೊಳಿಸುವಂತೆ ಸ್ಪಷ್ಟಪಡಿಸಿತು. ತಾಂತ್ರಿಕ ದೋಷಗಳಿಂದಾಗಿ ವಿದ್ಯಾರ್ಥಿ ಸರಿಯಾದ ಸಮಯಕ್ಕೆ ಶುಲ್ಕ ಪಾವತಿಸಲು ಸಾಧ್ಯವಾಗದೇ ಇರುವುದಕ್ಕೆ ಆತ ಜವಾಬ್ದಾರನಲ್ಲ. ಅಧಿಕಾರಿಗಳು ಇಂತಹ ಅರಣ್ಯಕ ನಿರ್ಧಾರವನ್ನು ಕೈಗೊಳ್ಳುವಂತಿಲ್ಲ ಬದಲಿಗೆ ವಾಸ್ತವಾಂಶಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದೆ.
ಇದನ್ನೂ ಓದಿ : ಫೆಲೋಶಿಪ್‍ಗೆ ಒತ್ತಾಯಿಸಿ ಕನ್ನಡ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ
ವಿದ್ಯಾರ್ಥಿ ಎದುರಿಸಿದ ಸಮಸ್ಯೆ ಏನು? : ಪ್ರಿನ್ಸ್ ಜೈಬೀರ್ ಸಿಂಗ್ ಅಲಹಾಬಾದ್‌ನಲ್ಲಿ ಅಧ್ಯಯನ ಮಾಡಿ, ಐಐಟಿ-ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಈ ದಲಿತ ವಿದ್ಯಾರ್ಥಿ 25, 864 ರಾಂಕ್ ಪಡೆದುಕೊಂಡಿದ್ದರು. ಹಿಂದುಳಿದ ಜಾತಿಯ ವಿದ್ಯಾರ್ಥಿಗಳ ಲಿಸ್ಟ್ ನಲ್ಲಿ ಪ್ರಿನ್ಸ್ 864ನೇ ಅಂಕ ಪಡೆದುಕೊಂಡಿದ್ದರು. ಇದಾದ ಬಳಿಕ ಜೈಬೀರ್ ಗೆ ಅಕ್ಟೋಬರ್ 27 ರಂದು ಸಿವಿಲ್ ಎಂಜಿನಿಯರಿಂಗ್ ಕೋರ್ಸ್‌ನಲ್ಲಿ ಸೀಟು ಪಡೆದುಕೊಂಡರು. ಆನ್‌ಲೈನ್ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಐಐಟಿ ಬಾಂಬೆಯ ಪೋರ್ಟಲ್ ಅಕ್ಟೋಬರ್ 31 ರವರೆಗೆ ತೆರೆದಿತ್ತು. ಈ ಸಮಯದಲ್ಲಿ, ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸಬೇಕು ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕೆಂದು ಸೂಚಿಸಲಾಗಿತ್ತು. ಅದರಂತೆ ಅಕ್ಟೋಬರ್ 29 ರಂದು ಜೈಬೀರ್, ಐಐಟಿ ಪೋರ್ಟಲ್‌ಗೆ ಲಾಗ್ ಇನ್ ಮಾಡಿ ಅಗತ್ಯ ದಾಖಲೆ ಅಪ್‌ಲೋಡ್ ಮಾಡಿದ್ದರು. ಆದರೆ, ಹಣದ ಕೊರತೆಯಿಂದ ಶುಲ್ಕ ಪಾವತಿಸಲು ಸಾಧ್ಯವಾಗಲಿಲ್ಲ. ಜೈಬೀರ್ ತನ್ನ ಸಹೋದರಿಯಿಂದ ಹಣ ಪಡೆದು ಅಕ್ಟೋಬರ್ 30 ರಂದು ಶುಲ್ಕ ಪಾವತಿ ಮಾಡಲು ಮುಂದಾಗುತ್ತಾನೆ. ಆದರೆ 10ರಿಂದ 12 ಬಾರಿ ಪ್ರಯತ್ನಿಸಿದ್ರೂ ತಾಂತ್ರಿಕ ಸಮಸ್ಯೆಯಿಂದ ಅದು ಸಾಧ್ಯವಾಗಲಿಲ್ಲ. ತನ್ನ ಛಲ ಬಿಡದ ಜೈಬಿರ್, ಅಕ್ಟೋಬರ್ 31 ರಂದು ಸೈಬರ್ ಕೆಫೆಗೆ ತೆರಳಿ ಪ್ರಯತ್ನಿಸಿದರೂ ತಾಂತ್ರಿಕ ಸಮಸ್ಯೆ ಮುಂದುವರಿದಿತ್ತು.
ಇದಾದ ಬಳಿಕ ಜೈಬೀರ್, ಅಕ್ಟೋಬರ್ 31 ಹಾಗೂ ನವೆಂಬರ್ 1ರ ನಡುವೆ ಹಲವಾರು ಬಾರಿ ಇನ್ಸ್ಟಿಟ್ಯೂಟ್ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಇದರಲ್ಲೂ ಆತ ಸಫಲನಾಗಲಿಲ್ಲ. ನಂತರ ವಿದ್ಯಾರ್ಥಿ, ಅಲಹಾಬಾದ್‌ನಿಂದ ಖರಗ್‌ಪುರದ ಸೆಂಟ್ರಲಾಯ್ಸಡ್ ಅಡ್ಮಿಶನ್ ಅಥಾರಿಟಿ ಅಧಿಕಾರಿಗಳನ್ನು ಭೇಟಿ ಮಾಡುತ್ತಾನೆ. ಅಲ್ಲಿಯೂ ಫಲ ಸಿಗುವುದಿಲ್ಲ. ಇದಾದ ನಂತರ ವಿದ್ಯಾರ್ಥಿ ಬಾಂಬೆಗೆ ಹೋಗಿ ಅಲ್ಲಿನ ಹೈಕೋರ್ಟ್‌ನ ಸಹಾಯವನ್ನು ಕೋರುತ್ತಾನೆ. ಆದರೆ, ಈ ವಿಷಯದಲ್ಲಿ ಯಾವುದೇ ನಿರ್ದೇಶನ ನೀಡಲು ಹೈಕೋರ್ಟ್ ನಿರಾಕರಿಸುತ್ತದೆ. ಬಾಂಬೆ ಹೈಕೋರ್ಟ್ ಅರ್ಜಿಯನ್ನು ಆಲಿಸಲು ನಿರಾಕರಿಸಿದ್ದರಿಂದ ಸುಪ್ರೀಂ ಕೋರ್ಟ್ ಈಗ ಅವರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತು. ಅಲ್ಲದೆ ಸಂವಿಧಾನದ 142 ನೇ ವಿಧಿಯನ್ನು ಬಳಸಿ ವಿದ್ಯಾರ್ಥಿಗೆ ನೋಂದಣಿ ಮಾಡಿಸಲು ಆದೇಶ ನೀಡಿದೆ.
ಸಂವಿಧಾನದ 142ನೇ ವಿಧಿಯ ವಿಶೇಷತೆ ಏನು? : ಆರ್ಟಿಕಲ್ 142 ರ ಅಡಿಯಲ್ಲಿ ವಿಶೇಷ ಪ್ರಕರಣಗಳಲ್ಲಿ ಯಾವುದೇ ಕಾನೂನನ್ನು ಮಾಡದಿದ್ದರೂ ಸಂಪೂರ್ಣ ನ್ಯಾಯದ ವ್ಯಾಖ್ಯಾನದ ಅಡಿಯಲ್ಲಿ, ಉನ್ನತ ನ್ಯಾಯಾಲಯವು ಆರ್ಟಿಕಲ್ 142 ಅನ್ನು ಬಳಸಿಕೊಂಡು ಆದೇಶ ನೀಡಬಹುದು. ರಾಮಮಂದಿರ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ಈ ಅಧಿಕಾರ ಬಳಸಿ ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಭೂಮಿ ಮಂಜೂರು ಮಾಡುವಂತೆ ಆದೇಶ ಹೊರಡಿಸಿತ್ತು.
Excellent judgement