ಬೆಂಗಳೂರು: ಇದೀಗ ಸೌಜನ್ಯ ಹತ್ಯೆ ಕೇಸ್ ಡಿಸಿಎಂ ಡಿಕೆ ಶಿವಕುಮಾರ್ ಅಂಗಳಕ್ಕೆ ತಲುಪಿದ್ದೂ, ಆಕೆಯ ಅತ್ಯಾಚಾರ ಹಾಗೂ ಕೊಲೆ ಕೇಸ್ನಲ್ಲಿ ನ್ಯಾಯ ಕೊಡಿಸುಸವಂತೆ ಡಿಸಿಎಂಗೆ ಸೌಜನ್ಯ ತಾಯಿ ಕುಸುಮಾವತಿ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ನಿನ್ನೆ ಧರ್ಮಸ್ಥಳಕ್ಕೆ ಬಂದಿದ್ದ ಡಿಕೆಶಿ, ಬಳಿಕ ಗುರುವಾಯನಕೆರೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಹತ್ಯೆ
ಈವೇಳೆ ಸೌಜನ್ಯ ತಾಯಿ ಕುಸುಮಾವತಿ ಡಿಕೆಶಿ ರನ್ನ ಭೇಟಿಯಾಗಿ, ತನ್ನ ಮಗಳಿಗೆ ನ್ಯಾಯ ಕೊಡಿಸುವಂತೆ ಬೇಡಿಕೊಂಡರು. “13 ವರ್ಷದಿಂದ ನ್ಯಾಯ ಸಿಕ್ಕಿಲ್ಲ ಸಾರ್, ನೀವೇ ನಮಗೆ ನ್ಯಾಯ ಕೊಡಿಸ್ಬೇಕು ಸರ್” ಎಂದು ಕುಸುಮಾವತಿ ಡಿಸಿಎಂ ಡಿಕೆಶಿ ಮುಂದೆ ಕಣ್ಣೀರಿಟ್ಟರು.
ಇದನ್ನೂ ನೋಡಿ: ಬಿಸಿಸಿಐ 2024-25 ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟ – ಟಾಪ್ ಗ್ರೇಡ್ನಲ್ಲಿ ರೋಹಿತ್, ವಿರಾಟ್, ಬುಮ್ರಾ
ಈ ವೇಳೆ ಸೌಜನ್ಯ ತಾಯಿಗೆ ಡಿಕೆಶಿ ಸಾಂತ್ವನದ ಜೊತೆ ಬುದ್ಧಿಮಾತು ಹೇಳಿದ್ದಾರೆ. “ಅಳಲು ಹೋಗಬೇಡಿ” ಎಂದು ಸೌಜನ್ಯ ತಾಯಿಗೆ ಸಾಂತ್ವನ ಹೇಳಿದ ಡಿಕೆಶಿ, “ಬೇರೆ ಯಾವುದೇ ರಾಜಕೀಯದವರ ಜೊತೆ ಸೇರಬೇಡಿ” ಎಂದು ಬುದ್ಧಿಮಾತು ಹೇಳಿದ್ದಾರೆ. ಬಳಿಕ ಹೈಕೋರ್ಟ್ ಆರ್ಡರ್ ತರಿಸಿಕೊಡಿ ಪರಿಶೀಲಿಸ್ತೀನಿ, ಬೆಂಗಳೂರಿಗೆ ಬಂದು ಕೊಡಿ ಎಂದು ಡಿಸಿಎಂ ಡಿಕೆಶಿ ಸೂಚನೆ ಕೊಟ್ಟಿದ್ದಾರೆ.
ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಎದುರು ಸೌಜನ್ಯ ತಾಯಿ ಜಾತಿ ದಾಳ ಪ್ರಯೋಗಿಸಿದ್ದಾರೆ. ನಾವೂ ಗೌಡರು, ನೀವು ಗೌಡರು, ನೀವು ಗೌಡ ಸಮುದಾಯಕ್ಕಾಗಿ ಇಲ್ಲಿಗೆ ಬಂದಿದ್ದೀರಿ, ನಮಗೆ ನೀವೇ ನ್ಯಾಯ ಕೊಡಿಸ್ಬೇಕು ಎಂದು ಡಿಸಿಎಂ ಡಿಕೆಶಿ ಮುಂದೆ ಜಾತಿ ದಾಳ ಉರುಳಿಸಿದ್ದಾರೆ.
ಇದನ್ನೂ ನೋಡಿ: Use of this & that | English grammar Janashakthi Media