ಸತತ 46 ದಿನಗಳು ಜನರಿಗೆ ಪೌಷ್ಠಿಕ ಆಹಾರ ವಿತರಣೆ

ಬೆಂಗಳೂರು: ಕೋವಿಡ್‌ 2ನೇ ಅಲೆಯನ್ನು ಸರಕಾರ ಜಾರಿಗೊಳಿಸಿ 54 ದಿನಗಳ ಲಾಕ್‌ಡೌನ್‌ ಜಾರಿಯಿಂದ ದಿನನಿತ್ಯದ ಜೀವನ ನಿರ್ವಹಣೆ ಕಠಿಣವಾಗಿರುವ ಸಂದರ್ಭದಲ್ಲಿ ವಿವಿದೆಡೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗಿದೆ. ಅದೇ ರೀತಿಯಲ್ಲಿ ನಗರದ ಆಗ್ರಹಾರ ದಾಸರಹಳ್ಳಿ ಪ್ರದೇಶದಲ್ಲಿ ಜನರಿಗೆ ಸತತ 46 ದಿನಗಳು ಪೌಷ್ಠಿಕ ಆಹಾರವನ್ನು ವಿತರಣೆ ಮಾಡಲಾಗಿದೆ.

ರಂಗಭೂಮಿ ಹಾಗೂ ಕಿರುತೆರೆ ನಟರಾದ ರವಿಕಾಂತ್‌ ಮತ್ತು ಅವರ ಸ್ನೇಹಿತರ ತಂಡವು ಪ್ರತಿನಿತ್ಯ ಯುವ ಬೆಂಗಳೂರು ಸಹಭಾಗಿತ್ವ ದಲ್ಲಿ 200 ಕುಟುಂಬಕ್ಕೆ ವಿಧವಿಧವಾದ ಆಹಾರ ಕಿಟ್‌ಗಳನ್ನು ವಿತರಣೆ ಮಾಡಿದ್ದಾರೆ.

ಭಾನುವಾರದಂದು ವಿಷೇಶವಾಗಿ ಆಹಾರ ಪದಾರ್ಥಗಳೊಂದಿಗೆ,  ಹಾಲು, ಮೊಸರು, ಮೊಟ್ಟೆ ,ಬಿಸ್ಕತ್, ಬಾಳೆಹಣ್ಣು, ಮಾವಿನ ಹಣ್ಣು,ಬಾಳೆಹಣ್ಣು ಚೇಪೆಕಾಯಿ ಸೇರಿದಂತೆ ಪೌಷ್ಟಿಕ ಆಹಾರವನ್ನು ವಿತರಣೆ ಮಾಡಿದ್ದಾರೆ. ಹೀಗೆ 300 ಕುಟುಂಬಗಳಿಗೆ ಐದು ಭಾನುವಾರಗಳಂದು ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ.

ರವಿಕಾಂತ್‌ ಅವರು ತಿಳಿಸಿದಂತೆ ʻʻಪ್ರತಿದಿನ  ಹಲವಾರು ರೀತಿಯಲ್ಲಿ ಜನಸಾಮಾನ್ಯರಿಗೆ ಸಹಾಯ ಆಗುವ ರೀತಿಯಲ್ಲಿ ನಮ್ಮ ಕೈಲಾದ ಮಟ್ಟಿಗೆ ಜನರಿಗೆ ನೆರವನ್ನು ನಮ್ಮ ತಂಡವು ಸಕ್ರಿಯವಾಗಿ ಮಾಡಿತ್ತಾ ಬಂದಿದ್ದೇವೆ. ಪ್ರತಿದಿನ ವಿತರಣೆ ಮಾಡಿಕೊಂಡು ಬರಲಾಗಿದೆ. ಅದರಲ್ಲೂ 25 ಜನ ತೃತೀಯ ಲಿಂಗಿಗಳಿಗೂ ಆಹಾರದ ಕಿಟ್‌ ವಿತರಣೆ ಮಾಡಿದ್ದೇವೆ. ಮುಖ್ಯವಾಗಿ ನಾವು ಮತ್ತು ನಮ್ಮ ಸ್ನೇಹಿತರ ತಂಡ ಯಾವುದೇ ಸಂಘ, ಸಂಸ್ಥೆಗಳ ಹೆಸರನ್ನು ಬಳಸಿಕೊಂಡಿಲ್ಲ. ಯಾವುದೇ ರಾಜಕಾರಣಿಯಿಂದ ಹಣವನ್ನು ಪಡೆಯದೆ, ನಮ್ಮದೇ ಆದ ಇತಿಮಿತಿಯಲ್ಲಿ ಸಹಾಯವನ್ನು ಮಾಡಲಾಗಿದೆʼʼ ಎಂದು ತಿಳಿಸಿದರು.

ಇತ್ತೀಚಿಗೆ ಕೊನೆಯ ದಿನದಂದು ಸುಮಾರು ಆರು ಟನ್‌ಗಳಷ್ಟು ತರಕಾರಿಗಳನ್ನು ಒಂದು ಸಾವಿರ ಕುಟುಂಬಗಳಿಗೆ ತಲಾ ಆರು ಕೆ.ಜಿ.ಯಷ್ಟು ಸಾಮಗ್ರಿಯನ್ನು ವಿತರಣೆ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *